ಬಳ್ಳಾರಿ: ಮಾಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಬಳ್ಳಾರಿಯ ಗಣಿ ಕಂಪನಿಗಳು ಜಿಲ್ಲಾಡಳಿತಕ್ಕೆ ಸಾಥ್ ನೀಡಿವೆ. ಇಂದು ಜಿಲ್ಲಾಡಳಿತದೊಂದಿಗೆ ನಗರದ ಸುತ್ತಮುತ್ತ ಸ್ಯಾನಿಟೈಜರ್ ಸಿಂಪಡಣೆ ಮಾಡುತ್ತಿವೆ.
ಲಾಕ್ಡೌನ್ ಸಮಯದಲ್ಲಿ ಜಿಲ್ಲೆಯ ಕೈಗಾರಿಕೆಗಳ ಸಹಾಯ ಹಸ್ತವನ್ನ ಡಿಸಿ ಎಸ್.ಎಸ್. ನಕುಲ್ ಕೋರಿದ್ದಾರೆ. ಹೀಗಾಗಿ, ಎನ್ಎಂಡಿಸಿ ಕಂಪನಿ ಜಿಲ್ಲಾಡಳಿತಕ್ಕೆ ಸಾಥ್ ನೀಡಿದೆ. ಜಿಲ್ಲಾಡಳಿತ ಗುರುತಿಸಿರುವ ನಗರದ ಪ್ರಮುಖ 19 ಸ್ಥಳಗಳಲ್ಲಿ ಸ್ಯಾನಿಟೈಜರ್ ಸಿಂಪಡಣೆ ಮಾಡಿದೆ.