ಬಳ್ಳಾರಿ: ನಗರದ ಕೆ.ಸಿ. ರಸ್ತೆಯಲ್ಲಿರುವ ಜೆಡ್.ಎಂ.ಮೋಟಾರ್ಸ್ ಬಳಿಯಿರುವ ಮಳಿಗೆಯೊಂದರಲ್ಲಿ ಬಿಸಾಡಿದ್ದ ಘನತ್ಯಾಜ್ಯಕ್ಕೆ ಕಿಡಿಗೇಡಿಗಳು ಬೆಂಕಿಯಿಟ್ಟಿರುವ ಘಟನೆ ನಡೆದಿದೆ.
ಈ ಮಳಿಗೆ ಖಾಲಿ ಇರುವುದರಿಂದ ಸುತ್ತಮುತ್ತಲಿನವರು ಕಸ ಎಸೆದಿದ್ದರು. ಈ ಕಸಕ್ಕೆ ಕಿಡಿಗೇಡಿಗಳು ಬೆಂಕಿಯಿಟ್ಟಿದ್ದು, ಹೊಗೆಯಾಡುತ್ತಿತ್ತು.
ಇದನ್ನು ಸೂಕ್ಷ್ಮವಾಗಿ ಗಮನಿಸಿದ ಕೊರೊನಾ ಕರ್ಫ್ಯೂ ಬಂದೋಬಸ್ತ್ ಸಲುವಾಗಿ ನಿಯೋಜನೆಗೊಂಡಿದ್ದ ಪೊಲೀಸ್ ಅಧಿಕಾರಿಯೊಬ್ಬರು ಅದೇ ಮಾರ್ಗವಾಗಿ ತೆರಳುತ್ತಿದ್ದ ಖಾಸಗಿ ವಾಟರ್ ಟ್ಯಾಂಕರ್ ನಿಲ್ಲಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸಪ್ಪನ ಸಮಯ ಪ್ರಜ್ಞೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಓದಿ: ಬೆಂಗಳೂರು ಕರಗ ಸರಳ ಆಚರಣೆಗೆ ತೆರೆ : ತಡ ರಾತ್ರಿ ಹೂವಿನ ಕರಗದೊಂದಿದೆ ಸಂಪನ್ನಗೊಂಡ ಐತಿಹಾಸಿಕ ಉತ್ಸವ..