ETV Bharat / city

ಭಾಷೆ, ನೆಲ, ಜಲ ರಕ್ಷಣೆಗೆ ಕನ್ನಡ ಶಕ್ತಿ ಕೇಂದ್ರ: ಡಾ.ಕೆ.ರವೀಂದ್ರನಾಥ - ಸಾಹಿತಿ ಚಿದಾನಂದಮೂರ್ತಿ ಸಂಸ್ಮರಣೆ

ಚಿಮೂ ಅವರ ಕನ್ನಡ ಭಾಷೆಯ ಬಗೆಗಿನ ವಿಶೇಷ ಕಾಳಜಿಯಿಂದಲೇ ಕನ್ನಡ ವಿವಿ ತಲೆ ಎತ್ತಲು ಸಾಧ್ಯವಾಗಿದೆ ಎಂದು ಹಂಪಿ ವಿವಿಯ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಕೆ.ರವೀಂದ್ರನಾಥ ಹೇಳಿದರು.

chidananda-murthy-memorial-day
ಚಿಮೂ ಶ್ರದ್ಧಾಂಜಲಿ ಸಭೆ
author img

By

Published : Jan 17, 2020, 7:54 AM IST

ಹೊಸಪೇಟೆ: ಕನ್ನಡ ಭಾಷೆ ಸೇರಿದಂತೆ ವಿವಿಧ ರಂಗಗಳ ಚರ್ಚೆ ಹಾಗೂ ಉಳಿವಿಗಾಗಿ ಕನ್ನಡ ಶಕ್ತಿ ಕೇಂದ್ರವನ್ನು ಸ್ಥಾಪಿಸಲಾಯಿತು. ಚಿಮೂ ಅವರ ಕನ್ನಡ ಭಾಷೆಯ ಬಗೆಗಿನ ವಿಶೇಷ ಕಾಳಜಿಯಿಂದಲೇ ಕನ್ನಡ ವಿವಿ ತಲೆ ಎತ್ತಲು ಸಾಧ್ಯವಾಗಿದೆ ಎಂದು ಹಂಪಿ ವಿವಿಯ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಕೆ.ರವೀಂದ್ರನಾಥ ಹೇಳಿದರು.

ಚಿಮೂ ಶ್ರದ್ಧಾಂಜಲಿ ಸಭೆ

ನಗರದ ಕೊಟ್ಟೂರು ಸ್ವಾಮಿ ಸಭಾಮಂಟಪದಲ್ಲಿ ನಡೆದ ಚಿಮೂ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಡಾ.ಚಿದಾನಂದ ಮೂರ್ತಿ ರಾಜ್ಯದಲ್ಲಿ ಶ್ರೇಷ್ಠ ಸಂಶೋಧನೆಯನ್ನು ಮಾಡಿದ್ದಾರೆ. ಅವರದು ಕ್ರಿಯಾಶೀಲ ವ್ಯಕ್ತಿತ್ವ ಎಂದು ಹೇಳಿದರು.

ಹೊಸಪೇಟೆ: ಕನ್ನಡ ಭಾಷೆ ಸೇರಿದಂತೆ ವಿವಿಧ ರಂಗಗಳ ಚರ್ಚೆ ಹಾಗೂ ಉಳಿವಿಗಾಗಿ ಕನ್ನಡ ಶಕ್ತಿ ಕೇಂದ್ರವನ್ನು ಸ್ಥಾಪಿಸಲಾಯಿತು. ಚಿಮೂ ಅವರ ಕನ್ನಡ ಭಾಷೆಯ ಬಗೆಗಿನ ವಿಶೇಷ ಕಾಳಜಿಯಿಂದಲೇ ಕನ್ನಡ ವಿವಿ ತಲೆ ಎತ್ತಲು ಸಾಧ್ಯವಾಗಿದೆ ಎಂದು ಹಂಪಿ ವಿವಿಯ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಕೆ.ರವೀಂದ್ರನಾಥ ಹೇಳಿದರು.

