ಬಳ್ಳಾರಿ: ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಮೇ 3 ರಿಂದ 8ರವರೆಗೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹಗರಿ ಕೃಷಿ ವಿಜ್ಞಾನ ಕೇಂದ್ರ ಮಾಹಿತಿ ನೀಡಿದೆ.
ಮುಂದಿನ 5 ದಿನಗಳ ಕಾಲ ಗಾಳಿಯ ವೇಗ ಹೆಚ್ಚಲಿದ್ದು ಗಂಟೆಗೆ ಅಂದಾಜು 30-40 ಕಿಲೋ ಮೀಟರ್ ಇರಲಿದೆ. ಮೇ 5ರಿಂದ ಕರಾವಳಿ ಭಾಗದಲ್ಲಿ ಯಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ. ಅಲ್ಲಲ್ಲಿ 64.5 ಮಿಲಿ ಮೀಟರ್ಗಿಂತಲೂ ಹೆಚ್ಚು ಮಳೆಯಾಗಲಿದೆ.
ಮಧ್ಯಾಹ್ನದ ಸಮಯದಲ್ಲಿ ಹೆಚ್ಚು ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಕೃಷಿ ಚಟುವಟಿಕೆಗಳನ್ನು ಆದಷ್ಟು ಬೆಳಗ್ಗಿನ ಸಮಯದಲ್ಲೇ ಕೈಗೊಳ್ಳಿ ಎಂದು ಜಿಲ್ಲೆಯ ರೈತರಿಗೆ ಹಗರಿ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಪ್ರತಾಪ್ ಗೌಡ ಪಾಟೀಲ್ ಸಚಿವ ಸ್ಥಾನದ ಕನಸು ಭಗ್ನ: ರಾಜಕೀಯ ಭವಿಷ್ಯವೇನು?