ETV Bharat / city

ನಾಳೆಯಿಂದ ಬಳ್ಳಾರಿಯಲ್ಲಿ ಬೃಹತ್ ಮಾವು ಮೇಳ: 300ಕ್ಕೂ ಹೆಚ್ಚು ತಳಿಗಳ ಪ್ರದರ್ಶನ - ಮಾವು ಮೇಳ 2022

ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಕಿಸಾನ್ ಭಾಗಿದಾರಿ ಪ್ರಾಥಮಿಕ ಹಮಾರಿ ಆಂದೋಲನದ ಆಶಯದಂತೆ ತೋಟಗಾರಿಕೆ ಇಲಾಖೆ ಹಾಗೂ ಹಾಪ್‌ಕಾಮ್ಸ್ ಸಹಯೋಗದಲ್ಲಿ ಬಳ್ಳಾರಿ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಮೇ 30 ರಿಂದ ಜೂ.1ರವರೆಗೆ ಪ್ರಪ್ರಥಮ ಬಾರಿಗೆ ಮಾವು ಮೇಳ-2022 ಏರ್ಪಡಿಸಲಾಗಿದೆ.

ಮಾವು ಮೇಳ
ಮಾವು ಮೇಳ
author img

By

Published : May 29, 2022, 7:20 AM IST

ಬಳ್ಳಾರಿ: ಬಳ್ಳಾರಿಯಲ್ಲಿ ಇದೇ ಮೊದಲ ಬಾರಿಗೆ ಬೃಹತ್ ಮಾವು ಮೇಳ/ಮಾವು ಜಾತ್ರೆ ಮೇ 30ರಿಂದ ಜೂ.1ರವರೆಗೆ ಎರಡು ದಿನಗಳ ಕಾಲ ನಡೆಯಲಿದೆ. 300ಕ್ಕೂ ಹೆಚ್ಚು ಮಾವಿನ ಹಣ್ಣಿನ ತಳಿಗಳನ್ನು ಪ್ರದರ್ಶನಕ್ಕಿಡಲಾಗುತ್ತಿದೆ. ಇಷ್ಟು ದಿನ 'ಬೆನೆಶಾನ್' ಮಾವಿನ ಸ್ವಾದ ಸವಿದಿರುವ ಬಳ್ಳಾರಿಗರಿಗೆ ಈಗ ವೈವಿಧ್ಯಮಯ ತಳಿಗಳ ಸ್ವಾದ ಸವಿಯುವ ಭಾಗ್ಯ ಲಭಿಸಿದಂತಾಗಿದೆ.

ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಕಿಸಾನ್ ಭಾಗಿದಾರಿ ಪ್ರಾಥಮಿಕ ಹಮಾರಿ ಆಂದೋಲನದ ಆಶಯದಂತೆ ತೋಟಗಾರಿಕೆ ಇಲಾಖೆ ಹಾಗೂ ಹಾಪ್ ಕಾಮ್ಸ್ ಸಹಯೋಗದಲ್ಲಿ ಬಳ್ಳಾರಿ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಪ್ರಪ್ರಥಮ ಬಾರಿಗೆ ಮಾವು ಮೇಳ-2022 ಏರ್ಪಡಿಸಲಾಗಿದೆ.

ಮಾವು ಮೇಳಕ್ಕೆ ಆಗಮಿಸುವಂತೆ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಮನವಿ

ವೈವಿಧ್ಯಮಯ ಮಾವಿನ ಸ್ವಾದ ಸವಿಯುವ ಭಾಗ್ಯ: 'ಹಣ್ಣಿನ ರಾಜ'ನೆಂದೇ ಮಾವು ಹೆಸರುವಾಸಿಯಾಗಿದ್ದು, ಇದರ ಮಹತ್ವ ಹಾಗೂ ಸ್ವಾದದ ಕುರಿತಂತೆ ಪುರಾಣ ಪುಣ್ಯ ಕಥೆಗಳಲ್ಲಿ ಉಲ್ಲೇಖಿಸಲಾಗಿದೆ. ನಾಣ್ಣುಡಿಯಂತೆ 'ಹಸಿದು ಹಲಸು ತಿನ್ನು, ಉಂಡು ಮಾವು ತಿನ್ನು' ಎನ್ನುವುದು ಇದರಲ್ಲಿರುವ ಪೌಷ್ಠಿಕಾಂಶದ ಕುರಿತ ಪ್ರಾಮುಖ್ಯತೆಯನ್ನು ಸಾರುತ್ತದೆ. ಬಳ್ಳಾರಿ ನಗರದ ಮಾರುಕಟ್ಟೆಗಳಲ್ಲಿ ಬೆನೆಶಾನ್ ಮಾವಿನ ಹಣ್ಣಿನ ತಳಿ ಮಾತ್ರ ಖರೀದಿಗೆ ಲಭ್ಯವಿದೆ. ವೈವಿಧ್ಯಮಯ ಮಾವಿನ ತಳಿಗಳ ಸ್ವಾದದಿಂದ ಬಳ್ಳಾರಿ ಜನರು ವಂಚಿತರಾಗಬಾರದೆಂಬ ಸದುದ್ದೇಶದಿಂದ ಮತ್ತು ವೈಜ್ಞಾನಿಕವಾಗಿ, ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣುಗಳು ಲಭಿಸುವಂತೆ ಮಾಡಲು ಮಾವು ಮೇಳ/ಮಾವು ಜಾತ್ರೆ-2022ನ್ನು ಆಯೋಜಿಸಲಾಗಿದೆ. ದೇಶಾದ್ಯಂತ ಪ್ರಸಿದ್ಧಿ ಪಡೆದಿರುವ ಹಾಗೂ ಕರ್ನಾಟಕ ರಾಜ್ಯಾದ್ಯಂತ ಪ್ರಚಲಿತದಲ್ಲಿರುವ ಸುಮಾರು 300 ಕ್ಕೂ ಹೆಚ್ಚು ಮಾವಿನ ಹಣ್ಣಿನ ತಳಿಗಳ ಪ್ರದರ್ಶನ ಈ ಮೇಳದಲ್ಲಿರಲಿದೆ.