ಚಿಮೂ ಶ್ರದ್ಧಾಂಜಲಿ ಸಭೆ

ನಗರದ ಕೊಟ್ಟೂರು ಸ್ವಾಮಿ ಸಭಾಮಂಟಪದಲ್ಲಿ ನಡೆದ ಚಿಮೂ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಡಾ.ಚಿದಾನಂದ ಮೂರ್ತಿ ರಾಜ್ಯದಲ್ಲಿ ಶ್ರೇಷ್ಠ ಸಂಶೋಧನೆಯನ್ನು ಮಾಡಿದ್ದಾರೆ. ಅವರದು ಕ್ರಿಯಾಶೀಲ ವ್ಯಕ್ತಿತ್ವ ಎಂದು ಹೇಳಿದರು.

Intro:ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನದಲ್ಲಿ ಡಾ. ಚಿದಾನಂದ ಮೂರ್ತಿ ಅವರನ್ನು ಅಧ್ಯಕ್ಷರ ಮಾಡದಿರುವುದು ಬೇಸರದ ಸಂಗತಿ.: ಡಾ.ಕೆ ರವೀಂದ್ರನಾಥ

ಹೊಸಪೇಟೆ : ಡಾ.ಚಿದಾನಂದ ಮೂರ್ತಿ ಅವರಿಗೆ ಕನ್ನಡ ಎಂದರೆ ತುಂಬ ಪ್ರೀತಿಯನ್ನು ಹೊಂದಿದ್ದರು. ಕನ್ನಡಕ್ಕಾಗಿ ಸಂಘಟನೆಯನ್ನು ಕಟ್ಟಿದ್ದಾರೆ.ನೆಲ‌ ಜಲದ ಭಾಷೆಯದ ಬಗ್ಗೆ ಜಾಗೃತಿಯನ್ನು ಮೂಡಿಸಿದ್ದಾರೆ. ಅವರು ಸರಳ ಮತ್ತು ಉತ್ತಮ ಸಂಶೋಧನಕಾರು. ಅವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗದಿದ್ದಿದ್ದಕ್ಕೆ ನಮಗೆ ಬೇಸರ ಉಂಟಾಗಿದೆ ಎಂದು ಡಿನ್ ಲಲಿತಕಲಾ ನಿಕಾಯ ಕನ್ನಡ ವಿವಿ ಹಂಪಿ ಪ್ರಾಧ್ಯಾಪಕ ಡಾ‌.ಕೆ ರವೀಂದ್ರನಾಥ ಅವರ ಮಾತನಾಡಿದರು.


Body:ನಗರದ ಕೊಟ್ಟರು ಸ್ವಾಮಿ ಸಭ ಮಂಟಪದಲ್ಲಿ ಇಂದು ಸಂಜೆ ಡಾ. ಚಿದಾನಂದ ಮೂರ್ತಿ ಅವರಿಗೆ ಹೂಗಳ ಮೂಲಕ ಶ್ರದ್ದಾಂಜಲಿಯನ್ನು ಸಲ್ಲಿಸಿದರು. ಕನ್ನಡ ವಿವಿ ಕುಲ ಸಚಿವ ಡಾ. ಎ.ಸುಬ್ಬಣ್ಣ ರೈ ಅವರು ಶ್ಲೋಕವನ್ನು ಹೇಳುವ ಮೂಲಕ ಶ್ರದ್ದಾಂಜಲಿಯನ್ನು ಸಲ್ಲಿಸಿದರು. ಪ್ರಾಧ್ಯಾಪಕ ಡಾ.ಕೆ.ರವೀಂದ್ರನಾಥ ಅವರು ಮಾತನಾಡಿದರು. ಡಾ.ಚಿದಾನಂದ ಮೂರ್ತಿಯವರು ರಾಜ್ಯದಲ್ಲಿ ಶ್ರೇಷ್ಠ ಸಂಶೋಧನೆಯನ್ನು ಮಾಡಿದ್ದಾರೆ. ನೆಲ ಜಲ ಭಾಷೆ ಗಡಿನಾಡಿನ ಸಮಸ್ಯೆಯ ಕುರಿತು ಚಿಂತನೆಯನ್ನು ಮಾಡುವ ಕ್ರಿಯಾಶೀಲ ವ್ಯಕ್ತಿತ್ವವನ್ನು ಹೊಂದಿದ್ದರು ಎಂದು ಮಾತನಾಡಿದರು.

