ETV Bharat / city

ನಾಡೋಜ ಗೌರವ ಪದವಿ ಉಪಾದಿ ಬಳಸದಂತೆ ಹಂಪಿ ವಿವಿ ಆದೇಶ

author img

By

Published : Jun 6, 2022, 12:40 PM IST

ಸಾಮಾನ್ಯವಾಗಿ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಗೌರವ ಡಾಕ್ಟರೆಟ್ ನೀಡಲಾಗುತ್ತದೆ. ಆದರೆ, ಹಂಪಿ ಕನ್ನಡ ವಿಶ್ವವಿದ್ಯಾಲಯ ಡಾಕ್ಟರೆಟ್ ಬದಲಿಗೆ ವಿಶೇಷವಾಗಿ ಪ್ರತೀ ವರ್ಷ ನುಡಿಹಬ್ಬದ ವೇಳೆ ಗಣ್ಯರಿಗೆ ನಾಡೋಜ ಪದವಿ ನೀಡಿ ಗೌರವಿಸುತ್ತದೆ.

Nadoja honoroury award controversy
ನಾಡೋಜ ಗೌರವ ಪದವಿ ಉಪಾದಿ ಬಳಸದಂತೆ ಹಂಪಿ ವಿವಿ ಆದೇಶ

ವಿಜಯನಗರ : ಪಠ್ಯಪುಸ್ತಕ ತೀವ್ರ ವಿವಾದ ಬೆನ್ನಲ್ಲೇ ಇದೀಗ ನಾಡೋಜ ಗೌರವ ಪದವಿ ಉಪಾದಿ ವಿವಾದ ಶುರುವಾದಂತಾಗಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯ ನಾಡೋಜ ಗೌರವ ಪದವಿಯನ್ನು ಪಡೆದವರು ತಮ್ಮ ಹೆಸರಿನ ಮುಂದೆ ಈ ಉಪಾದಿಯನ್ನು ಬಳಸದಂತೆ ನಿಯಮ ಮಾಡಿದ್ದು, ಈ ಮೂಲಕ ನಾಡೋಜ ಪದವಿ ಪಡೆದ ಗಣ್ಯರು ಪದವಿ ವಾಪಸಿಗೆ ನಾಂದಿ ಹಾಡಿದೆ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ.

ಅಷ್ಟಕ್ಕೂ ಇಷ್ಟು ದಿನಗಳ ಕಾಲ ಇಲ್ಲದ ವಿವಾದ ಈಗೇಕೆ ಅನ್ನೋದು ಹಲವರ ಪ್ರಶ್ನೆಯಾದರೆ, ಪದವಿ ಕೊಟ್ಟ ಮೇಲೆ ಅದನ್ನು ನಾವು ಬಳಕೆ ಮಾಡುವುದರಲ್ಲಿ ತಪ್ಪೇನು ಅನ್ನೋದು ಇನ್ನೂ ಕೆಲವರ ವಾದವಾಗಿದೆ. ಇತ್ತೀಚೆಗೆ ನಡೆದ ಹಂಪಿ ಕನ್ನಡ ವಿವಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದೆ.

ಸಮಿತಿ ಸಭೆಯ ನಿರ್ಣಯಕ್ಕೆ ವಿವಿ ಸಿಂಡಿಕೇಟ್ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಹಂಪಿ ವಿವಿಯಿಂದ ನಾಡೋಜ ಗೌರವಕ್ಕೆ ಪಾತ್ರರಾದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಶಿ ಅವರು ಈ ಬಗ್ಗೆ ಕನ್ನಡ ವಿವಿಗೆ ಪತ್ರ ಬರೆದಿದ್ದು, ಹೆಸರಿನ ಜೊತೆಗೆ ನಾಡೋಜ ಬಳಸಬಹುದೇ ಎಂದು ಕೇಳಿದ್ದಾರೆ.

ಈ ಬಗ್ಗೆ ಸಮಗ್ರವಾಗಿ ಚರ್ಚಿಸಿ ಹೆಸರಿನ ಮುಂದೆ ನಾಡೋಜ ಪದ ಬಳಸದಂತೆ ಆದೇಶ ನೀಡಲಾಗಿದೆ. ಡಾಕ್ಟರೆಟ್ ಬದಲಿಗೆ ಹಂಪಿ ವಿವಿ ನಾಡೋಜ ಪ್ರಶಸ್ತಿ ನೀಡುತ್ತದೆ. ಪ್ರತಿ ವರ್ಷ ನಾಡೋಜ ಪದವಿ ನೀಡಿ ಗೌರವಿಸುತ್ತದೆ. ಹಂಪಿ ವಿವಿ ನಿರ್ಣಯದ ಬೆನ್ನಲ್ಲೇ ವಿವಿ ವಿರುದ್ಧ ನಾಡೋಜ ಪುರಸ್ಕೃತರಿಂದ ಅಸಮಾಧಾನ ವ್ಯಕ್ತವಾಗಿದೆ. ಗೌರವ ಪ್ರಶಸ್ತಿ ಮರಳಿಸುವುದರ ಕುರಿತು ಚರ್ಚಿಸಲು ನಿರ್ಧಾರ ಕೈಗೊಳ್ಳಲಾಗಿದೆ.

ಸಾಮಾನ್ಯವಾಗಿ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಗೌರವ ಡಾಕ್ಟರೆಟ್ ನೀಡಲಾಗುತ್ತದೆ. ಆದರೆ, ಹಂಪಿ ಕನ್ನಡ ವಿಶ್ವವಿದ್ಯಾಲಯ ಡಾಕ್ಟರೆಟ್ ಬದಲಿಗೆ ವಿಶೇಷವಾಗಿ ಪ್ರತೀ ವರ್ಷ ನುಡಿಹಬ್ಬದ ವೇಳೆ ಗಣ್ಯರಿಗೆ ನಾಡೋಜ ಪದವಿ ನೀಡಿ ಗೌರವಿಸುತ್ತದೆ. ಈವರೆಗೂ ನಡೆದ 30 ನುಡಿಹಬ್ಬಗಳಲ್ಲಿ 92ಕ್ಕೂ ಹೆಚ್ಚು ಮಹಾನೀಯರಿಗೆ ನಾಡೋಜ ಗೌರವ ಪದವಿ ನೀಡಲಾಗಿದೆ. ಇದೀಗ ಅದರ ಬಳಕೆ ವಿಚಾರದಲ್ಲಿ ಸಾಕಷ್ಟು ಪರ ವಿರೋಧ ಚರ್ಚೆಯಾಗುತ್ತಿವೆ.

ಇದನ್ನೂ ಓದಿ: ಕೆಎಸ್ಒಯು ಪದವಿ ಕಾರಣಕ್ಕೆ ನೌಕರಿಗೆ ಕತ್ತರಿ: ಅರ್ಹತೆ ಆಧಾರದಲ್ಲಿ ಮತ್ತೆ ಕೆಲಸ ಕೊಡಲು ಹೈಕೋರ್ಟ್ ನಿರ್ದೇಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.