ಬಳ್ಳಾರಿ: ತನ್ನ ಹೆಂಡತಿಯ ಬಗ್ಗೆ ಹಗುರವಾಗಿ ಮಾತನಾಡಿದ ಎನ್ನುವ ಕಾರಣಕ್ಕೆ ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ಸ್ನೇಹಿತನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಸಾಯಿಸಿರುವ ಪ್ರಕರಣ ಇಂದು ಮಧ್ಯಾಹ್ನ ಬಳ್ಳಾರಿ ನಗರದ ಹೊಸ ಬಸ್ ನಿಲ್ದಾಣದಲ್ಲಿ ನಡೆದಿದೆ. ಶ್ರೀರಾಮ್ ಕೊಲೆ ಆರೋಪಿಯಾಗಿದ್ದು, ತಮ್ಮಣ್ಣ(43)ಎಂಬಾತನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ.
ಇಬ್ಬರೂ ಆಂಧ್ರಪ್ರದೇಶದ ರಾಯದುರ್ಗಂ ತಾಲೂಕಿನ ಚದಂದೊಡ್ಡಿ ಗ್ರಾಮದ ನಿವಾಸಿಗಳು. ದುಡಿಮೆಗೆಂದು ಬಳ್ಳಾರಿ ನಗರಕ್ಕೆ ಬಂದು ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇಂದು ಬಸ್ ನಿಲ್ದಾಣದ ಆವರಣದ ಹಿಂಭಾಗದಲ್ಲಿ ಇಬ್ಬರು ಮದ್ಯ ಸೇವನೆ ಮಾಡಿದ್ದಾರೆ. ಈ ವೇಳೆ ತಮ್ಮಣ್ಣ ತನ್ನ ಪತ್ನಿ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದಾನೆ ಎಂದು ಸಿಟ್ಟು ತಡೆಯಲಾರದೆ ಕೊಲೆ ಮಾಡಿದ್ದಾಗಿ ಪೊಲೀಸರ ವಶದಲ್ಲಿರುವ ಶ್ರೀರಾಮ್ ಹೇಳಿದ್ದಾರೆ.
ಕೊಲೆ ಮಾಡಿದ ತಕ್ಷಣ ಬಸ್ ನಿಲ್ದಾಣದಲ್ಲಿದ್ದ ಅಧಿಕಾರಿಗಳು ಹಾಗೂ ಜನರು ಶ್ರೀರಾಮ್ ಅವರನ್ನು ತಡೆದು ನಿಲ್ಲಿಸಿ ಬ್ರೂಸ್ ಪೇಟೆ ಪೊಲೀಸರನ್ನು ಕರೆಸಿ ಅವರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ಪತಿಯನ್ನು ಕೋಳಿ ಸುಡುವ ಬರ್ನರ್ ನಲ್ಲಿ ಸುಟ್ಟು ಕೊಲೆ.. ಚಾಲಾಕಿ ಪತ್ನಿ, ಪ್ರಿಯಕರ ಅಂದರ್