ಬಳ್ಳಾರಿ: ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಇನ್ನಿತರ ವಿಶೇಷ ದಿನಗಳಲ್ಲಿ ಜನರು ಸಾಮಾನ್ಯವಾಗಿ ಪಾರ್ಟಿ, ಮೋಜು, ಮಸ್ತಿ ಎನ್ನುವ ದಿನಗಳಲ್ಲಿ ಇಲ್ಲೊಬ್ಬರು ತಮ್ಮ ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಅನಾಥ ಮಕ್ಕಳೊಂದಿಗೆ ಆಚರಿಸಿಕೊಂಡು ವಿಶೇಷತೆ ಮೆರೆದಿದ್ದಾರೆ.
ಹೌದು.., ನಗರದ ವಿಮ್ಸ್ ಬಳಿ ಇರುವ ಮದರ್ ತೆರೇಸಾ ಅನಾಥಾಶ್ರಮದಲ್ಲಿ ಉದಯ್ ಕುಮಾರ್ ಮತ್ತು ಪುಷ್ಪ ದಂಪತಿ ಮದುವೆಯಾಗಿ ಒಂದು ವರ್ಷ ಪೂರೈಸಿದ ಖುಷಿಗೆ ಅನಾಥ ಮಕ್ಕಳೊಂದಿಗೆ ಸೇರಿ ಕೇಕ್ ಕತ್ತರಿಸಿದರು. 110 ಅನಾಥ ಮಕ್ಕಳು, ಯುವಕ- ಯುವತಿಯರು, ಹಿರಿಯ ನಾಗರಿಕರು, ಅಜ್ಜ-ಅಜ್ಜಿಯರಿಗೆ ಸಿಹಿ, ಬಾಳೆಹಣ್ಣು, ಬ್ರೆಡ್ ಹಂಚಿ ವಿವಾಹ ವಾರ್ಷಿಕೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಜೀವನದಲ್ಲಿ ದುಡ್ಡು ಸಂಪಾದನೆ ಮಾಡಬಹುದು, ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡರೇ ಮಾತ್ರ ಜೀವನ ಉತ್ತಮ ಎಂದು ಉದಯ್ ಕುಮಾರ್ ಈಟಿವಿ ಭಾರತ್ ನೊಂದಿಗೆ ಮಾತನಾಡಿದರು.
ಉದಯ್ ಪತ್ನಿ ಮಗುವಿಗೆ ಜನ್ಮ ನೀಡಿರುವ ಕಾರಣ ಮನೆಯಲ್ಲಿಯೇ ಉಳಿದಿದ್ದರು. ಉದಯ್ ಮತ್ತು ಅವರ ಸಂಬಂಧಿಕರು ಸೇರಿಕೊಂಡು ಅನಾಥಾಶ್ರಮದಲ್ಲಿ ಸಂಭ್ರಮ ಆಚರಿಸಿದರು.
ಈ ವೇಳೆ ಉದಯ್ ಕುಮಾರ್ ಮತ್ತು ಅವರ ಪತ್ನಿ ಪುಷ್ಪ ಅವರಿಗೆ ಒಳ್ಳೆಯದಾಗಲಿ ಎಂದು ಹಾಡಿನ ಮೂಲಕ ಅನಾಥ ಮಕ್ಕಳು, ಹಿರಿಯರು ಶುಭ ಕೋರಿದರು.