ಬಳ್ಳಾರಿ: ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಇಂದಿನಿಂದ ಮುಂದಿನ ನಾಲ್ಕು ದಿನಗಳ ಕಾಲ ಒಣಹವೆ ಇರಲಿದ್ದು, ವಾರಾಂತ್ಯದಲ್ಲಿ ಮಳೆಯಾಗಲಿದೆಯೆಂದು ಹಗರಿ ಕೃಷಿ ವಿಜ್ಞಾನ ಕೇಂದ್ರದ ಜಿಲ್ಲಾ ಕೃಷಿ ಹವಾಮಾನ ಘಟಕ ತಿಳಿಸಿದೆ.
ಜೂನ್ 9, 10, 11 ಹಾಗೂ 12ರಂದು ಉಭಯ ಜಿಲ್ಲೆಗಳಲ್ಲಿ ಒಣಹವೆ ಜಾಸ್ತಿ ಇರಲಿದ್ದು, ಈ ನಾಲ್ಕು ದಿನಗಳಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯವನ್ನು ರೈತರು ಮುಂದೂಡುವುದು ಸೂಕ್ತವೆಂದು ಹವಾಮಾನ ಕೃಷಿ ಘಟಕ ತಿಳಿಸಿದೆ.
ಈ ವಾರದ ಕೊನೆಯಲ್ಲಿ ಅಂದರೆ ಜೂನ್ 13 ರಂದು ಬಳ್ಳಾರಿ ತಾಲೂಕಿನಲ್ಲಿ 5.7, ಹಡಗಲಿ 2.6, ಹಗರಿಬೊಮ್ಮನಹಳ್ಳಿ 3.5, ಹರಪನಹಳ್ಳಿ 2.9, ಹೊಸಪೇಟೆ 3.1, ಕೂಡ್ಲಿಗಿ 5.3, ಸಂಡೂರು 6.4, ಸಿರುಗುಪ್ಪ 9.5 ಮಿಲಿ ಮೀಟರ್ನಷ್ಟು ಮಳೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಎಲ್ಲಿಗೀ ಪಯಣ? ಗಜಪಡೆಯ 500 ಕಿ.ಮೀ ಮಹಾ ಪಲಾಯನದ ಮೇಲೆ 410 ಜನರ ಕಣ್ಣು