ETV Bharat / city

ಸಾಕಿನ್ನು ವಿರಸ, ಸಮರಸವೇ ಜೀವನ.. ವಿಚ್ಛೇದನ ಬಯಸಿದ್ದ ಜೋಡಿಯನ್ನು ಒಂದುಗೂಡಿಸಿದ ಲೋಕ ಅದಾಲತ್​ - hagaribommanahalli lok adalat

ಹಗರಿಬೊಮ್ಮನಹಳ್ಳಿ ಪಟ್ಟಣದ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್​ನಲ್ಲಿ ದಾಂಪತ್ಯ ಜೀವನಕ್ಕೆ ತಿಲಾಂಜಲಿ ಇಡಲು ಸಿದ್ಧರಾಗಿದ್ದ ದಂಪತಿಯ ಬದುಕಲ್ಲಿ ಮತ್ತೆ ವಸಂತಗೀತೆ ಶುರುವಾಗಿದೆ. ಇದಕ್ಕೆಲ್ಲ ಕಾರಣವಾಗಿದ್ದು ಲೋಕ​ ಅದಾಲತ್ ವೇದಿಕೆ​.

lok adalat
ವಿಚ್ಛೇಧನ ಬಯಸಿದ್ದ ದಂಪತಿಯನ್ನು ಒಂದು ಮಾಡಿದ ರಾಷ್ಟ್ರೀಯ ಲೋಕ ಅದಲಾತ್​
author img

By

Published : Jun 29, 2022, 12:01 PM IST

ವಿಜಯನಗರ: ಹಗರಿಬೊಮ್ಮನಹಳ್ಳಿ ಪಟ್ಟಣದ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ವಿಚ್ಛೇದನ ಹಂತ ತಲುಪಿದ್ದ ದಂಪತಿಯನ್ನು ನ್ಯಾಯಾಧೀಶರು ಒಂದುಗೂಡಿಸಿದ್ದಾರೆ. ಈ ದಂಪತಿ ಇದೀಗ ಪರಸ್ಪರ ವಿರಸ ಮರೆತು ಸಮರಸವೇ ಜೀವನ ಎಂಬಂತೆ ಕೂಡಿ ಬಾಳುವ ವಾಗ್ದಾನ ಮಾಡಿದ್ದಾರೆ.

ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್​ನಲ್ಲಿ, ಕಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶರಾದ ಭಾಗ್ಯಲಕ್ಷ್ಮೀ ಅವರ ಸಮ್ಮುಖದಲ್ಲಿ 1,41,000 ರೂಪಾಯಿ ಹಣ ಸಂಧಾಯದೊಂದಿಗೆ, ಚೆಕ್​ಬೌನ್ಸ್​, ವಾಹನಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 144 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು. ರಾಷ್ಟ್ರೀಯ ಲೋಕ ಅದಾಲತ್​ನಲ್ಲಿ ಹಿರಿಯ ಹಾಗೂ ಕಿರಿಯ ಶ್ರೇಣಿ ನ್ಯಾಯಾಲಯದ ಒಟ್ಟು 190 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯಾರ್ಥಗೊಳಿಸಲಾಯಿತು.

ಹಗರಿಬೊಮ್ಮನಹಳ್ಳಿ ಈ ಬಾರಿಯ ಲೋಕ ಅದಾಲತ್​ನ ವಿಶೇಷವೆಂದರೆ, ದಾಂಪತ್ಯದ ಬಿರುಕಿನಿಂದ ವಿಚ್ಛೇದನ ಹಂತ ತಲುಪಿದ್ದ ದಂಪತಿಯನ್ನು ರಾಜಿಸಂಧಾನದ ಮೂಲಕ ಒಂದುಗೂಡಿಸಲಾಗಿದೆ. ಈ ದಂಪತಿಗೆ ಪರಸ್ಪರ ಹೂವಿನಹಾರ ಹಾಕಿಸುವ ಮೂಲಕ ಸಿಹಿ ತಿನ್ನಿಸಿ, ಒಂದುಗೂಡಿಸಿದ ಸಂತಸದ ಕ್ಷಣಕ್ಕೆ ಈ ಬಾರಿಯ ಲೋಕ ಅದಾಲತ್‌ ಸಾಕ್ಷಿಯಾಯಿತು. ಈ ಸಂದರ್ಭದಲ್ಲಿ ವಕೀಲರಾದ ಕೊಟ್ರೇಶ್ ಶೆಟ್ಟರ್, ಶ್ರೀನಿವಾಸ, ಯಾಸ್ಮಿನ್, ನಾಗರಾಜ ಉಪಸ್ಥಿತರಿದ್ದರು.

ಇದನ್ನೂ ಓದಿ:ಅಮರನಾಥ ಯಾತ್ರೆ: ಜಮ್ಮು ಬೇಸ್‌ ಕ್ಯಾಂಪ್​ ತಲುಪಿದ ಭಕ್ತರ ತಂಡಕ್ಕೆ ಹಸಿರು ನಿಶಾನೆ ತೋರಿದ ಮನೋಜ್‌ ಸಿನ್ಹಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.