ETV Bharat / city

ಬಾಗೇವಾಡಿ ಉಪ ಕಾಲುವೆ ಮೂಲ ವಿನ್ಯಾಸವೇ ಬದಲು ಆರೋಪ - undefined

ಬಾಗೇವಾಡಿ ಉಪ ಕಾಲುವೆಯ ಮೂಲ ವಿನ್ಯಾಸ ಬದಲಿಸಿದ್ದಕ್ಕೆ ಈ ಭಾಗದ ನೂರಾರು ರೈತರು ಪ್ರಬಲ ವಿರೋಧ ವ್ಯಕ್ತಪಡಿಸಿದ್ದಾರೆ. ರೈತರು ಆರೋಪಿಸುತ್ತಿರುವಂತೆ ಬಾಗೇವಾಡಿ ಉಪ ಕಾಲುವೆಯ ನವೀಕರಣ ಕಾರ್ಯ ಮೂಲ ವಿನ್ಯಾಸದಂತೆ ನಡೆಯುತ್ತಿಲ್ಲವಂತೆ.

ಬಾಗೇವಾಡಿ ಉಪಕಾಲುವೆ
author img

By

Published : Jun 25, 2019, 10:02 PM IST

ಬಳ್ಳಾರಿ: ಸಿರುಗುಪ್ಪ ತಾಲೂಕಿನ ಸಿರಿಗೇರಿ ಕ್ರಾಸ್ ಬಳಿಯ ಬಾಗೇವಾಡಿ (ಎಲ್ಎಲ್​ಸಿ 70) ಉಪ ಕಾಲುವೆ ಅವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿದೆ. ಮೂಲ ವಿನ್ಯಾಸಕ್ಕಿಂತಲೂ ಬೇರೆಯದೇ ಆಗಿ ಈ ಉಪ ಕಾಲುವೆ ನವೀಕರಣ ಕಾರ್ಯ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಉಪ ಕಾಲುವೆಯ ಮೂಲ ವಿನ್ಯಾಸ ಬದಲಿಸಿದ್ದಕ್ಕೆ ಈ ಭಾಗದ ನೂರಾರ ರೈತರ ಪ್ರಬಲ ವಿರೋಧ ವ್ಯಕ್ತಪಡಿಸಿದ್ದಾರೆ. ರೈತರು ಆರೋಪಿಸುತ್ತಿರುವಂತೆ ಬಾಗೇವಾಡಿ ಉಪ ಕಾಲುವೆಯ ನವೀಕರಣ ಕಾರ್ಯ ಮೂಲ ವಿನ್ಯಾಸದಂತೆ ನಡೆಯುತ್ತಿಲ್ಲ. ಮೂಲ ವಿನ್ಯಾಸದಂತೆ ನಡೆದಿದ್ದರೆ ಅಂದಾಜು ಹತ್ತಾರು ಡಿಸ್ಟ್ರಿಬ್ಯೂಟರ್ ಪಾಯಿಂಟ್​ಗಳನ್ನು ಹೊಂದಿರುವ ರೈತರ ಹೊಲಗಳಿಗೆ ಸರಾಗವಾಗಿ ನೀರು ಹರಿಯುತ್ತಿತ್ತು ಎಂದಿದ್ದಾರೆ.

ಬಾಗೇವಾಡಿ ಉಪ ಕಾಲುವೆ ಮೂಲ ವಿನ್ಯಾಸ ಬದಲು ಆರೋಪ

ಡಿಸ್ಟ್ರಿಬ್ಯೂಟರ್ ಪಾಯಿಂಟ್ 18, 19, 20, 21, 22 ಸೇರಿದಂತೆ ಇತರೆ ಡಿಪಿಗಳ ವ್ಯಾಪ್ತಿಯ ಸಾವಿರಾರು ಎಕರೆಯ ಹೊಲಗಳಿಗೆ ಈ ಉಪ ಕಾಲುವೆ ನೀರು ಸರಾಗವಾಗಿ ಹರಿಯುತ್ತಿತ್ತು. ಇದರಿಂದ ಉತ್ತಮ ಬೆಳೆಯನ್ನೂ ಬೆಳೆಯಬಹುದಿತ್ತು. ‌ ತಾಲೂಕಿನ ದರೂರು, ಕರೂರು, ಹಾಗಲೂರು, ಹೊಸಳ್ಳಿ, ಚಾನಾಳ್ ಸೇರಿ ಇತರೆ ಗ್ರಾಮಗಳು ಇದರ ಲಾಭ ಪಡೆಯಲಿದ್ದವು ಎಂದು ವಿವರಿಸಿದ್ದಾರೆ.

