ETV Bharat / city

ಚಿಪ್ಪುಹಂದಿ ಚಿಪ್ಪುಗಳನ್ನ ಮಾರಾಟ ಮಾಡುತ್ತಿದ್ದ ಐವರ ಬಂಧನ - bellary news

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹರವದಿ ಕ್ರಾಸ್ ಬಸ್ ನಿಲ್ದಾಣದ ಬಳಿ 3.5 ಕೆಜಿ ಚಿಪ್ಪುಹಂದಿ ಚಿಪ್ಪುಗಳನ್ನ ಮಾರಾಟ ಮಾಡುತ್ತಿದ್ದ ಐವರನ್ನ ಬಳ್ಳಾರಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ತಂಡ ಬಂಧಿಸಿದೆ.

ಚಿಪ್ಪುಹಂದಿ ಚಿಪ್ಪುಗಳನ್ನ ಮಾರಾಟ ಮಾಡುತ್ತಿದ್ದ ಐವರ ಬಂಧನ
author img

By

Published : Oct 17, 2019, 10:07 AM IST

ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹರವದಿ ಕ್ರಾಸ್ ಬಸ್ ನಿಲ್ದಾಣದ ಬಳಿ 3.5 ಕೆಜಿ ಚಿಪ್ಪುಹಂದಿ ಚಿಪ್ಪುಗಳನ್ನ ಮಾರಾಟ ಮಾಡುತ್ತಿದ್ದ ಐವರನ್ನ ಬಳ್ಳಾರಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ತಂಡ ಬಂಧಿಸಿದೆ.

ಜಿಲ್ಲೆಯ ಸಂಡೂರು ತಾಲೂಕಿನ ಲಕ್ಕಲಹಳ್ಳಿ ಅಗ್ರಹಾರ ನಿವಾಸಿಗಳಾದ ಗೌಡ್ರು ಓಬಯ್ಯ (50), ಈರ ನಾಗಯ್ಯನವರ ಓಬಯ್ಯ (39), ಹಳೇ ವಡ್ಡಿನಕಟ್ಟೆ ಗ್ರಾಮದ ನಿವಾಸಿ ಕೆ.ಕೃಷ್ಣಪ್ಪ (64), ಕೂಡ್ಲಿಗಿ ತಾಲೂಕಿನ ರಾಮದುರ್ಗದ ಕುದುರೆಡುವು ಗ್ರಾಮದ ನಿವಾಸಿ ಕೆ.ನಾಗೇಶ (27), ರಾಮದುರ್ಗದ ನಿವಾಸಿ ನೀರಗಂಟಿ ರಾಜಪ್ಪ (34) ಎಂಬುವವರನ್ನು ಬಂಧಿಸಲಾಗಿದೆ.

ಆರೋಪಿಗಳಿಂದ 3.5 ಕೆಜಿ ಚಿಪ್ಪುಹಂದಿ ಚಿಪ್ಪು, ಮೂರು ಬೈಕ್ ಹಾಗೂ ನಾಲ್ಕು ಮೊಬೈಲ್​ಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಬಳ್ಳಾರಿ ಉಪವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶಕುಮಾರ್​ ತಿಳಿಸಿದ್ದಾರೆ.

ಕೂಡ್ಲಿಗಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರಂಗನಾಥ, ಕೂಡ್ಲಿಗಿ ವಲಯ ಅರಣ್ಯಾಧಿಕಾರಿ ಎ.ರೇಣುಕಮ್ಮ, ಗುಡೇಕೋಟೆ ವಲಯ ಅರಣ್ಯಾಧಿಕಾರಿ ಬಿ.ಎಸ್.ಮಂಜುನಾಥ, ಸಂಚಾರಿ ದಳದ ಅರಣ್ಯಾಧಿಕಾರಿ ಸೋಮಶೇಖರರೆಡ್ಡಿ ಸೇರಿದಂತೆ ಇನ್ನಿತರೆ ಸಿಬ್ಬಂದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಇನ್ನೂ ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಹುಡುಕಾಟ ಮುಂದುವರೆದಿದೆ.

ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆಯ ವಿವಿಧ ಕಲಂಗಳಲ್ಲಿ ಪ್ರಕರಣ ದಾಖಲಿಸಲಾಗಿದೆ.

