ETV Bharat / city

ಗಣಿನಾಡಲ್ಲಿ ಮತ್ತೊಂದು ಬಾಲ್ಯ ವಿವಾಹ ಪ್ರಕರಣ: ಬಾಲಕಿ ರಕ್ಷಿಸಿದ ಅಧಿಕಾರಿಗಳು - ಬಳ್ಳಾರಿ ಸುದ್ದಿ

ಬಳ್ಳಾರಿಯಲ್ಲಿ ಅಕ್ಷಯ ತೃತೀಯದಂದು ನಾಲ್ಕು ಬಾಲ್ಯ ವಿವಾಹ ಪ್ರಕರಣಗಳು ಪತ್ತೆಯಾಗಿದ್ದವು. ಅದರ ಬೆನ್ನಲ್ಲೇ ಈ ದಿನ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಆದರೆ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ.ಆರ್.ನಾಗರಾಜ ಅವರ ಸೂಚನೆಯ ಮೇರೆಗೆ ಸಂಡೂರು ತಾಲೂಕಿನ ಸಿಡಿಪಿಒ ಪ್ರೇಮಮೂರ್ತಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರೊಡಕ್ಷನ್ ಆಫೀಸರ್ ಚನ್ನಬಸವ ಪಾಟೀಲ್​​ ನೇತೃತ್ವದ ತಂಡವು ದಾಳಿ‌ ನಡೆಸಿ ಈ ಬಾಲ್ಯ ವಿವಾಹ ತಡೆದಿದ್ದಾರೆ.

Child marriage case reported in Bellary
ಬಾಲ್ಯ ವಿವಾಹ ಪ್ರಕರಣ
author img

By

Published : Apr 29, 2020, 9:02 PM IST

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನಲ್ಲಿಂದು ಮತ್ತೊಂದು ಬಾಲ್ಯ ವಿವಾಹ ಪ್ರಕರಣ ವರದಿಯಾಗಿದ್ದು, ಇತ್ತೀಚೆಗೆ ಕೆಲವೇ ದಿನಗಳಲ್ಲಿ ಜಿಲ್ಲೆಯಲ್ಲಿ ಐದು ಬಾಲ್ಯವಿವಾಹ ಯತ್ನ ಪ್ರಕರಣಗಳು ಬೆಳಕಿಗೆ ಬಂದಿವೆ.

ಬಸವ ಜಯಂತಿ ದಿನದಂದು (ಅಕ್ಷಯ ತೃತೀಯ) ಜಿಲ್ಲಾದ್ಯಂತ ನಾಲ್ಕು ಬಾಲ್ಯ ವಿವಾಹ ಪ್ರಕರಣಗಳು ಪತ್ತೆಯಾಗಿದ್ದವು. ಅದರ ಬೆನ್ನಲ್ಲೇ ಈ ದಿನ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲೆಯ ಸಂಡೂರು ತಾಲೂಕಿನ ದೌಲತ್ ಪುರ ಗ್ರಾಮದಲ್ಲಿ 17 ವರ್ಷದ ಬಾಲಕಿಯೊಂದಿಗೆ 23 ವರ್ಷದ ಸಂಬಂಧಿಯೊಬ್ಬರನ್ನ ಉಭಯ ಕುಟುಂಬದ ಪೋಷಕರು ಸದ್ದಿಲ್ಲದೇ ಬಾಲ್ಯ ವಿವಾಹ ನಡೆಸಲು ಮುಂದಾಗಿದ್ದರು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ.ಆರ್.ನಾಗರಾಜ ಅವರ ಸೂಚನೆಯ ಮೇರೆಗೆ ಸಂಡೂರು ತಾಲೂಕಿನ ಸಿಡಿಪಿಒ ಪ್ರೇಮಮೂರ್ತಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರೊಡಕ್ಷನ್ ಆಫೀಸರ್ ಚನ್ನಬಸವ ಪಾಟೀಲ್​​ ನೇತೃತ್ವದ ತಂಡವು ದಾಳಿ‌ ನಡೆಸಿ ಈ ಬಾಲ್ಯ ವಿವಾಹ ತಡೆದಿದ್ದಾರೆ.

ತಲೆಮರೆಸಿಕೊಂಡ ವರ...

ಬಾಲ್ಯ ವಿವಾಹ ತಡೆಯಲು ಬಂದಿದ್ದ ಅಧಿಕಾರಿಗಳ ತಂಡವನ್ನು ನೋಡುತ್ತಿದ್ದಂತೆಯೇ ಗಾಬರಿಗೊಂಡ ವರ ಮದುವೆ ಮಂಟಪದಿಂದಲೇ ತಲೆಮರೆಸಿಕೊಂಡಿದ್ದಾನೆ. ಬಾಲಕಿಯನ್ನು ಬಳ್ಳಾರಿಯ ಬಾಲಕಿಯರ ಬಾಲಮಂದಿರದಲ್ಲಿ ರಕ್ಷಿಸಿ ಇಡಲಾಗಿದೆ.

ಉಭಯ ಪೋಷಕರಿಗೆ ಕಾನೂನಿನ ಅರಿವು...

ವಧು ಮತ್ತು ವರನ ಕುಟುಂಬದ ಪೋಷಕರಿಗೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ‌ ಕಲ್ಯಾಣ ಇಲಾಖೆ ಅಧಿಕಾರಿಗಳು ಕಾನೂನಿನ‌ ಅರಿವು ಮೂಡಿಸಿದ್ರು.‌ ಈ ಕುರಿತು ಗಾದಿಗನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.