ಬಳ್ಳಾರಿ: ಕೇಂದ್ರ ಸರ್ಕಾರದಲ್ಲಿ ರೈಲ್ವೆ ಖಾತೆಯ ರಾಜ್ಯ ಸಚಿವರಾದ ಬಳಿಕ ಸುರೇಶ ಅಂಗಡಿಯವರು ಕಳೆದ 2019ರ ಡಿಸೆಂಬರ್ 17ರಂದು ಗಣಿ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭ ಕ್ಷಣಗಳು ಛಾಯಾಚಿತ್ರದಲ್ಲಿ ಸೆರೆಯಾಗಿವೆ.

ರೈಲ್ವೆ ಸಚಿವ ಸುರೇಶ ಅಂಗಡಿ, ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಒಂಭತ್ತು ತಿಂಗಳು ಕಳೆದಿವೆ. ಕಳೆದ 2019ರ ವರ್ಷಾಂತ್ಯದಲ್ಲಿ ಭೇಟಿ ನೀಡಿದ್ದ ಅವರು ಹೊಸಪೇಟೆ- ಕೊಟ್ಟೂರು - ಹರಿಹರ- ದಾವಣಗೆರೆ ಮಾರ್ಗದ ನೂತನ ರೈಲಿಗೆ ಚಾಲನೆ ನೀಡಿದ್ದರು.

ಇದಲ್ಲದೇ, ಅದೇ ರೈಲಿನಲ್ಲಿ ಬಳ್ಳಾರಿ ಸಂಸದ ದೇವೇಂದ್ರಪ್ಪ ಜೊತೆಗೆ ಕೊಟ್ಟೂರು ನಿಲ್ದಾಣದವರೆಗೆ ಸಚಿವ ಸುರೇಶ ಅಂಗಡಿ ಪ್ರಯಾಣ ಬೆಳೆಸಿದ್ದರು. ಬಳಿಕ ಕೊಟ್ಟೂರಿನಲ್ಲಿ ಇಳಿದು ಕೊಟ್ಟೂರೇಶ್ವರ ಸ್ವಾಮಿಯ ದರ್ಶನ ಪಡೆದಿದ್ದರು.