ರೈತರಿಗೆ ಇಷ್ಟೆಲ್ಲಾ ಅನುಕೂಲ ಮಾಡಿಕೊಡುವ ಕಾಲುವೆ ಮೂಲ ವಿನ್ಯಾಸ ಬದಲಿಸಬಾರದು. ಉಪ ಕಾಲುವೆ ನೀರು ಈಗ ರಭಸವಾಗಿ ಹರಿಯುತ್ತಿದೆ. ಮೂಲ ವಿನ್ಯಾಸದಂತೆಯೆ ಉಪ ಕಾಲುವೆ ನವೀಕರಣ ಮಾಡೋದಾಗಿ ಗುತ್ತಿಗೆದಾರರು ಹೇಳಿದ್ದಾರೆ. ಆದರೆ, ಕಾಂಕ್ರೀಟ್ ಹಾಕೋವರೆಗೂ ಯಾವುದೇ ಗ್ಯಾರಂಟಿ ಇಲ್ಲ ಎಂದು ಕರೂರು ಗ್ರಾಮದ ರೈತ ರಾಮನಗೌಡರು ಹೇಳಿದ್ದಾರೆ.

ಬಾಗೇವಾಡಿ ಉಪ ಕಾಲುವೆ ಉದ್ದ ಅಗಲ, ಆಳ ಬದಲಾಗಿದೆ. ಅದ್ದರಿಂದ ಡಿಪಿಗಳಿಗೆ ನೀರು ಹರಿಯುವ ಸಂಶಯ ನಮಗೆ‌ ಮೂಡಿತ್ತು. ಈ ಮೊದಲು 18 ಅಡಿ ಉದ್ದ-ಅಗಲವಿತ್ತು. ಆದರೀಗ ಅದು 21 ಅಡಿ ಆಗಿದೆ. ಆಳವೂ ಜಾಸ್ತಿಯಾಗಲಿದೆ. ಹೀಗಾಗಿ, ಇತ್ತೀಚೆಗೆ ಎಲ್ಲ ರೈತರು ಒಗ್ಗೂಡಿ ಪ್ರತಿಭಟನೆ ನಡೆಸಿದೆವು. ಆಗ ಗುತ್ತಿಗೆದಾರ ಮೂಲ ವಿನ್ಯಾಸದಂತೆ ಉಪ ಕಾಲುವೆ ನವೀಕರಣ ಮಾಡಲು ಒಪ್ಪಿಕೊಂಡಿದ್ದಾರೆ. ಆದರೆ, ಕಾಂಕ್ರೀಟ್ ಹಂತ ತಲುಪಿದಾಗ ಮಾತ್ರ ಕಾಲುವೆಯ ನೈಜ ಚಿತ್ರಣ ಗೊತ್ತಾಗಲಿದೆ ಎಂದು ಹೆಚ್.ಹೊಸಳ್ಳಿ ರೈತ ಮಂಜುನಾಥ ಆಚಾರ್ಯ ತಿಳಿಸಿದ್ದಾರೆ.