ಮಾವು ಮೇಳ

ನೇರ ಮಾರುಕಟ್ಟೆ ವ್ಯವಸ್ಥೆ: ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರು ಬೆಳೆದ ಮಾವನ್ನು ನೇರವಾಗಿ ಯೋಗ್ಯ ಬೆಲೆಯಲ್ಲಿ ಜಿಲ್ಲೆಯ ಸಮಸ್ತ ಜನತೆಗೆ ತಲುಪಿಸಿ, ರೈತರ ಆರ್ಥಿಕ ಮಟ್ಟವನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಈ ಮೇಳ ಏರ್ಪಡಿಸಲಾಗಿದೆ. ರೈತರ ಹಿತದೃಷ್ಟಿಯಿಂದ ನೇರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗಿದೆ. ಬೆನೆಶಾನ್ ಹಣ್ಣಿನ ತಳಿಯಲ್ಲದೇ, ಗುಣಮಟ್ಟದ ತಳಿಗಳ ಮಾರಾಟ ವ್ಯವಸ್ಥೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಬಳ್ಳಾರಿ, ವಿಜಯನಗರ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ರೈತರು ಬೆಳೆದಿರುವ ಮಾವನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.

ಯಾವ್ಯಾವ ತಳಿಯ ಮಾವು ಲಭ್ಯ?: ಈ ಮಾವಿನ ಮೇಳದಲ್ಲಿ ಆಲ್ಫಾನ್ಸೋ, ಮಲ್ಲಿಕಾ, ಮಲಗೋವ, ರಸಪುರಿ, ದಶೆಹರಿ, ಬೆನೆಶನ್ ಯಾಕೃತಿ, ರತ್ನ, ನಾಜೂಕಪಸಂದ, ಕೊಬ್ಬರಿಮಾವು ಸೇರಿದಂತೆ ವಿವಿಧ ಬಗೆಯ ಉತ್ಕೃಷ್ಟ ತಳಿಗಳಿರಲಿವೆ. 100 ಗ್ರಾಂ ಮಾವಿನಲ್ಲಿ ಪೌಷ್ಠಿಕಾಂಶಗಳಾದ ಪ್ರೋಟಿನ್- 0.51 ಗ್ರಾಂ, ಕೊಬ್ಬು-0.27 ಗ್ರಾಂ, ಶರ್ಕರ ಪಿಷ್ಠ-17 ಗ್ರಾಂ, ಲವಣಗಳಲ್ಲಿ ಸುಣ್ಣ-10ಮಿ.ಗ್ರಾಂ, ರಂಜಕ-156 ಮಿ.ಗ್ರಾಂ, ಕಬ್ಬಿಣ-0.13 ಗ್ರಾಂ, ಮೆಗ್ನಿಶಿಯಂ-9 ಮಿ.ಗ್ರಾಂಗಳಿರಲಿವೆ ಹಾಗೂ ಅನ್ನಾಂಗವು ಸಾಕಷ್ಟು ಪ್ರಮಾಣದಲ್ಲಿರಲಿದೆ.

ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಸಾರ್ವಜನಿಕರು, ಮಾವು ಪ್ರಿಯರು ಆಗಮಿಸಿ ಈ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ತಿಳಿಸಿದ್ದಾರೆ.

ಇದನ್ನೂ ಓದಿ: 'ಬೋನಿಗೆ ಹಾಕಿದರೂ ಹುಲಿ ಹುಲ್ಲು ತಿನ್ನಲ್ಲ': ಹೈಕಮಾಂಡ್ ವಿರುದ್ಧ ಗರಂ ಆದರೇ ವಿಜಯೇಂದ್ರ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.