ETV Bharat / city

ಕೂಡ್ಲಿಗಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸರ್ಕಾರದಿಂದ ಅನುಮೋದನೆ - project of filling water to Koodligi lakes

ನೀರಾವರಿ ಮೂಲವೇ ಇಲ್ಲದೆ ಬರದನಾಡು ಎಂದು ಕರೆಸಿಕೊಂಡಿದ್ದ ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ತುಂಗಾಭದ್ರಾ ನದಿಯಿಂದ ನೀರು ಒದಗಿಸುವ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ.

Vijayanagar
ಕೂಡ್ಲಿಗಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸರ್ಕಾರದಿಂದ ಅನುಮೋದನೆ
author img

By

Published : Jun 23, 2021, 9:40 AM IST

ಹೊಸಪೇಟೆ (ವಿಜಯನಗರ): 25 ವರ್ಷಗಳ ಕೂಡ್ಲಿಗಿ ತಾಲೂಕಿನ ನೀರಾವರಿ ಹೋರಾಟಕ್ಕೆ ಜಯ ಸಿಕ್ಕಿದೆ. ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಡಿ ಬರುವ 74 ಕೆರೆಗಳಿಗೆ ತುಂಗಾಭದ್ರಾ ನದಿಯಿಂದ ನೀರೆತ್ತಿ ಎರಡು ಹಂತಗಳಲ್ಲಿ ತುಂಬಿಸಿ, ಕುಡಿಯುವ ನೀರು ಒದಗಿಸುವ 670 ಕೋಟಿ ರೂ. ಯೋಜನೆಗೆ ಸರ್ಕಾರದಿಂದ ಒಪ್ಪಿಗೆ ದೊರೆತಿದೆ.

ಕೂಡ್ಲಿಗಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸರ್ಕಾರದಿಂದ ಅನುಮೋದನೆ

ಜಿಲ್ಲೆಯಲ್ಲಿ ತುಂಗಭದ್ರಾ ಜಲಾಶಯವಿದ್ದರೂ ಕೂಡ್ಲಿಗಿ ಮಾತ್ರ ಬರದನಾಡು ಎಂದು ಕರೆಸಿಕೊಂಡಿತ್ತು. ಈ ಹಣೆಪಟ್ಟೆಯನ್ನು ಹೋಗಲಾಡಿಸಲು ರೈತರು ಹಾಗೂ ಹಲವು ನಾಯಕರು ಪಕ್ಷಾತೀತವಾಗಿ ಹೋರಾಟ ಮಾಡಿದ್ದರು. ಇದೀಗ ಹೋರಾಟಕ್ಕೆ ನಿರೀಕ್ಷಿತ ಫಲ ಸಿಕ್ಕಿದ್ದು, ರೈತರ ಬಾಳು ಹಸನಾಗಬೇಕಾಗಿದೆ.

ಬರ ತಪ್ಪಿಸಲು ಭದ್ರಾ ಮೇಲ್ದಂಡೆ ಯೋಜನೆ: ಭದ್ರಾ ಅಣೆಕಟ್ಟು ನಿರ್ಮಾಣವಾದಾಗ ದಾವಣಗೆರೆ ಜಿಲ್ಲೆ ಸಮೃದ್ಧವಾಗುತ್ತದೆ. ಆದರೆ, ಜಗಳೂರು ತಾಲೂಕು ಬರಕ್ಕೆ ತುತ್ತಾಗುತ್ತಿದೆ ಎಂದು ಮುಂಡರಾದ ಇಮಾಮ್ ಸಾಬ್ ಸೇರಿದಂತೆ ಹಲವು ರೈತರು ಸರ್ಕಾರಕ್ಕೆ ಮನನ ಮಾಡಿದ್ದರು.

ಅಂದಿನ ಮೈಸೂರು ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಎಸ್.ನಿಜಲಿಂಗಪ್ಪ ಅವರು ಜಗಳೂರು, ಚಳ್ಳಕೆರೆ, ಮೊಳಕಾಲ್ಮೂರು, ಸಂಡೂರು ಮತ್ತು ಕೂಡ್ಲಿಗಿಯ ಬರ ತಪ್ಪಿಸಲು ಭದ್ರಾ ಮೇಲ್ದಂಡೆ ಯೋಜನೆಯನ್ನು 1969ರಲ್ಲಿ ಆರಂಭಿಸಿದ್ದರು. ಈ ಯೋಜನೆಯಲ್ಲಿ ಕೂಡ್ಲಿಗಿಯ 69,800 ಎಕರೆ ಪ್ರದೇಶವನ್ನು ನೀರಾವರಿ ಮಾಡುವ ಉದ್ದೇಶವಿತ್ತು. ಬಳಿಕ ಯೋಜನೆಯನ್ನು ಮುಂದುವರೆಸಲು ಆಸಕ್ತಿ ತೋರದ ಕಾರಣ ನೆನೆಗುದಿಗೆ ಬಿದ್ದಿತ್ತು.

