ETV Bharat / city

ಅಂತಾರಾಷ್ಟ್ರೀಯ ಕರಾಟೆಗೆ ಗಣಿ ಪಡೆ ಅಣಿ:   ಮಲೇಷ್ಯಾದಲ್ಲಿ ಮಿಂಚಲು ಈ ಪೋರಿ ಸರ್ವ ಸನ್ನದ್ಧ - undefined

ಕರ್ನಾಟಕದ ಟ್ರೇಡಿಷನಲ್ ಶೋ, ಟೋಕಾನ್ ಕರಾಟೆ ಅಕಾಡಮಿ ಹಾಗೂ ಜಿಲ್ಲಾ ಕರಾಟೆ ಸ್ಪೋರ್ಟ್ಸ್ ಅಸೋಸಿಯೇಷನ್​ನಲ್ಲಿ ತರಬೇತಿ ಪಡೆದಿರುವ ಗಣಿ ಜಿಲ್ಲೆಯ 23 ಕರಾಟೆ ಪಟುಗಳು ಮಲೇಷ್ಯಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.

ಸಾನಿಯಾ ಹಸ್ಮಿ
author img

By

Published : Apr 25, 2019, 2:43 PM IST

ಬಳ್ಳಾರಿ: ಕಲೆ ವಿಲಾಸಕ್ಕಲ್ಲ, ವಿಕಾಸಕ್ಕೆ. ಯಾವುದೇ ಕಲೆಯನ್ನ ಕರಗತ ಮಾಡಿಕೊಳ್ಳಬೇಕಾದರೆ ನಿರಂತರ ಅಭ್ಯಾಸ ಹಾಗೂ ಸತತ ಪ್ರಯತ್ನ ಅಗತ್ಯ.‌‌ ವಿವಿಧ ಸಾಹಸ‌ ಕ್ರೀಡೆಗಳಲ್ಲಿ ಒಂದಾದ ಕರಾಟೆ ಮಹಿಳೆಯರ ಆತ್ಮರಕ್ಷಣೆಗಾಗಿ ಅತ್ಯಗತ್ಯ ಕಲೆಯಾಗಿದೆ. ಇಂತಹ ಕರಾಟೆಯನ್ನ ಬಾಲ್ಯಾವಸ್ಥೆಯಲ್ಲಿ ಅತ್ಯಂತ ಉತ್ಸುಕತೆಯಿಂದ ಕಲಿಯುತ್ತಿರುವ ಪೋರಿ ಇದೀಗ ಮಲೇಷ್ಯಾದಲ್ಲಿ ಮಿಂಚಲಿದ್ದಾಳೆ.

ಹೌದು, ಕರಾಟೆ ಕಲೆಯನ್ನ ಗಣಿ ಜಿಲ್ಲೆಯ ಹಗರಿಬೊಮ್ಮನ‌ ಚಿಲಕೋಡು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸುಭಾನಿ ಎಂಬುವವರ ಮಗಳಾದ ಸಾನಿಯಾ ಹಸ್ಮಿ ಕೆಲವೇ ತಿಂಗಳಲ್ಲಿ ಕರಗತ ಮಾಡಿಕೊಂಡು ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ, ಈಗ ಮಲೇಷ್ಯಾದಲ್ಲಿ ಮೇ 1 ರಿಂದ 6 ನೇ ತಾರೀಖಿನವರೆಗೂ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ತನ್ನ ಕರಾಮತ್ತು ಪ್ರದರ್ಶಿಸಲಿದ್ದಾಳೆ.

ಮಲೇಷಿಯಾದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಗೆ ತಯಾರಿ

ಕರ್ನಾಟಕದ ಟ್ರೇಡಿಷನಲ್ ಶೋ ಟೋಕಾನ್ ಕರಾಟೆ ಅಕಾಡೆಮಿ ಹಾಗೂ ಜಿಲ್ಲಾ ಕರಾಟೆ ಸ್ಪೋರ್ಟ್ಸ್ ಅಸೋಸಿಯೇಷನ್​ನಲ್ಲಿ ತರಬೇತಿ ಪಡೆದಿರುವ ಗಣಿ ಜಿಲ್ಲೆಯ 23 ಕರಾಟೆ ಪಟುಗಳು ಮಲೇಶಿಯಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ಕುಮಿತೆ ಹಾಗೂ ಕಟಾ ವಿಭಾಗದಲ್ಲಿ ಸರಿ ಸುಮಾರು 23 ಕರಾಟೆ ಪಟುಗಳು ಆಯ್ಕೆಯಾಗಿದ್ದಾರೆ. ಆ ಪೈಕಿ 19 ಮಂದಿ ಬಾಲಕರು ಮತ್ತು ನಾಲ್ಕು ಬಾಲಕಿಯರಿದ್ದಾರೆ. ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ರವಿಕುಮಾರ್​ ರೋಹಿಲ್ಲಾ, ಅಮಲ್, ವಂದನಾ ರಾವತ್, ಸಾಯಿಕೃಷ್ಣ, ಅಥುಲ್ ಕೃಷ್ಣ, ಯಶಸ್ ಹೆಗಡೆ, ಹರ್ಷವರ್ಧನ, ನಬಿಸಾಹೇಬ್, ರವಿತೇಜ, ಜಡೇಶಾ, ಹುಲುಗಣ್ಣ, ಬಸವರಾಜ, ನಾಗರಾಜ, ಕಟ್ಟೇಸ್ವಾಮಿ, ಸುಭಾಷ್​ ಚಂದ್ರ. ಕಲರ್ ಬೆಲ್ಟ್ ವಿಭಾಗದಲ್ಲಿ ಅನೂಪ್ ಪಿಸಾ, ನಿಶ್ಚಯ್​ಕುಮಾರ, ವೈಶಾಲಿ, ಸೃಷ್ಠಿ, ಸಾನಿಯಾ ಹಸ್ಮಿ, ಚಿನ್ಮಯ ದಾಸ, ಅದೀಪ್ ಕುಮಾರ, ಧ್ರುವ ಪಾಟೀಲ್​ ಇದ್ದಾರೆ.

ಕರಾಟೆ ಅಸೋಸಿಯೇಷನ್ ಸಹಾಯ ಹಸ್ತ:

ಮಲೇಶಿಯಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ 23 ಕರಾಟೆ ಪಟುಗಳಲ್ಲಿ ಒಂಬತ್ತು ಮಂದಿಗೆ ತಲಾ 10,000 ರೂ.ಗಳಂತೆ 90,000 ರೂ.ಗಳ ಸಹಾಯ ಧನವನ್ನ ಜಿಲ್ಲಾ ಕರಾಟೆ ಸ್ಪೋರ್ಟ್ಸ್ ಅಸೋಸಿಯೇಷನ್ ನೀಡಿದೆ. ಅವರು ಬಳ್ಳಾರಿಯ ತೋರಣಗಲ್ಲು ಏರ್​ಪೋರ್ಟ್​ನಿಂದ ಬೆಂಗಳೂರಿಗೆ ತೆರಳಲಿದ್ದಾರೆ.‌ ಅಲ್ಲಿಂದ ಮಲೇಷ್ಯಾಕ್ಕೆ ತೆರಳುವ ವಿಮಾನದಲ್ಲಿ ಪ್ರಯಾಣ ಬೆಳೆಸಲಿದ್ದಾರೆ ಎಂದು ಅಸೋಸಿಯೇಷನ್ ಅಧ್ಯಕ್ಷ ಪೋಲಾ ಆನಂದ ಈ ಟಿವಿ ಭಾರತಗೆ ತಿಳಿಸಿದ್ದಾರೆ.

