ETV Bharat / city

ಸಚಿವ ಆನಂದ್​​ ಸಿಂಗ್​​ಗೆ​​ ಕೊರೊನಾ ಪಾಸಿಟಿವ್..! - ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ

ಅರಣ್ಯ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್​​ ಸಿಂಗ್​​ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿರುವುದಾಗಿ ಅವರ ಕುಟುಂಬ ಮೂಲಗಳು ತಿಳಿಸಿವೆ.

Minister Anand Singh
ಆನಂದ್​​ ಸಿಂಗ್​​
author img

By

Published : Jul 26, 2020, 10:20 AM IST

ಬಳ್ಳಾರಿ: ಜಿಲ್ಲಾ ಉಸ್ತುವಾರಿ ಸಚಿವ ಆನಂದ್​​ ಸಿಂಗ್​​ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಮೊನ್ನೆಯಷ್ಟೇ ಆನಂದ್​​ ಸಿಂಗ್ ಸ್ವಯಂ ಪ್ರೇರಿತರಾಗಿ ಸ್ವ್ಯಾಬ್ ಟೆಸ್ಟ್ ಮಾಡಿಸಿದ್ದರು‌. ನಿನ್ನೆ ರಾತ್ರಿ ವರದಿ ಪಾಸಿಟಿವ್​ ಬಂದಿದೆ. ಯಾವುದೇ ರೋಗ ಲಕ್ಷಣಗಳಿಲ್ಲದಿರುವುದರಿಂದ ಹೊಸಪೇಟೆ ನಗರದ ತಮ್ಮ ನಿವಾಸದಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕುಟುಂಬ ಮೂಲಗಳಿಂದ ಮಾಹಿತಿ ದೊರೆತಿದೆ. ಈ ಕುರಿತು ಜಿಲ್ಲಾಡಳಿತ ಅಥವಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇನ್ನೂ ಖಚಿತ ಪಡಿಸಿಲ್ಲ.

ಇತ್ತೀಚೆಗೆ ಆನಂದ್​ ಸಿಂಗ್ ಕೊರೊನಾ ಸೋಂಕಿತರಿದ್ದ ವಾರ್ಡ್​ಗೆ ಭೇಟಿ ನೀಡಿದ್ದರು. ಅಲ್ಲದೇ, ಸಚಿವರ ಕಾರು ಚಾಲಕನಿಗೂ ಸೋಂಕು ಇರುವುದು ದೃಢವಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.