Intro:ಬಾಗೇವಾಡಿ ಉಪಕಾಲುವೆ ಅವೈಜ್ಞಾನಿಕವಾಗಿ ನವೀಕರಣ...
ಜಿಲ್ಲೆಯ ರೈತರ ಪ್ರಬಲ ವಿರೋಧದಿಂದ ತನ್ನ ಪಥ ಬದಲಿಸಿದ ಗುತ್ತಿಗೆದಾರ..!
ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಕ್ರಾಸ್ ಬಳಿಯ ಬಾಗೇವಾಡಿ (ಎಲ್ ಎಲ್ ಸಿ 70) ಉಪಕಾಲುವೆ ಅವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿದೆ. ಮೂಲ ವಿನ್ಯಾಸ ಕ್ಕಿಂತಲೂ ಹೊಸ ವಿನ್ಯಾಸದೊಂದಿಗೆ ಈ ಉಪಕಾಲುವೆ ನವೀಕರಣ ಕಾರ್ಯ ನಡೆದಿದೆ. ಮೂಲ ವಿನ್ಯಾಸ ಬದಲಿಸಿ
ದ್ದಕ್ಕೆ ಉಪಕಾಲುವೆ ಭಾಗದ ನೂರಾರ ರೈತರ ಪ್ರಬಲ ವಿರೋಧ ಎದುರಾದ ಪರಿಣಾಮ ನೆರೆಯ ಆಂಧ್ರಪ್ರದೇಶದ ಮೂಲದ ಗುತ್ತಿಗೆದಾರ ತನ್ನ ಪಥವನ್ನೇ ಬದಲಿಸಿರುವ ಪ್ರಸಂಗವು ಅಲ್ಲಿ ನಡೆದಿದೆ.
ಈ ಬಾಗೇವಾಡಿ ಉಪಕಾಲುವೆಯ ಮೂಲ ವಿನ್ಯಾಸದಂತೆ ನವೀಕರಣಕಾರ್ಯ ನಡೆದರೆ ಅಂದಾಜು ಹತ್ತಾರು ಡಿಸ್ಟ್ರಿ ಬ್ಯೂಟರ್ ಪಾಯಿಂಟ್ ಗಳನ್ನು ಹೊಂದಿರುವ ರೈತರ ಹೊಲಗಳಿಗೆ ಸರಾಗವಾಗಿ ಕಾಲುವೆಯ ನೀರು ಹರಿಯಲಿದೆ ಎಂಬುದು ಅಲ್ಲಿನ ರೈತರ ವಾದ.
ಡಿಸ್ಟ್ರಿಬ್ಯೂಟರ್ ಪಾಯಿಂಟ್ 18, 19, 20, 21, 22 ಸೇರಿದಂತೆ ಇತರೆ ಡಿಪಿಗಳ ವ್ಯಾಪ್ತಿಯ ಸಾವಿರಾರು ಎಕರೆ ಪ್ರದೇಶದ ಹೊಲ ಗಳಿಗೆ ಈ ಉಪಕಾಲುವೆ ನೀರು ಸರಾಗವಾಗಿ ಹರಿಯುತ್ತಿತ್ತು. ಅದರಿಂದ ಅತ್ಯುತ್ತಮ ಬೆಳೆಯನ್ನು ಬೆಳೆಯಲಾಗುತ್ತಿತ್ತು.‌ ತಾಲೂಕಿನ ದರೂರು, ಕರೂರು, ಹಾಗಲೂರು, ಹೊಸಳ್ಳಿ, ಚಾನಾಳ್ ಸೇರಿದಂತೆ ಇತರೆ ಗ್ರಾಮಗಳ ಮೂಲಕ ಈ ಎಲ್ ಎಲ್ ಸಿ ಉಪಕಾಲುವೆ ಹರಿಯಲಿದೆ. ಮೂಲ ವಿನ್ಯಾಸದಂತೆ ಉಪಕಾಲುವೆ ನವೀಕರಣ ಆಗಬೇಕೆಂಬುದು ಪ್ರತಿಯೊಬ್ಬ ರೈತರೂ ಒತ್ತಾಯಿಸುತ್ತಿದ್ದಾರೆ.
ಅವೈಜ್ಞಾನಿಕವಾಗಿ ಉಪಕಾಲುವೆ ನವೀಕರಣ: ಎಲ್ ಎಲ್ ಸಿ 70 ಉಪಕಾಲುವೆಯ ನವೀಕರಣಕಾರ್ಯ ಮೂಲ ವಿನ್ಯಾಸದ ಹೊರತಾಗಿಯೇ ನಿರ್ಮಾಣವಾಗುತ್ತಿದೆಯಾದ್ರೂ, ಕೆಲವೆಡೆ ಹೊಸ ವಿನ್ಯಾಸವನ್ನು ಬದಲಿಸಿ, ಮೂಲ ವಿನ್ಯಾಸದತ್ತ ಕಾಲುವೆ ನವೀಕರಣಕಾರ್ಯ ನಡೆಯುತ್ತಿದೆ. ಆದರೆ, ಕಾಂಕ್ರೀಟ್ ರೂಪ ತಾಳಿದಾಗ, ಇದರ ನಿಜ ಸ್ವರೂಪ ಬಯಲಾಗಲಿದೆ.