Intro:ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿ...
ಮಲೇಷಿಯಾದಲ್ಲಿ ಮಿಂಚಲಿರುವ ಗಣಿಜಿಲ್ಲೆಯ ಆರರ
ಪೋರಿ ಸಾನಿಯಾ!
ಬಳ್ಳಾರಿ: ಕಲೆ ವಿಲಾಸಕ್ಕಲ್ಲ. ವಿಕಾಸಕ್ಕೆ. ಯಾವುದೇ ಕಲೆಯನ್ನ ಕರಗತ ಮಾಡಿಕೊಳ್ಳಬೇಕಾದ್ರೆ. ನಿರಂತರ ಅಭ್ಯಾಸ ಹಾಗೂ ಸತತ ಪ್ರಯತ್ನದ ಫಲದ ಅಗತ್ಯತೆ ಇದೆ.‌‌ ಆಗಮಾತ್ರ ಎಂಥ ಕಠಿಣ ಕಲೆಯನ್ನಾದ್ರೂ ಕರಗತ ಮಾಡಿಕೊಳ್ಳುವ ಚಾಕಚಕ್ಯತೆ ಯುವಜನರಲ್ಲಿ ಮೂಡಿಬರಲಿದೆ.
ವಿವಿಧ ಸಾಹಸ‌ ಕ್ರೀಡೆಗಳಲ್ಲಿ ಈ ಕರಾಟೆಯೂ ಕೂಡ ಒಂದಾಗಿದೆ. ಮಹಿಳೆಯರ ಆತ್ಮರಕ್ಷಣೆಗಾಗಿ ಈ ಕರಾಟೆ
ಪಾತ್ರ ಬಹುಮುಖ್ಯವಾಗಿದೆ. ಇಂತಹ ಕರಾಟೆಯನ್ನ ಬಾಲ್ಯಾವಸ್ಥೆಯಲ್ಲಿ ಅತ್ಯಂತ ಉತ್ಸುಕತೆಯಿಂದ ಕಲಿಯುವ ಇಲ್ಲೊಬ್ಬ ಪೋರಿ ಇದೀಗ ಮಲೇಷಿಯಾದಲ್ಲಿ ಮಿಂಚಲಿದ್ದಾರೆ.
ಹೌದು, ಈ ಕರಾಟೆ ಕಲೆಯನ್ನ ಗಣಿ ಜಿಲ್ಲೆಯ ಹಗರಿಬೊಮ್ಮನ‌
ಚಿಲಕೋಡು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸುಭಾನಿ ಎಂಬುವರ ಮಗಳಾದ ಸಾನಿಯಾ ಹಸ್ಮಿ (06) ಕೆಲವೇ ತಿಂಗಳಲ್ಲಿ ಕರಗತ ಮಾಡಿಕೊಂಡು ಈಗ ಮಲೇಷಿಯಾ ದೇಶದಲ್ಲಿ ಮೇ 1 ರಿಂದ 6ನೇ ತಾರೀಖಿನವ ರಿಗೂ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಈ ಪೋರಿ ತನ್ನ ಕರಾಟೆ ಕರಾಮತ್ತನ್ನ ಪ್ರದರ್ಶಿಸಲಿದ್ದಾರೆ.