ವಚನ ಸಾಹಿತ್ಯ ಕುರಿತು ಮಾತನಾಡುವುದದಾದರೆ ದೇವರ ದಾಸಿಮಯ್ಯ ಹಾಗೂ ಜೇಡರ ದಾಸಿಮಯ್ಯ ಅವರು ಬೇರೆ ಬೇರೆ ಎಂದು ಡಾ. ಎಂ. ಎಂ. ಕಲಬುರ್ಗಿ ಮತ್ತು ಡಾ. ಚಿದಾನಂದ ಮೂರ್ತಿ ಅವರು ವಾದವನ್ನು ಪ್ರತಿಪಾದಿಸಿದ್ದರು. ಕನ್ನಡ ಸಾಹಿತ್ಯದಲ್ಲಿ ಅಗ್ರ ಗಣ್ಯ ವ್ಯಕ್ತಿತ್ವದಲ್ಲಿ ನಮಗೆ ನೆನಪಾಗುವುದು ಇರಿಬ್ಬರು ಎಂದರು. ಅವರಿಗೆ ವಿವಿ ಯಾವತ್ತು ನಿವೃತ್ತಿಯನ್ನು ಘೋಷಿಸಿಲ್ಲ ಅವರಿಗೆ ಹಾಗೆ ಸೇವೆಯನ್ನು ಮಾಡಲು ವಿವಿ ಅವಕಾಶವನ್ನು ನೀಡಿತ್ತು. ಅವರಿಗೆ ವಯಸ್ಸಾದ ಮೇಲೆ ತಾವೆ ನಿವೃತ್ತಿ ಪಡೆದುಕೊಂಡರು ಎಂದು ಮಾತನಾಡಿ ದರೆ ಅಲ್ಲಿ.

ಸಂಶೋಧನೆಯಲ್ಲಿ ಡಾ.ಎಂ ಕಲಬುರ್ಗಿ ಮತ್ತು ಡಾ.ಚಿದಾನಂದ ಮೂರ್ತಿಯವರ ವಾದ ಮತ್ತು ಪ್ರತಿವಾದಗಳು ನಡೆಯುತ್ತಿದ್ದವು. ತಾರ್ಕಿಕವಾಗಿ ವಿಚಾರ ಹಾಗೂ ಆಲೋಚನೆಯನ್ನು ಮಾಡುತ್ಯಿದ್ದರು. ಕನ್ನಡ ಬಗ್ಗೆ ಆಸಕ್ತಿಯನ್ನು ಇರುವಂತಹ ಯುವಕರನ್ನು ಕರೆದುಕೊಂಡು ಕನ್ನಡ ಚಳುವಳಿಯಲ್ಲಿ ಭಾಗಿಯಾಗುತ್ತಿದ್ದರು. ಗಡಿನಾಡಿನ ಸಮಸ್ಯೆಯಲ್ಲಿ ಪಾಲ್ಗೊಳ್ಳತ್ತಿದ್ದರು.ಅಸ್ಪೃಶ್ಯತೆಯ ಕುರಿತು ಸಮಕಾಲೀನಲ್ಲಿ ದಲಿತರ ಕುರಿತು ಸಂಶೋಧನೆ ವೀರಶೈವ ಲಿಂಗಾಯತರ ಸಂಶೋಧನೆ ಹೀಗೆ ಹಲವಾರು ಸಂಶೋಧನೆ ಮಾಡಿದ್ದಾರೆ. ನಗರದ ಕೊಟ್ಟುರು ಮಠಕ್ಕೆ ಹಂಪಿಗೆ ಹಾಗೂ ಡಾ.ಚಿದಾನಂದ ಮೂರ್ತಿಗೆ ಅವಿನಭಾವ ನಂಟಿದೆ. ಅವರನ್ನು ಕಳೆದುಕೊಂಡಿದ್ದಕೆ ರಾಜ್ಯದಲ್ಲಿರುವ ವಿವಿಗಳಿಗೆ ಮತ್ತು ಕನ್ನಡಿಗರಿಗೆ ತುಂಬಲಾರದ ನಷ್ಟವಾಗಿದೆ ಎಂದು ಬೇಸರವನ್ನು ವ್ಯಕ್ತ ಪಡಿಸಿದರು.




Conclusion:KN_HPT_2_KOTTURUMATHADALLI_CHIDHANDAMURTIGE_SHRADDANJI_SCRIPT_KA10028
ETV Bharat Logo

Copyright © 2025 Ushodaya Enterprises Pvt. Ltd., All Rights Reserved.