ಹೊಸಪೇಟೆ: ಬಹುದಿನದ ರೈತರ ಕನಸು ಇದೀಗ ನನಸಾಗಿದೆ. ತಾಲೂಕಿನ ಎಲ್ಲ ಕೆರೆಗಳು, ಹಳ್ಳಗಳು ತುಂಬಲಿದೆ.. ದನ ಕರುಗಳಿಗೆ ಕುಡಿಯಲು ನೀರು ಸಿಗಲಿದೆ.. ಹೊಲ ಗದ್ದೆಗಳು ಫಸಲಿನಿಂದ ಕಂಗೊಳಿಸಲಿದೆ.. ಅನೇಕ ವರ್ಷಗಳ ಹೋರಾಟಕ್ಕೆ ಈಗ ಪ್ರತಿಫಲ ಸಿಕ್ಕಿದೆ.
ಹೌದು.., ಏತ ನೀರಾವರಿ ಯೋಜನೆ ಜಾರಿ ಮಾಡಬೇಕು ಎಂದು ಹಲವಾರು ವರ್ಷಗಳಿಂದ ತಾಲೂಕಿನ ರೈತ ಪರ, ಪ್ರಗತಿಪರ ಹಾಗೂ ದಲಿತಪರ ಸಂಘಟನೆಗಳು ಸರಕಾರಕ್ಕೆ ಬೇಡಿಕೆಗಳನ್ನು ಇಡುತ್ತಾ, ಹೋರಾಟ ಮಾಡಿಕೊಂಡಿ ಬಂದಿವೆ. ಆ ಹೋರಾಟಕ್ಕೆ ಈಗ ಪ್ರತಿಫಲ ಸಿಕ್ಕಿದೆ. ಏತ ನೀರಾವರಿ ಯೋಜನೆಗೆ ವಿಜಯನಗರಕ್ಕೆ ಸರ್ಕಾರ 243 ಲಕ್ಷ ರೂ. ಅನುದಾನ ನೀಡಿದೆ. ಇದು ಎಲ್ಲ ರೈತರಿಗೆ ಸಂತೋಷದ ಸಂಗತಿಯಾಗಿದೆ ಎಂದು ಕರ್ನಾಟಕ ರಾಜ್ಯ ಹಸಿರು ಸೇನೆ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಕಾರ್ತಿಕ್ ಹೇಳಿದರು.
ಏತ ನೀರಾವರಿ ಯೋಜನೆಯಿಂದ ತಾಲೂಕಿನ ಇಂಗಳಿಗಿ ವಡ್ಡರ ಹಳ್ಳಿ, ಪಿ.ಕೆ.ಹಳ್ಳಿ, ಬೈಲುವದ್ದುಗೇರಿ, ಕಾಕುಬಾಳು, ಧರ್ಮಸಾಗರ, ಗುಂಡ್ಲವದ್ದಿಗೇರಿ, ಜಿ.ಜಿ.ಕ್ಯಾಂಪ್, ಕೊಟಿಗನಾಳ್, ಗಾಧಿಗನೂರು, ಭುವನಹಳ್ಳಿಯ ಎಲ್ಲಾ ಕೆರೆಗಳಿಗೆ ನೀರು ಬರಲಿದೆ. ಹೀಗಾಗಿ ಸರ್ಕಾರಕ್ಕೆ ಎಲ್ಲ ರೈತರು ಧನ್ಯವಾದ ತಿಳಿಸಿದ್ದಾರೆ. ಆದರೆ, ಸರ್ಕಾರ ಬರಿ ಅನುದಾನ ಘೋಷಣೆ ಮಾಡಿದರೆ ಸಾಲದು, ಕೆಲಸವನ್ನು ಪ್ರಾರಂಭಿಸಬೇಕಿದೆ ಎಂದು ಆಗ್ರಹಿಸಿದರು.