ಬಳ್ಳಾರಿ: ಬೈಕ್ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ನಗರದಲ್ಲಿ ನಡೆದಿದೆ.
ನಗರದ ಹೊರವಲಯದ ಹೊಸಪೇಟೆ ರಸ್ತೆಯ ವೈ.ವಿ ಪೆಟ್ರೋಲ್ ಬಂಕ್ ಹತ್ತಿರ ಶನಿವಾರ ಸಂಜೆ ವಿನಾಯಕ ನಗರದಿಂದ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್, ಬೈಕ್ಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಬೈಕ್ ಸವಾರ ಶಿವಪ್ರಕಾಶ್ (40) ತಲೆಗೆ ಬಲವಾಗಿ ಪೆಟ್ಟುಬಿದ್ದಿದ್ದು, ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಿವಪ್ರಕಾಶ್, ಇಂದು ಮರಣ ಹೊಂದಿದ್ದಾರೆ.
ಬಸ್ ಚಾಲಕ ವೇಗವಾಗಿ ಬಂದಿದ್ದರಿಂದ ಘಟನೆ ನಡೆದಿದೆ ಎಂಬುದು ಪೊಲೀಸ್ ಇಲಾಖೆಯಿಂದ ಬಂದ ಮಾಹಿತಿ. ಇನ್ನು ಬಸ್ ಚಾಲಕನ ಮೇಲೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.