ETV Bharat / city

ಬಳ್ಳಾರಿ ಜಿಲ್ಲೆ ಇಬ್ಭಾಗ ವಿಚಾರ: ಶಾಸಕ ಸೋಮಶೇಖರ ರೆಡ್ಡಿಯಿಂದಲೂ ಅಪಸ್ವರ

ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಸುವ ಸಲುವಾಗಿ ಗುರುವಾರ ಸಿಎಂ ಬಿ.ಎಸ್. ಯಡಿಯೂರಪ್ಪ ಬಳಿ ಹೋಗಿದ್ದ ನಿಯೋಗವನ್ನು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿಯವರು ಅದೊಂದು ಸ್ವಾರ್ಥಿಗಳ ಕೂಟವೆಂದು ಜರಿದಿದ್ದಾರೆ. ಅಲ್ಲದೆ, ಬಳ್ಳಾರಿ ಜಿಲ್ಲೆ ಇಬ್ಭಾಗ ಮಾಡುವ ವಿಚಾರಕ್ಕೆ ಅಪಸ್ವರ ಎತ್ತಿದ್ದಾರೆ.

ಸೋಮಶೇಖರ ರೆಡ್ಡಿ
author img

By

Published : Sep 20, 2019, 8:06 PM IST

ಬಳ್ಳಾರಿ: ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಸುವ ವಿಚಾರ ಕುರಿತು ಗುರುವಾರ ಸಿಎಂ ಬಿ.ಎಸ್ ಯಡಿಯೂರಪ್ಪ ಬಳಿ ಹೋಗಿದ್ದ ನಿಯೋಗವನ್ನು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿಯವರು ಅದೊಂದು ಸ್ವಾರ್ಥಿಗಳ ಕೂಟವೆಂದು ಜರಿದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಗಾಲಿ ಸೋಮಶೇಖರ ರೆಡ್ಡಿ

ನಗರದ ನಾನಾ ಕಾಲೊನಿಯಲ್ಲಿ ಮಳೆಯಿಂದ ಜಲಾವೃತಗೊಂಡ ಪ್ರದೇಶಗಳಿಗೆ ಭೇಟಿ‌ ನೀಡಿ, ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿರು. ಆ ನಿಯೋಗದಲ್ಲಿರುವ ಎಲ್ಲರೂ ಕೂಡ ಸ್ವಾರ್ಥಿಗಳೇ, ತಮ್ಮ ಸ್ವಹಿತಾಸಕ್ತಿಗೋಸ್ಕರ ಜಿಲ್ಲೆಯ ಇಬ್ಭಾಗಕ್ಕೆ ಮುಂದಾಗಿರೋದು ಖಂಡನೀಯ ಎಂದರು.

ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಸಲು ಹೊರಸಿರುವುದಕ್ಕೆ ನನ್ನ ವಿರೋಧವಿದೆ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಪುನರ್ ಪರಿಶೀಲಿಸಬೇಕು. ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡೋದು ಸರಿಯಲ್ಲ. ಇದು ತುಘಲಕ್ ರೀತಿಯ ವರ್ತನೆ. ನೆರೆಯ ಆಂಧ್ರಪ್ರದೇಶದ ಅನಂತಪುರ, ಕರ್ನಾಟಕ ರಾಜ್ಯದ ಬೆಳಗಾವಿ ಅತಿದೊಡ್ಡ ಜಿಲ್ಲೆಗಳಿಲ್ಲವೇ?. ಸಚಿವ ಶ್ರೀರಾಮುಲು ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸಚಿವ ಸಂಪುಟದಲ್ಲಿ ಶ್ರೀ ರಾಮುಲು ಇರುತ್ತಾರೆ ಎಂದು ಹೇಳಿದರು.

ಇನ್ನು, ಹೊಸಪೇಟೆಯನ್ನು ಜಿಲ್ಲಾ ಕೇಂದ್ರವನ್ನಾಗಿ ವಿಸ್ತರಿಸಲು ಸಾಧ್ಯವಾಗದು. ಈ ಬಗ್ಗೆ ಮುಖ್ಯಮಂತ್ರಿಯವರು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ. ಬಳ್ಳಾರಿಗೆ ವಿಜಯನಗರದ ಹೆಸರನ್ನು ಇಡಿ. ಅದು ಬಿಟ್ಟು ನೂತನ ಜಿಲ್ಲೆಯನ್ನಾಗಿ ವಿಜಯನಗರ ಕ್ಷೇತ್ರವನ್ನು ಬದಲಿಸೋದು ಬೇಡ ಎಂದರು.

