ಬಳ್ಳಾರಿ : ನಗರದ ರಾಯಲ್ ವೃತ್ತದಲ್ಲಿ ರೈತರು ಎತ್ತಿನ ಗಾಡಿ ಚಲಾಯಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರು.
ಎತ್ತಿನ ಬಂಡಿಯೊಂದಿಗೆ ಬಂದ ಸಿರವಾರ- ಚಾಗನೂರು ರೈತರು ವಿವಿಧ ಕಾಯ್ದೆಗಳನ್ನು ಹಿಂಪಡೆಯುವಂತೆ ಪ್ರತಿಭಟನೆ ಮಾಡಿದರು. ಈ ಸಮಯದಲ್ಲಿ ವಿವಿಧ ಕನ್ನಡಪರ, ರೈತ ಸಂಘಟನೆಗಳು, ಸಿಪಿಐ, ಸಿಪಿಎಂ, ಕಾಂಗ್ರೆಸ್ ಪಕ್ಷದ ಮುಖಂಡರು ಭಾಗವಹಿಸಿದ್ದರು.