ಬಳ್ಳಾರಿ : ಜಿಲ್ಲಾಸ್ಪತ್ರೆಯ ಎನ್ ಐಸಿಯು ವಾರ್ಡ್ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ವೈದ್ಯರು ಮತ್ತು ಗೃಹ ರಕ್ಷಕ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ 14 ನವಜಾತ ಶಿಶುಗಳನ್ನು ರಕ್ಷಿಸಲಾಗಿದೆ. ಎನ್ ಐಸಿಯು ವಾರ್ಡ್ಗೆ ವಿದ್ಯುತ್ ಸಂಪರ್ಕಿಸುವ ಬೋರ್ಡ್ನಲ್ಲಿ ಬೆಂಕಿ ಕಾಣಿಸಿಕೊಂಡು ಈ ದುರ್ಘಟನೆ ನಡೆದಿದೆ.
ಬೆಂಕಿ ಕಂಡ ಕೂಡಲೇ ಹೋಂಗಾರ್ಡ್ಸ್ ಬೆಂಕಿ ನಂದಿಸುವ ಯಂತ್ರದ ಸಹಾಯದಿಂದ ಬೆಂಕಿ ನಂದಿಸಿದ್ದಾರೆ. ವಾರ್ಡ್ನಲ್ಲಿ ನವಜಾತ ಶಿಶುಗಳು, ನಿಮೋನಿಯಾಕ್ಕೆ ಒಳಗಾದ ಮಕ್ಕಳು ಮತ್ತು ಅವಧಿಪೂರ್ವ ಹುಟ್ಟಿರುವ ಮಕ್ಕಳು ಸೇರಿದಂತೆ 14 ಶಿಶುಗಳು ಚಿಕಿತ್ಸೆ ಪಡೆಯುತ್ತಿದ್ದವು.
ಕೂಡಲೇ ಮಕ್ಕಳನ್ನು ಬೇರೊಂದು ವಾರ್ಡ್ಗೆ ಸ್ಥಳಾಂತರ ಮಾಡಲಾಯಿತು. ಅಗ್ನಿ ಅವಘಡ ನಡೆದಾಕ್ಷಣ ವೈದ್ಯರು ಮತ್ತು ಬಾಣಂತಿಯರಲ್ಲಿ ಆತಂಕ ಮನೆ ಮಾಡಿತ್ತು. ಅದೃಷ್ಡವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇದನ್ನೂ ಓದಿ: ತುಮಕೂರು : ಈಜು ಕಲಿಯಲು ಹೋಗಿದ್ದ ವ್ಯಕ್ತಿ ನೀರಲ್ಲಿ ಮುಳುಗಿ ಸಾವು