ಬಳ್ಳಾರಿ: ಸಂಡೇ ಲಾಕ್ಡೌನ್ ಜಾರಿಯಲ್ಲಿದ್ದರೂ ಸಹ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆಗೆ ಸರಕು ಸಾಗಣೆ ಲಾರಿಗಳು ಸಂಚರಿಸುತ್ತಿವೆ.
ಪ್ರತಿ ಭಾನುವಾರ ಸಂಪೂರ್ಣವಾಗಿ ಲಾಕ್ಡೌನ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಜಿಂದಾಲ್ ಉಕ್ಕು ಕಾರ್ಖಾನೆ ಮಾತ್ರ ಅದಿರು ಸಾಗಣೆ ಕಾರ್ಯವನ್ನ ನಿಲ್ಲಿಸಿಯೇ ಇಲ್ಲ. ಅನಗತ್ಯವಾಗಿ ಹೊರ ಬಂದವರ ಮೇಲೆ ಲಾಠಿ ಪ್ರಹಾರ ನಡೆಸುವ ಜಿಲ್ಲೆಯ ಪೊಲೀಸರು, ಅದಿರು ಸಾಗಣೆಯು ಎಗ್ಗಿಲ್ಲದೇ ನಡೆಯುತ್ತಿದ್ದರೂ ತಡೆಯಲು ಯಾಕೆ ಮುಂದಾಗಿಲ್ಲ.
ಗಣಿಜಿಲ್ಲೆಗೆ ಒಂದು ಕಾನೂನಾದ್ರೆ ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆಗೆ ಮತ್ತೊಂದು ಕಾನೂನಾ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.