ಕರ್ನಾಟಕದ ಟ್ರೇಡಿಷನಲ್ ಶೋಟೋಕಾನ್ ಕರಾಟೆ ಅಕಾಡಮಿ ಹಾಗೂ ಜಿಲ್ಲಾ ಕರಾಟೆ ಸ್ಪೋರ್ಟ್ಸ್ ಅಸೋಸಿ ಯೇಷನ್ ನಲ್ಲಿ ತರಬೇತಿ ಪಡೆದಿರುವ ಗಣಿ ಜಿಲ್ಲೆಯ 23 ಕರಾಟೆ ಪಟುಗಳು ಮಲೇಷಿಯಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.‌
ಕುಮಿತೆ ಮತ್ತು ಕಟಾ ವಿಭಾಗ: ಕುಮಿತೆ ಹಾಗೂ ಕಟಾ ವಿಭಾಗದಲ್ಲಿ ಸರಿ ಸುಮಾರು 23 ಕರಾಟೆ ಪಟುಗಳು ಆಯ್ಕೆಯಾಗಿದ್ದಾರೆ. ಆ ಪೈಕಿ 19 ಮಂದಿ ಬಾಲಕರು
ಮತ್ತು ನಾಲ್ಕು ಬಾಲಕಿಯರೂ ಇದ್ದಾರೆ.
ಬ್ಲಾಕ್ ಬೆಲ್ಟ್ ವಿಭಾಗ: ರವಿಕುಮಾರ ರೋಹಿಲ್ಲ, ಅಮಲ್, ವಂದನಾ ರಾವತ್, ಸಾಯಿಕೃಷ್ಣ, ಅಥುಲ್ ಕೃಷ್ಣ, ಯಶಸ್ ಹೆಗಡೆ, ಹರ್ಷವರ್ಧನ, ನಬಿಸಾಹೇಬ್, ರವಿತೇಜ, ಜಡೇಶಾ, ಹುಲುಗಣ್ಣ, ಬಸವರಾಜ, ನಾಗರಾಜ, ಕಟ್ಟೇಸ್ವಾಮಿ, ಸುಭಾಷ ಚಂದ್ರ.
ಕಲರ್ ಬೆಲ್ಟ್ ವಿಭಾಗ: ಅನೂಪ್ ಪಿಸಾ, ನಿಶ್ಚಯಕುಮಾರ, ವೈಶಾಲಿ, ಸೃಷ್ಠಿ, ಸಾನಿಯಾ ಹಸ್ಮಿ, ಚಿನ್ಮಯ ದಾಸ, ಅದೀಪ್ ಕುಮಾರ, ಧ್ರುವ ಪಾಟೀಲ.