Body:ಮೂಲ ವಿನ್ಯಾಸ ಬದಲಿಸಬಾರದು: ಉಪಕಾಲುವೆ ನವೀಕರಣ ಕಾರ್ಯವು ಯಾವುದೇ ಕಾರಣಕ್ಕೂ ಮೂಲ ವಿನ್ಯಾಸ ಬದಲಿಸ ದಂತೆ ನಡೆಯಬೇಕು. ಉಪಕಾಲುವೆ ನೀರು ಈ ಮೊದ್ಲು ಮಲ್ತು ಹೋಗುತ್ತಿತ್ತು. ಈಗ ನೀರು ರಭಸವಾಗಿ ಓಡುತ್ತದೆ. ಹೀಗಾಗಿ, ಡಿಪಿಗಳಿಗೆ ನೀರು ಸರಾಗವಾಗಿ ಅರಿಯಲು ಸಮಸ್ಯೆ ಆಗುತ್ತದೆ. ಮೂಲ ವಿನ್ಯಾಸದಂತೆ ಉಪಕಾಲುವೆ ನವೀಕರಣ ಮಾಡೋದಾಗಿ ಗುತ್ತಿಗೆದಾರರು ಹೇಳಿದ್ದಾರೆ. ಆದರೆ, ಕಾಂಕ್ರೀಟ್ ಹಾಕೋವರೆಗೂ ಯಾವುದೇ ಗ್ಯಾರಂಟಿ ಇಲ್ಲ. ಆಗಾಗಿ, ಎರಡು ಅಥವಾ ಮೂರು ದಿನಕ್ಕೊಮ್ಮೆಯಾದ್ರೂ ಈ ಉಪ ಕಾಲುವೆ ಮೇಲೆ ಓಡಾಡುತ್ತಿದ್ದೇವೆ ಎಂದು ಕರೂರು ಗ್ರಾಮದ ರೈತ ರಾಮನಗೌಡರು ತಿಳಿಸಿದ್ದಾರೆ.
ಉಪಕಾಲುವೆ ಉದ್ದಗಲ, ಆಳ ಬದಲಾಗಿದೆ: ಬಾಗೇವಾಡಿ ಉಪಕಾಲುವೆ ಉದ್ದಗಲ, ಆಳ ಬದಲಾಗಿದೆ. ಅದರಿಂದ ಡಿಪಿ ಗಳಿಗೆ ನೀರೇ ಹರಿಯುವ ಸಂಶಯವೇ ನಮಗೆ‌ ಮೂಡಿತ್ತು. ಈ ಮೊದ್ಲು 18 ಅಡಿ ಉದ್ದಗಲವಿತ್ತು. ಆದರೀಗ ಅದು 21 ಅಡಿ ಆಗಿದೆ. ಆಳವೂ ಜಾಸ್ತಿಯಾಗಲಿದೆ. ಹೀಗಾಗಿ, ಮೊನ್ನೆತಾನೇ ಎಲ್ಲ ರೈತರು ಒಗ್ಗೂಡಿ ಪ್ರತಿಭಟನೆ ನಡೆಸಿದೇವು. ಆಗ ಗುತ್ತಿಗೆ ದಾರ ಮೂಲ ವಿನ್ಯಾಸದಂತೆ ಉಪಕಾಲುವೆ ನವೀಕರಣ ಮಾಡಲು ಒಪ್ಪಿಕೊಂಡಿದ್ದಾರೆ. ಆದರೆ, ಕಾಂಕ್ರೀಟ್ ಹಂತ ತಲುಪಿದಾಗ ಕಾಲುವೆಯ ನೈಜ ಚಿತ್ರಣ ಗೊತ್ತಾಗಲಿದೆ ಎಂದು ಹೆಚ್.ಹೊಸಳ್ಳಿ ರೈತ ಮಂಜುನಾಥ ಆಚಾರ್ಯ ತಿಳಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_02_25_BAGEVADI_LLC_CANAL_REPAIR_VISUALS_7203310

KN_BLY_02b_25_BAGEVADI_LLC_CANAL_REPAIR_VISUALS_7203310

KN_BLY_02c_25_BAGEVADI_LLC_CANAL_REPAIR_VISUALS_7203310

KN_BLY_02d_25_BAGEVADI_LLC_CANAL_REPAIR_VISUALS_7203310

KN_BLY_02e_25_BAGEVADI_LLC_CANAL_REPAIR_VISUALS_7203310

KN_BLY_02f_25_BAGEVADI_LLC_CANAL_REPAIR_VISUALS_7203310

KN_BLY_02g_25_BAGEVADI_LLC_CANAL_REPAIR_VISUALS_7203310

KN_BLY_02h_25_BAGEVADI_LLC_CANAL_REPAIR_BYTE_7203310

KN_BLY_02i_25_BAGEVADI_LLC_CANAL_REPAIR_BYTE_7203310

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.