ಯೋಜನೆ ಅನುಷ್ಠಾನಕ್ಕಾಗಿ ಕೋರ್ಟ್ ಮೊರೆ: ಭದ್ರಾ ಮೇಲ್ದಂಡೆ ಯೋಜನೆ ನೆನೆಗುದಿಗೆ ಬಿದ್ದಾಗ ರೈತರು ಅರಿಶಿನಗುಂಡಿ ತಿಪ್ಪೇಸ್ವಾಮಿ ಅವರು ನೇತೃತ್ವದಲ್ಲಿ ಕೋರ್ಟ್ ಮೊರೆ ಹೋದರು. ಬಳಿಕ ರಸ್ತೆತಡೆ ಚಳುವಳಿ, ಎನ್​.ಹೆಚ್ 30 ರಸ್ತೆ ಬಂದ್ ಸೇರಿದಂತೆ ಅನೇಕ ಹೋರಾಟಗಳನ್ನು ಮಾಡಲಾಗುತ್ತದೆ. ಮಠಾಧೀಶರು, ಸಂಘ, ಸಂಸ್ಥೆಗಳು ಸೇರಿದಂತೆ ಅನೇಕರು ಬೆಂಬಲ ಸೂಚಿಸಿದ್ದು, ಹೋರಾಟಕ್ಕೆ ಮತ್ತಷ್ಟು ಬೆಂಬಲ ಸಿಕ್ಕಿತ್ತು.

ಬರದಿಂದ ಅಂತರ್ಜಲ ಮಟ್ಟ ಕುಸಿತ: ಬರದಿಂದ ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ಅನೇಕ ಸಮಸ್ಯೆಗೆ ತುತ್ತಾಗಿತ್ತು.‌ ಅಂತರ್ಜಲ ಕುಸಿತದಿಂದ ಆರ್ಸೆನಿಕ್ ಹಾಗೂ ಪ್ಲೋರೈಡ್ ನೀರು ಕುಡಿದು ಜನರು ಅನೇಕ ಆರೋಗ್ಯ ಸಮಸ್ಯೆ ಎದುರಿಸಿದ್ದರು. ಅಲ್ಲದೇ, ಗುಳೆ ಹೋಗುವ ಪರಿಸ್ಥಿತಿ ಸದಾ ಕಾಲ ಇರುತ್ತಿತ್ತು. ಈಗ ಕೆರೆಗಳನ್ನು ತುಂಬಿಸುವುದರಿಂದ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದೆ.

ಈ ಕುರಿತು ಪ್ರತಿಕ್ರಿಯಿಸಿದ ಕೂಡ್ಲಿಗಿಯ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ವಿಶ್ವೇಶ್ವರ ಸಜ್ಜನ್, ನೀರಾವರಿಗಾಗಿ 25 ವರ್ಷಗಳಿಂದ ಹೋರಾಟವನ್ನು ಮಾಡಿಕೊಂಡು ಬರಲಾಗುತ್ತಿತ್ತು. ಅದಕ್ಕೆ ಈಗ ಫಲ ದೊರೆತಿದೆ. ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದ ಶಾಸಕ ಗೋಪಾಲಕೃಷ್ಣ ಅವರಿಗೆ ಹಾಗೂ ಹೋರಾಟದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದರು.

ಕೂಡ್ಲಿಗಿ ತಾಲೂಕು ಕೆರೆ ತುಂಬಿಸುವ ಹೋರಾಟ ಸಮಿತಿಯ ಅಧ್ಯಕ್ಷ ಎಂ.ಗುರುಸಿದ್ದನಗೌಡ ಮಾತನಾಡಿ, ಮೈಸೂರಿನ ಮುಖ್ಯಮಂತ್ರಿ ನಿಜಲಿಂಗಪ್ಪ ಅವರು ಭದ್ರಾ ಮೇಲ್ದಂಡೆ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದರು. ಕೂಡ್ಲಿಗಿ ಸೇರಿದಂತೆ ಐದು ತಾಲೂಕುಗಳನ್ನ ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗುತ್ತದೆ. ಆದರೆ, 2005ರಲ್ಲಿ ಕೆ.ಸಿ.ರೆಡ್ಡಿ ವರದಿಯಲ್ಲಿ ಪರಿಷ್ಕರಣೆ ಮಾಡಿ, ಕೂಡ್ಲಿಗಿ ತಾಲೂಕನ್ನು ಕೈಬಿಡಲಾಯಿತು. ಬಳಿಕ ಹೋರಾಟವನ್ನು ರೂಪಿಸಬೇಕಾಯಿತು ಎಂದರು.

ಇದನ್ನೂ ಓದಿ: ವರದಾ ಮೈದುಂಬಿ ಹರಿದರೆ 25 ಗ್ರಾಮಗಳಿಗೆ ಸಮಸ್ಯೆ: ಸೇತುವೆ ಎತ್ತರ ಹೆಚ್ಚಿಸಲು ಗ್ರಾಮಸ್ಥರ ಮನವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.