ಬಳ್ಳಾರಿ: ಮಹಾನಗರ ಪಾಲಿಕೆ ವ್ಯಾಪ್ತಿಯ ಬಿಸಿಲಹಳ್ಳಿ ಬಳಿಯಿರುವ ರೆನಾಲ್ಟ್ ಶೋರೂಮ್ನಲ್ಲಿ ಹೊಸ ವಿನ್ಯಾಸದಲ್ಲಿ ತಯಾರಿಸಲಾದ ಕೈಗರ್ ಕಾರನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿ ಶೇಖರ್ ಲೋಕಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಆರ್ಟಿಒ ಶೇಖರ್, ಬಳ್ಳಾರಿ ಮಹಾನಗರದಲ್ಲಿ ಜನಸಂಖ್ಯೆ ಹೆಚ್ಚಿದೆ. ಹಳೆ ವಾಹನಗಳ ಬಳಕೆಯಿಂದ ಪರಿಸರ ಹಾಗೂ ವಾಯುಮಾಲಿನ್ಯ ಹೆಚ್ಚುತ್ತಿದೆ. ಇಂತಹ ಹೊಸ ಮಾಡೆಲ್ ಕಾರಿನಿಂದ ವಾಯುಮಾಲಿನ್ಯ, ಮೈಲೇಜ್, ಸೇಫ್ಟಿ ಡ್ರೈವಿಂಗ್ ಅಂತಹ ಸೌಲಭ್ಯಗಳು ಸಿಗುತ್ತವೆ. ಹೀಗಾಗಿ ಈ ಕೈಗರ್ ಕಾರನ್ನು ಬಳ್ಳಾರಿ ಮಹಾನಗರದ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಈ ವೇಳೆ ರೆನಾಲ್ಟ್ ಶೋರೂಮ್ ಡೈರೆಕ್ಟರ್ ಮೇಟ್ರಿ ಅನಿಲ್ ಕುಮಾರ, ಬಳ್ಳಾರಿ ಮೋಟಾರ್ಸ್ ಗ್ರೂಪ್ ಸಿಇಒ ಸಂದೀಪ್, ಸಮೀರ್ ಖಾನ್, ಸಾಗರ ಸೇರಿದಂತೆ ಇತರರಿದ್ದರು.