Intro:ಉಪ ಅರಣ್ಯ ಇಲಾಖೆಯಿಂದ 3.5 ಕೆ.ಜಿ.ಯಷ್ಟು ಚಿಪ್ಪುಹಂದಿ ಚಿಪ್ಪುಗಳು ವಶಕ್ಕೆ
ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹರವದಿ ಕ್ರಾಸ್ ಬಸ್ ನಿಲ್ದಾಣ ಬಳಿ ಮಾರಾಟ ಮಾಡುತ್ತಿದ್ದ ಅಂದಾಜು 3.5 ಕೆ.ಜಿ. ಯಷ್ಟು ಚಿಪ್ಪುಹಂದಿ ಚಿಪ್ಪುಗಳನ್ನು ಕೂಡ್ಲಿಗಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ತಂಡವು ವಶಪಡಿಸಿ ಕೊಂಡಿದೆ. ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಜಿಲ್ಲೆಯ ಸಂಡೂರು ತಾಲೂಕಿನ ಲಕ್ಕಲಹಳ್ಳಿ ಅಗ್ರಹಾರ ನಿವಾಸಿಗಳಾದ ಗೌಡ್ರು ಓಬಯ್ಯ (50), ಈರ ನಾಗಯ್ಯನವರ ಓಬಯ್ಯ (39), ಹಳೇ ವಡ್ಡಿನಕಟ್ಟೆ ಗ್ರಾಮದ ನಿವಾಸಿ ಕೆ.ಕೃಷ್ಣಪ್ಪ (64), ಕೂಡ್ಲಿಗಿ ತಾಲೂಕಿನ ರಾಮದುರ್ಗದ ಕುದುರೆಡುವು ಗ್ರಾಮದ ನಿವಾಸಿ ಕೆ.ನಾಗೇಶ (27), ರಾಮದುರ್ಗದ ನಿವಾಸಿ ನೀರಗಂಟಿ ರಾಜಪ್ಪ (34) ಎಂಬುವವರನ್ನು ಬಂಧಿಸಿದ್ದಲ್ಲದೇ, ಮೂರು ಬೈಕ್ ಹಾಗೂ ನಾಲ್ಕು ಮೊಬೈಲ್ ಅನ್ನು ಜಪ್ತಿಗೊಳಿಸಲಾಗಿದೆ ಎಂದು ಬಳ್ಳಾರಿ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ. ರಮೇಶಕುಮಾರ ತಿಳಿಸಿದ್ದಾರೆ.
ಕೂಡ್ಲಿಗಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರಂಗನಾಥ, ಕೂಡ್ಲಿಗಿ ವಲಯ ಅರಣ್ಯಾಧಿಕಾರಿ ಎ.ರೇಣುಕಮ್ಮ, ಗುಡೇಕೋಟೆ ವಲಯ ಅರಣ್ಯಾಧಿಕಾರಿ ಬಿ.ಎಸ್.ಮಂಜುನಾಥ, ಸಂಚಾರಿ ದಳದ ಅರಣ್ಯಾಧಿಕಾರಿ ಸೋಮಶೇಖರರೆಡ್ಡಿ ಸೇರಿದಂತೆ ಇನ್ನಿತರೆ ಸಿಬ್ಬಂದಿ ನೇತೃತ್ವದಲ್ಲಿ ಈ ದಾಳಿ ಕಾರ್ಯಾಚರಣೆ ನಡೆಸಲಾಗಿದೆ.
Body:ಬಂಧಿತ ಆರೋಪಿತರಿಂದ ಅಂದಾಜು 3.5 ಕೆ.ಜಿ.ಯಷ್ಟು ಚಿಪ್ಪುಹಂದಿ ಚಿಪ್ಪುಗಳನ್ನು ವಶಪಡಿಸಿಕೊಂಡಿದ್ದು, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ಇಬ್ಬರು ಪರಾರಿಯಾಗಿದ್ದು, ಆರೋಪಿತರ ಪತ್ತೆಕಾರ್ಯ ನಡೆದಿದೆ.
ಸದ್ಯ ಬಂಧಿಸಲ್ಪಟ್ಟ ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆ-1972 ರ ಕಲಂ 9, 39, 40, 44, 48ಎ, 49ಬಿ, 49ಸಿ, 50 ಮತ್ತು 51ರ ಅನ್ವಯದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿ ದೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶಕುಮಾರ ತಿಳಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_4_CHIPPU_HANDI_SALES_TRAPPED_7203310

KN_BLY_4e_CHIPPU_HANDI_SALES_TRAPPED_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.