ಬಳ್ಳಾರಿ: ಇಲ್ಲಿನ ಗಾಂಧಿನಗರ ವ್ಯಾಪ್ತಿಯ ವಾಟರ್ ಬೂಸ್ಟರ್ ಎದುರಿನ ಕರ್ನಾಟಕ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಸತತ ಒಂದು ತಿಂಗಳಿನಿಂದ ಕುಡಿಯುವ ನೀರಿನ ನಲ್ಲಿಯೊಳಗೆ ಒಳಚರಂಡಿ ನೀರು ಪೂರೈಕೆಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಒಂದು ತಿಂಗಳಿಂದ ಕುಡಿಯುವ ನೀರಿನ ನಲ್ಲಿಯೊಳಗೆ ಒಳಚರಂಡಿ ನೀರು ಪೂರೈಕೆಯಾಗುತ್ತಿದೆ. ಇದರಿಂದಾಗಿ ಸ್ಥಳೀಯರು ಪರದಾಡುವಂತಾಗಿದೆ. ಈ ಸಂಬಂಧ ಗಾಂಧಿನಗರದ ವಾಟರ್ ಬೂಸ್ಟರ್ನ ಸಿಬ್ಬಂದಿಯ ಗಮನ ಸೆಳೆಯಲಾಗಿದೆ.
ಆದರೆ, ಈವರೆಗೂ ವಾಟರ್ ಬೂಸ್ಟರ್ನ ಸಿಬ್ಬಂದಿ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.