ವಿಜಯನಗರ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಎಂ.ಬಿ ಅಯ್ಯನಹಳ್ಳಿಯಲ್ಲಿ ರಸ್ತೆದಾಟುತ್ತಿರುವಾಗ ಲಾರಿಯೊಂದು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ವ್ಯಕ್ತಿ ಸಾವನ್ನಪಿರುವ ಘಟನೆ ನಡೆದಿದೆ.
ಅಯ್ಯನಹಳ್ಳಿಯ ಎಂ. ಪಾಪಣ್ಣ (60) ಮೃತ ವ್ಯಕ್ತಿ. ರಸ್ತೆ ಅಪಘಾತ ಹಿನ್ನೆಲೆ ಮೃತನ ಸಂಬಂಧಿಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆ ಎನ್.ಹೆಚ್ 50 ರಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದ್ದು, ಕೆಲಕಾಲ ವಾಹನ ಸವಾರರು ಪರದಾಡುವಂತಾಯಿತು.
ಇನ್ನು ಸ್ಥಳಕ್ಕೆ ಕೂಡ್ಲಿಗಿಯ ಸಿಪಿಐ, ಕಾನಾಹೊಸಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಮತ್ತು ಸಿಬ್ಬಂದಿ ಭೇಟಿ ನೀಡಿ, ಪರೀಶಿಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.