ಬಳ್ಳಾರಿ: ಮಹಾ ಮೃತ್ಯುಂಜಯ ತಪೋತ್ಸವದ ಮೆರವಣಿಗೆಯಲ್ಲಿ ಬಲಿಜ ಸಮುದಾಯದಿಂದ ಜೈನ ಮುನಿಯಾಗಿ ದೀಕ್ಷೆ ಪಡೆದ ದೇವಸಿದ್ ವಿಜಯ್ ಜೀ ಮೆರವಣಿಗೆ ನಡೆಯಿತು.
![Devasid Vijay ji celebrated march as Jaina muni](https://etvbharatimages.akamaized.net/etvbharat/prod-images/kn-03-060819-bly-jainsplnews-ka10007_06082019155452_0608f_01525_339.jpg)
ಬಳ್ಳಾರಿ ನಗರದ ಜೈನ್ ಮಾರುಕಟ್ಟೆ ರಸ್ತೆಯಿಂದ ಪ್ರಾರಂಭವಾದ ಮೆರವಣಿಗೆ ಜೈನ್ ಸಮುದಾಯದ ದೇವಸ್ಥಾನದವರೆಗೆ ನಡೆಯಿತು. ಮೆರವಣಿಗೆ ಸಮಯದಲ್ಲಿ ಜೈನ ಮುನಿಗಳಿಗೆ ಅಕ್ಷತೆ ಹಾಕಿ ನಮಸ್ಕರಿಸಲಾಯ್ತು.
ಒಬ್ಬ ಜೈನ ಸಮುದಾಯದ ಮಾಲೀಕರ ಬೆಳ್ಳಿ ಮತ್ತು ಬಂಗಾರದ ಅಂಗಡಿಯಲ್ಲಿ ಕೆಲಸ ಮಾಡುವ ಯುವಕ ಜೈನ ಮುನಿಯಾಗಿದ್ದು, ಜೈನ ಸಮುದಾಯ ಅವರನ್ನು ದಾರಿಯುದ್ದಕ್ಕೂ ಮೆರವಣಿಗೆ ಮಾಡಿಕೊಂಡು ಬಂದಿದ್ದು ವಿಶೇಷವಾಗಿತ್ತು.