ಬಳ್ಳಾರಿ: ರಾಜ್ಯಾದ್ಯಂತ ಮೇ 1ರಿಂದ ಹಿಂಗಾರು ಜೋಳ ಖರೀದಿ ಕೇಂದ್ರ ತೆರೆಯಲಾಗಿದೆ. ಆದರೆ, ಬಳ್ಳಾರಿ ತಾಲೂಕಿನಲ್ಲಿ ಈವರೆಗೂ ಕೇವಲ 250 ಕ್ವಿಂಟಲ್ ಮಾತ್ರ ಖರೀದಿ ಮಾಡಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಆರ್ ಮಾಧವ ರೆಡ್ಡಿ ಆರೋಪಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಮೇ 1ರಿಂದ ಹಿಂಗಾರು ಜೋಳ ಖರೀದಿ ಕೇಂದ್ರವನ್ನು ಪ್ರಾರಂಭ ಮಾಡಿದ್ದಾರೆ. ಆದರೆ, ಬಳ್ಳಾರಿ ಮತ್ತು ಸಿರುಗುಪ್ಪ ತಾಲೂಕಿನಲ್ಲಿ ಈವರೆಗೂ ಬರೀ 250 ಕ್ವಿಂಟಲ್ ಮಾತ್ರ ಜೋಳ ಖರೀದಿಯಾಗಿದೆ. ಲಕ್ಷಗಟ್ಟಲೇ ಜೋಳ ಬೆಳೆದ ರೈತನ ಪರಿಸ್ಥಿತಿ ಏನಾಗಬೇಕು ಎಂದು ಪ್ರಶ್ನೆ ಮಾಡಿದರು.
ಸಿರುಗುಪ್ಪ ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳಗೆ ಹೋಗಿ ಜೋಳ ಖರೀದಿ ಮಾಡಬೇಕು. ಅದಕ್ಕೆ ಬೇಕಾದ ಎಲ್ಲಾ ಸೌಲಭ್ಯ ಮಾಡಿಕೊಡಿತ್ತೇವೆ ಎಂದು ಹೇಳಿದರು. ತಾಲೂಕಿನ ಗೋವಿಂದ ರೆಡ್ಡಿ ಎನ್ನುವ ಆಹಾರ ಇಲಾಖೆ ಅಧಿಕಾರಿಯೊಬ್ಬ 1 ಕ್ವಿಂಟಲ್‌ಗೆ 4 ಕೆಜಿ ಜೋಳ ಲಂಚ ತೆಗೆದುಕೊಳ್ಳುತ್ತಾನೆ. ರೈತರು ಕೇಳಿದ್ರೇ ಏಕೆ ಗಲಾಟೆ ಮಾಡತ್ತೀರಾ?. 2 ಕ್ವಿಂಟಲ್ ಅಕ್ಕಿ ತೆಗೆದುಕೊಂಡು ಹೋಗಿ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ. ಅಧಿಕಾರಿಗೆ ನಾಚಿಕೆ ಆಗೋದಿಲ್ಲವೇ ಎಂದು ಜಂಟಿ ನಿರ್ದೇಶಕರಿಗೆ ಪ್ರಶ್ನೆ ಮಾಡಿದರು.
ನಂತರ ಮಾತನಾಡಿದ ರೈತ ಲಕ್ಷ್ಮಿಕಾಂತ ರೆಡ್ಡಿ ಅವರು, ಎಕರೆಗೆ 25 ಕ್ವಿಂಟಲ್ ಜೋಳ ಬೆಳೆದಿದ್ದೇನೆ. ಸರ್ಕಾರದ ಖರೀದಿ ಕೇಂದ್ರಕ್ಕೆ ನೋಂದಣಿ ಮಾಡಿಕೊಂಡಿದ್ದೇವೆ. ಪ್ರತಿ ಎಕರೆಗೆ 10 ಕ್ವಿಂಟಲ್ ಜೋಳ ಖರೀದಿ ಮಾಡಬೇಕು. ಆದರೆ, ಖರೀದಿ ವಿಳಂಬ ಮಾಡುತ್ತಾರೆ. ಸರ್ಕಾರ ಜೋಳ ಖರೀದಿ ಮಾಡೋದೆ ಲೇಟ್ ಆದ್ರೇ, ಹಣ ಬರೋದ್ ಯಾವಾಗ, ಈಗ ಮುಂಗಾರು ಆರಂಭವಾಗುತ್ತದೆ, ಏನ್ ಮಾಡೋದು ಸರ್ ತಿಳಿಯುತ್ತಿಲ್ಲ ಎಂದರು. ಈ ಸಮಸ್ಯೆಯನ್ನ ಆದಷ್ಟು ಬೇಗ ಸರ್ಕಾರ ಪರಿಹರಿಸಬೇಕಿದೆ.