ಬಳ್ಳಾರಿ : ಕೊರೊನಾ ವೈರಸ್ ಸೋಂಕು ಹರಡದಂತೆ ಮುಂಜಾಗೃತ ಕ್ರಮಕೈಗೊಂಡಿರುವ ಜಿಲ್ಲಾಡಳಿತ ಶಾಲಾ, ಕಾಲೇಜು ಸೇರಿ ಮನರಂಜನೆ ಸ್ಥಳಕ್ಕೂ ಬೀಗ ಹಾಕಿದ್ದಾರೆ. ಆದ್ರೆ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಮಾತ್ರ ರಜೆ ಘೋಷಣೆ ಮಾಡದೇ ಮುಂದುವರಿಸಲಾಗಿದೆ.
ಸದ್ಯ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿರುವ ವಿಜ್ಞಾನ ಕೇಂದ್ರಕ್ಕೆ ಸಾಕಷ್ಟು ಸಾರ್ವಜನಿಕರು ಬರುತ್ತಿದ್ದಾರೆ. ಅಲ್ಲದೇ ಉದ್ಯಾನ ತೆರೆದಿಡಲಾಗಿದ್ದು ಜನ ಆಗಮಿಸುತ್ತಿದ್ದಾರೆ. ಜನ ಗುಂಪು ಸೇರುವ ಸಭೆ, ಸಾಮಾರಂಭ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿರುವ ಜಿಲ್ಲಾಧಿಕಾರಿಗಳು ಉಪಕೇಂದ್ರವನ್ನು ತೆರೆದಿಟ್ಟಿದ್ದು ನಿಜಕ್ಕೂ ವಿಪರ್ಯಾಸ.
ಈ ಬಗ್ಗೆ ವಿಜ್ಞಾನ ಕೇಂದ್ರ ವ್ಯವಸ್ಥಾಪಕ ಶಿವರಾಜ್ ಜಿ. ವಿ. ಅವರನ್ನು ಕೇಳಿದರೆ, ಜಿಲ್ಲಾಧಿಕಾರಿಯವರು ಉಪಕೇಂದ್ರಕ್ಕೆ ಬರುವ ಜನರ ಸಂಖ್ಯೆ ಕಡಿಮೆ ಇರುತ್ತದೆ, ಆದ್ದರಿಂದ ಮುಚ್ಚುವ ಅವಶ್ಯಕತೆಯಿಲ್ಲ, ಆರಂಭಿಸಿ ಅಂದಿದ್ದಾರೆ ಅದಕ್ಕೆ ಆರಂಭಿಸಿದ್ದೇವೆ ಅಂತಾರೆ.
ಒಟ್ಟಿನಲ್ಲಿ ಸಾರ್ವಜನಿಕರು ಸೇರುವ ಎಲ್ಲ ವಲಯಗಳನ್ನು ಬಂದ್ ಮಾಡಿರುವ ಜಿಲ್ಲಾಧಿಕಾರಿಗಳು ಉಪಕೇಂದ್ರವನ್ನು ತೆರೆದಿಟ್ಟಿದ್ದು, ಹೆಚ್ಚು ಜನ ಸೇರುವ ಸ್ಥಳವಾದದ್ದರಿಂದ ಮುಂಜಾಗೃತ ಕ್ರಮ ತೆಗೆದುಕೊಳ್ಳುವುದು ಸೂಕ್ತ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.