ಹೊಸಪೇಟೆ: ನಗರದ ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ಯಲ್ಲಪ್ಪ ಕದ್ರಳ್ಳಿ (60) ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಯಲ್ಲಪ್ಪ ಕದ್ರಳ್ಳಿ ಅವರಿಗೆ ಕಳೆದ 15 ದಿನಗಳಿಂದ ಹಿಂದೆ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕೊಪ್ಪಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ಕಳೆದ 38 ವರ್ಷಗಳಿಂದ ಸೇವೆ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯಲ್ಲಪ್ಪ ಕದ್ರಳ್ಳಿ ಅವರು ಇಂದು ನಿವೃತ್ತಿ ಪಡೆಯಬೇಕಿತ್ತು.
ಇದನ್ನೂ ಓದಿ: Bigg Boss: ಟಾಸ್ಕ್ ಗೆಲ್ಲಲಿಲ್ಲ ಎಂದು ದಿವ್ಯಾ ಮೇಲೆ ಬೇಸರಗೊಂಡ ಅರವಿಂದ್