Intro:ಕೆಲ ಸ್ವಾರ್ಥಿಗಳ ಹಿತಾಸಕ್ತಿಗೆ ಜಿಲ್ಲೆಯ ಇಬ್ಭಾಗ ಮಾಡೋದು ಬ್ಯಾಡ: ಬಳ್ಳಾರಿಗೇನೆ ವಿಜಯನಗರ ಎಂದು ಹೆಸರಿಡಿ: ಶಾಸಕ ರೆಡ್ಡಿ
ಬಳ್ಳಾರಿ: ಪ್ರತ್ಯೇಕ ವಿಜಯನಗರ ಜಿಲ್ಲೆಯನ್ನಾಗಿಸುವ ಸಲುವಾಗಿ ನಿನ್ನೆಯ ದಿನ ಸಿಎಂ ಬಿಎಸ್ ಯಡಿಯೂರಪ್ಪ ಬಳಿ ಹೋಗಿದ್ದ ನಿಯೋಗವನ್ನು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ
ರೆಡ್ಡಿಯವ್ರು ಅದೊಂದು ಸ್ವಾರ್ಥಿಗಳ ಕೂಟವೆಂದು ಜರಿದಿದ್ದಾರೆ.
ಬಳ್ಳಾರಿ ನಗರದ ನಾನಾ ಕಾಲೊನಿಗಳಲ್ಲಿ ಮಳೆ ನೀರು ಜಲಾವೃತ್ತ ಗೊಂಡ ಪ್ರದೇಶಗಳಿಗೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದ ಬಳಿಕ, ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಆ ನಿಯೋಗದಲ್ಲಿರೊ ಎಲ್ಲರೂ ಕೂಡ ಸ್ವಾರ್ಥಿಗಳೇ. ತಮ್ಮ ಸ್ವಹಿತಾಸಕ್ತಿಗೋಸ್ಕರವಾಗಿ ಜಿಲ್ಲೆಯ ಇಬ್ಭಾಗಕ್ಕೆ ಮುಂದಾಗಿರೋದು ಅಕ್ಷಮ್ಯ ಅಪರಾಧ ಎಂದು ಛೇಡಿಸಿದ್ದಾರೆ.
Body:ಪ್ರತ್ಯೇಕ ವಿಜಯನಗರ ಜಿಲ್ಲೆಯನ್ನಾಗಿಸಲು ಹೊರಟವರೆಲ್ಲರೂ ಸ್ವಾರ್ಥಿಗಳು. ಇದಕ್ಕೆ ನನ್ನ ವಿರೋಧವಿದೆ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವ್ರು ಪುನರ್ ಪರಿಶೀಲಿಸಬೇಕು. ಯಾರೋ ಹೋಗಿ ಕೊಟ್ರೆ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡೋದು ಸರಿಯಲ್ಲ.
ಇದು ತುಘಲಕ್ ರೀತಿಯ ವರ್ತನೆ ಎಂದರು.
ನೆರೆಯ ಆಂಧ್ರಪ್ರದೇಶದ ಅನಂತಪುರ, ಕರ್ನಾಟಕ ರಾಜ್ಯದ ಬೆಳಗಾವಿ ಅತಿದೊಡ್ಡ ಜಿಲ್ಲೆಗಳಿಲ್ಲವೇ?. ಸಚಿವ ಶ್ರೀರಾಮುಲು ಕೂಡ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸಚಿವ ಸಂಪುಟದಲ್ಲಿ ಶ್ರೀ ರಾಮುಲು ಇರುತ್ತಾರೆ ಎಂದರು.
ಹೊಸಪೇಟೆ ಜಿಲ್ಲಾ ಕೇಂದ್ರವನ್ನಾಗಿ ವಿಸ್ತರಿಸಲು ಸಾಧ್ಯವಾಗದು. ಈ ಬಗ್ಗೆ ಮುಖ್ಯಮಂತ್ರಿಯವ್ರು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ. ಬಳ್ಳಾರಿಗೇನೆ ವಿಜಯನಗರ ಹೆಸರನ್ನು ಇಡಿ. ಅದುಬಿಟ್ಟು ನೂತನ ಜಿಲ್ಲೆಯನ್ನಾಗಿ ವಿಜಯನಗರ ಕ್ಷೇತ್ರವನ್ನು ಬದಲಿಸೋದು ಬೇಡ ಎಂದಿದ್ದಾರೆ. ನನಗಂತೂ ಈ ವಿಜಯನಗರ ಜಿಲ್ಲೆಯನ್ನಾಗಿಸೋದು ಸರಿಯಿಲ್ಲ ಎಂದು ಶಾಸಕ ರೆಡ್ಡಿ ವಿರೋಧ ವ್ಯಕ್ತಪಡಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_3_MLA_SOMASHEKARREDY_BYTE_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.