ETV Bharat / city

ಅಖಂಡ ಬಳ್ಳಾರಿ ಜಿಲ್ಲಾ ಹೋರಾಟಕ್ಕೆ ಪೊಲೀಸರಿಂದ ಅಡ್ಡಿ ಆರೋಪ: ಪ್ರತಿಭಟನಾಕಾರರ ಆಕ್ರೋಶ - Division of Bellary District

ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ಖಂಡಿಸಿ ಕೆಲ ಸಂಘಟನೆಗಳ ಕಾರ್ಯಕರ್ತರು ನ್ಯಾಯಯುತವಾಗಿ ಹೋರಾಟ ಮಾಡುತ್ತಿದ್ದಾಗ ಬ್ರೂಸ್ ಪೇಟೆಯ ಸಿಪಿಐ ನಾಗರಾಜ ನೇತೃತ್ವದ ಪೊಲೀಸರ ತಂಡ ತಾಡಪಾಲ್ ಅನ್ನು ಕಿತ್ತುಕೊಂಡು ಬಂದಿದ್ದಾರೆ ಎಂದು ಕಾರ್ಯಕರ್ತರು ಆರೋಪಿದ್ದಾರೆ.

ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ
ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ
author img

By

Published : Dec 14, 2020, 1:05 PM IST

ಬಳ್ಳಾರಿ: ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ಖಂಡಿಸಿ ಇಂದು ಕನ್ನಡ ಪರ, ರೈತ ಸಂಘಟನೆಗಳು ಕರೆ ನೀಡಿದ್ದ ಹೋರಾಟಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಅಡ್ಡಿಪಡಿಸಿದೆ ಎನ್ನುವ ಆರೋಪ ಕೇಳಿಬಂದಿದೆ.

ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ

ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ತಾತ್ಕಾಲಿಕ ಟೆಂಟ್ ನಿರ್ಮಿಸಿಕೊಂಡು ನ್ಯಾಯಯುತವಾಗಿ ಹೋರಾಟ ಮಾಡುತ್ತಿದ್ದಾಗ ಬ್ರೂಸ್ ಪೇಟೆಯ ಸಿಪಿಐ ನಾಗರಾಜ ನೇತೃತ್ವದ ಪೊಲೀಸ್​ ಸಿಬ್ಬಂದಿ ತಂಡ ತಾಡಪಾಲ್ ಅನ್ನು ಕಿತ್ತುಕೊಂಡು ಬಂದಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದ್ದು, ಬ್ರೂಸ್ ಪೇಟೆ ಠಾಣೆ ಎದುರು ಕೆಲಕಾಲ ಘೋಷಣೆ ಕೂಗಿ ಪೊಲೀಸರ ವರ್ತನೆಯನ್ನು ಖಂಡಿಸಿದರು.

ನಂತರ ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಸಿಪಿಐ ನಾಗರಾಜ ಅವರು, ಪ್ರತಿಭಟನೆ ನಡೆಸಲು ನಾವು ಅನುಮತಿ ಕೊಡುವುದಿಲ್ಲ, ಮಹಾನಗರ ಪಾಲಿಕೆಯವರು ಪರವಾನಗಿ ಕೊಡುತ್ತಾರೆ. ನೀವು ಮೊದಲೇ ಅನುಮತಿ ಕೇಳಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಹಿರಿಯ ಹೋರಾಟಗಾರ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಹೌದು, ನಾವು ಪರವಾನಿಗೆ ಪಡೆದಿಲ್ಲ, ನೀವು ಸುಮೋಟೋ ಕೇಸ್ ಬುಕ್ ಮಾಡುವುದಾದರೆ ಮಾಡಿ, ನಾವು ಹೋರಾಟ ಮಾಡೇ ತೀರುತ್ತೇವೆ ಎಂದು ಸವಾಲು ಹಾಕಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.