ಬಳ್ಳಾರಿ: ಜೆಸಿಐ ಸಂಸ್ಥೆಯು ಝೂಮ್ ಆ್ಯಪ್ ಮೂಲಕ ಆಯೋಜಿಸಿದ್ದ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ 50ಕ್ಕೂ ಹೆಚ್ಚು ಯೋಗಪಟುಗಳು ಭಾಗವಹಿಸುವ ಮೂಲಕ ವಿಶ್ವ ಯೋಗ ದಿನಾಚರಣೆ ಆಚರಿಸಿದರು.
ಯೋಗಪಟುಗಳು ತಮ್ಮ ಮನೆಯಿಂದಲೇ ನಾನಾ ಭಂಗಿಗಳನ್ನು ಪ್ರದರ್ಶಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಬಳ್ಳಾರಿಯ ಸರ್ಕಾರಿ ಶಾಲೆ ಶಿಕ್ಷಕ ಮಸೂದಿಪುರ ಪಂಪನಗೌಡ, ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದರಿಂದ ಮನೋಲ್ಲಾಸ ಹೆಚ್ಚಲಿದೆ. ಯೋಗದಿಂದ ನೆಮ್ಮದಿಯ ಜೀವನ ಸಾಗಿಸಬಹುದು. ಮಹಾಮಾರಿ ಕೊರೊನಾ ಸೋಂಕನ್ನು ಕೂಡ ತಡೆಗಟ್ಟಬಹುದು ಎಂದರು.
ನಿಯಮ ಉಲ್ಲಂಘನೆ
ಬಳ್ಳಾರಿಯ ಗುಗ್ಗರಹಟ್ಟಿ ವ್ಯಾಪ್ತಿಯಲ್ಲಿ ಬರುವ ಶ್ರೀಶೈಲ ಮಲ್ಲಿಕಾರ್ಜುನ ಮಠದ ಆವರಣದಲ್ಲಿಂದು ಬಿಜೆಪಿ ನಗರ ಘಟಕದಿಂದ ಆಯೋಜಿಸಿದ್ದ ಯೋಗಾಭ್ಯಾಸ ಶಿಬಿರದಲ್ಲಿ ಎಸ್ಒಪಿ ಪಾಲನೆಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಸಾಮೂಹಿಕ ಯೋಗಾಭ್ಯಾಸ ನಿಷೇಧಿಸಿ ಕೇಂದ್ರಸರ್ಕಾರ ಆದೇಶ ಹೊರಡಿಸಿದೆ. ಆದರೂ ಕೂಡ ಬಿಜೆಪಿ ನಗರ ಘಟಕದ ಸದಸ್ಯರು ನಿಯಮ ಉಲ್ಲಂಘಿಸಿ, ಸಾಮೂಹಿಕ ಯೋಗಾಭ್ಯಾಸ ಮಾಡಿದ್ದಾರೆ.
![Bellary](https://etvbharatimages.akamaized.net/etvbharat/prod-images/12207863_thu.jpg)
ಇದನ್ನೂ ಓದಿ: 'ಜಲಯೋಗ'ದ ಮೂಲಕ ಆರೋಗ್ಯ ಸಂದೇಶ ಸಾರುತ್ತಿರುವ ಕಲಬುರಗಿಯ ಯೋಗಪಟು