Body:ಕರಾಟೆ ಅಸೋಸಿಯೇಷನ್ ಸಹಾಯ ಹಸ್ತ: ಮಲೇಷಿಯಾ ದೇಶದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ 23 ಕರಾಟೆ ಪಟುಗಳಲ್ಲಿ ಒಂಬತ್ತು ಮಂದಿಗೆ ತಲಾ 10,000 ರೂ.ಗಳಂತೆ 90,000 ರೂ.ಗಳ ಸಹಾಯಧನವನ್ನ ಜಿಲ್ಲಾ ಕರಾಟೆ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಮಾಡಲಾಗಿದೆ. ಅವರು ಬಳ್ಳಾರಿಯ ತೋರಣಗಲ್ಲು ಏರ್ ಪೋರ್ಟಿನಿಂದ ವಿಮಾನದಲ್ಲಿ ಬೆಂಗಳೂರಿಗೆ ತೆರಳಲಿದ್ದಾರೆ.‌ ಅಲ್ಲಿಂದ ಮಲೇಷಿಯಾ ದೇಶಕ್ಕೆ ತೆರಳುವ ವಿಮಾನದಲ್ಲಿ ಪ್ರಯಾಣ ಬೆಳೆಸಲಿದ್ದಾರೆ ಎಂದು ಅಸೋಸಿಯೇಷನ್ ಅಧ್ಯಕ್ಷ ಪೋಲಾ ಆನಂದ ಈ ಟಿವಿ ಭಾರತ್ ಗೆ ತಿಳಿಸಿದ್ದಾರೆ.
ಕರಾಟೆ ಮಾಸ್ಟರ್ ಕಟ್ಟೇಸ್ವಾಮಿಯವರು ಮಾತನಾಡಿ, ಈ ಹಿಂದೆ ಥೈಲ್ಯಾಂಡ್ ದೇಶದಲ್ಲಿ ಕರಾಟೆ ಪಂದ್ಯಾವಳಿ ನಡೆದಿದ್ದು, ಗಣಿ ಜಿಲ್ಲೆಯ ಕರಾಟೆ ಪಟುಗಳು ಉತ್ತಮ‌ ಪ್ರದರ್ಶನ ನೀಡಿ, ಗೋಲ್ಡ್ ಮೆಡಲ್ ಅನ್ನು ಗಿಟ್ಟಿಸಿಕೊಂಡಿದ್ದಾರೆ. ಈ ಬಾರಿಯೂ ಕೂಡ ಮಲೇಷಿಯಾ ದೇಶದಲ್ಲಿ ನಡೆಯಲಿರುವ‌ ಈ ಕರಾಟೆ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಗೋಲ್ಡ್ ಮೆಡಲ್ ಗಿಟ್ಟಿಸಿಕೊಳ್ಳುವ ಇಂಗಿತವನ್ನ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಶಾಲೆಯ ಶಿಕ್ಷಕ ಮಾಬು ಸುಭಾನಿ ಮಾತನಾಡಿ, ಹೆಣ್ಣುಮಗು ಜನಿಸಿದರೆ ಸಾಕು. ಪೋಷಕರು ಒತ್ತಡಕ್ಕೆ ಸಿಲುಕಿಕೊಂಡು ನರಳಾಡುತ್ತಿರುವ ಈ ಕಾಲಘಟ್ಟದಲ್ಲಿ ಹೆಣ್ಣುಮಗು ಎಂದರೆ ಒತ್ತಡವಲ್ಲ. ಹತ್ತು ಸಮಸ್ಯೆಗಳಿಗೆ
ಸ್ಪೂರ್ತಿ ಈ ಹೆಣ್ಣುಮಗು.‌ ಅಂತಾ ಹೆಣ್ಣು ಮಗುವಿನ ಆತ್ಮ‌ರಕ್ಷಣೆಗೋಸ್ಕರ ಕರಾಟೆಯಂತಹ ಸಾಹಸ ಕ್ರೀಡೆಯ ತರಬೇತಿ ನೀಡುತ್ತಿರುವುದು ನಿಜಕ್ಕೂ ಶ್ಲಾಘನಾರ್ಹ ಎಂದರು.
ಜಿಂದಾಲ್ ಕಂಪನಿಯ ಉದ್ಯೋಗಿ ಅಮರೇಶ ಮಾತನಾಡಿ, ಸಾಹಸ ಕ್ರೀಡೆಯಾದ ಕರಾಟೆ ತರಬೇತಿ ಪಡೆಯೋದರಿಂದ ಮಕ್ಕಳ ಲವಲವಿಕೆಯಿಂದಿರಲು ಸಾಧ್ಯವಾಗುತ್ತದೆ. ಆಗಾಗಿ, ನನ್ನ ಮಗ ಕಳೆದ ಆರೇಳು ತಿಂಗಳಿನಿಂದಲೂ ಕರಾಟೆ ತರಬೇತಿ ಪಡೆದುಕೊಂಡು ಈಗ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿರುವುದು ನಮಗೆ ಸಂತಸ ತಂದಿದೆ ಎನ್ನುತ್ತಾರೆ ಅವರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_01_25_KARATE_PRACTICE_7203310

KN_BLY_01a_25_KARATE_PRACTICE_7203310

KN_BLY_01b_25_KARATE_PRACTICE_7203310

KN_BLY_01c_25c_KARATE_PRACTICE_7203310

KN_BLY_01d_25_KARATE_PRACTICE_7203310

KN_BLY_01f_25_KARATE_PRACTICE_7203310

KN_BLY_02g_25_KARATE_PRACTICE_BYTE_7203310
KN_BLY_02h_25_KARATE_PRACTICE_BYTE_7203310

KN_BLY_02i_25_KARATE_PRACTICE_BYTE_7203310

KN_BLY_02j_25_KARATE_PRACTICE_BYTE_7203310

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.