ಬಳ್ಳಾರಿ: ಗಣಿನಾಡು ಬಳ್ಳಾರಿ ಹಾಗು ವಿಜಯನಗರ ಜಿಲ್ಲೆಗಳಲ್ಲಿ ಇಂದಿನಿಂದ ಮುಂದಿನ ಐದು ದಿನಗಳ ಕಾಲ ಮಳೆ ಸುರಿಯಲಿದೆ ಎಂದು ಹಗರಿ ಕೃಷಿ ವಿಜ್ಞಾನ ಕೇಂದ್ರದ ಜಿಲ್ಲಾ ಕೃಷಿ ಹವಾಮಾನ ಘಟಕ ತಿಳಿಸಿದೆ.
ಮೇ 12ರಂದು ಬಳ್ಳಾರಿ ತಾಲೂಕಿನಲ್ಲಿ 2.1, ಹಡಗಲಿ 5.2, ಹಗರಿ ಬೊಮ್ಮನಹಳ್ಳಿ 8.9, ಹರಪನಹಳ್ಳಿ 16.2, ಹೊಸಪೇಟೆ 5.4, ಕೂಡ್ಲಿಗಿ 14.8, ಸಂಡೂರು 14.7 ಮಿಲಿ ಮೀಟರ್ನಷ್ಟು ಮಳೆಯಾಗಲಿದೆ.
ಮೇ 13ರಂದು ಬಳ್ಳಾರಿ 10.2, ಹಡಗಲಿ 1.6, ಹಗರಿ ಬೊಮ್ಮನಹಳ್ಳಿ 3.5, ಹರಪನಹಳ್ಳಿ 6.2, ಹೊಸಪೇಟೆ 3.6, ಕೂಡ್ಲಿಗಿ 3.9, ಸಂಡೂರು 20.1 ಹಾಗು ಸಿರುಗುಪ್ಪದಲ್ಲಿ 2.1 ಮಿಲಿ ಮೀಟರ್ನಷ್ಟು ಮಳೆ ಸಾಧ್ಯತೆ.
ಮೇ 14ರಂದು ಬಳ್ಳಾರಿ 0.1, ಹಡಗಲಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಹೊಸಪೇಟೆ, ಕೂಡ್ಲಿಗಿ ತಾಲೂಕುಗಳಲ್ಲಿ ಮಳೆಯ ವಾತಾವರಣ ಇದ್ದರೂ ಮಳೆಯಾಗುವ ಸಾಧ್ಯತೆ ಕಡಿಮೆಯಿದೆ. ಸಂಡೂರು 1.9 ಹಾಗು ಸಿರುಗುಪ್ಪ ತಾಲೂಕಿನಲ್ಲಿ 2.3 ಮಿ.ಮೀಟರ್ನಷ್ಟು ಮಳೆಯಾಗುವ ಸಾಧ್ಯತೆ ಇದೆ.
ಮೇ 15 ಮತ್ತು 16ರಂದು ಮಳೆಯ ಮುನ್ಸೂಚನೆ ಇದ್ದರೂ ಮಳೆಯಾಗುವ ಸಂಭವ ಕಡಿಮೆ ಎಂದು ಇಲಾಖೆ ತಿಳಿಸಿದೆ.
ಇದನ್ನೂ ಓದಿ: 2 ವರ್ಷದ ಮಕ್ಕಳ ಮೇಲೆ ಕೋವಾಕ್ಸಿನ್ ಲಸಿಕೆ ಪ್ರಯೋಗಕ್ಕೆ ತಜ್ಞರ ಸಮಿತಿ ಶಿಫಾರಸು