ಬಳ್ಳಾರಿ: ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಇಂದಿನಿಂದ ಮುಂದಿನ ಐದು ದಿನಗಳ ಕಾಲ ಮಳೆ ಸುರಿಯಲಿದೆ ಎಂದು ಹಗರಿ ಕೃಷಿ ವಿಜ್ಞಾನ ಕೇಂದ್ರದ ಜಿಲ್ಲಾ ಕೃಷಿ ಹವಾಮಾನ ಘಟಕ ತಿಳಿಸಿದೆ.
- ಜೂನ್ 5ರಂದು ಬಳ್ಳಾರಿ ತಾಲೂಕಿನಲ್ಲಿ 55.6, ಹಡಗಲಿ 6.5, ಹಗರಿಬೊಮ್ಮನಹಳ್ಳಿ 10.8, ಹರಪನಹಳ್ಳಿ 10.7, ಹೊಸಪೇಟೆ 7.7, ಕೂಡ್ಲಿಗಿ 15.3, ಸಂಡೂರು 19.3 ಮತ್ತು ಸಿರುಗುಪ್ಪದಲ್ಲಿ 18.4 ಮಿಲಿ ಮೀಟರ್ನಷ್ಟು ಮಳೆ ಸಾಧ್ಯತೆ.
- ಜೂನ್ 6ರಂದು ಬಳ್ಳಾರಿ ತಾಲೂಕಿನಲ್ಲಿ 0.3, ಹಡಗಲಿ 0.5, ಹಗರಿಬೊಮ್ಮನಹಳ್ಳಿ 1.6, ಹರಪನಹಳ್ಳಿ 1.4, ಹೊಸಪೇಟೆ 4.3, ಕೂಡ್ಲಿಗಿ 2.6 ಹಾಗೂ ಸಂಡೂರಿನಲ್ಲಿ 10.7 ಮಿಲಿ ಮೀಟರ್ನಷ್ಟು ಮಳೆ ಸಾಧ್ಯತೆ.
- ಜೂನ್ 7ರಂದು ಬಳ್ಳಾರಿ ತಾಲೂಕಿನಲ್ಲಿ 0.1, ಹಡಗಲಿ11.7, ಹಗರಿಬೊಮ್ಮನಹಳ್ಳಿ 8.2, ಹರಪನಹಳ್ಳಿ 11.5, ಹೊಸಪೇಟೆ 6.1, ಕೂಡ್ಲಿಗಿ 9, ಸಂಡೂರಿನಲ್ಲಿ 14.4 ಮಿಲಿ ಮೀಟರ್ನಷ್ಟು ಮಳೆ ಸಾಧ್ಯತೆ.
- ಜೂನ್ 8ರಂದು ಹಡಗಲಿ ತಾಲೂಕಿನಲ್ಲಿ 4.8, ಹರಪನಹಳ್ಳಿ 5.1, ಕೂಡ್ಲಿಗಿ 0.3, ಸಂಡೂರಿನಲ್ಲಿ 3.1 ಮಿಲಿ ಮೀಟರ್ನಷ್ಟು ಮಳೆ ಸಾಧ್ಯತೆ.
- ಜೂನ್ 9ರಂದು ಹಡಗಲಿ ತಾಲೂಕಿನಲ್ಲಿ 0.1 ಹಾಗೂ ಸಂಡೂರು ತಾಲೂಕಿನಲ್ಲಿ 0.2 ಮಿಲಿ ಮೀಟರ್ನಷ್ಟು ಮಳೆ ಸಾಧ್ಯತೆಯಿದೆ ಎಂದು ಜಿಲ್ಲಾ ಕೃಷಿ ಹವಾಮಾನ ಇಲಾಖೆ ತಿಳಿಸಿದೆ.
ಓದಿ: ಕೋವಿಡ್ನಿಂದ ಗುಣಮುಖರಾದ ಮೇಲೆ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ದೆಹಲಿ ಜನತೆ!