ETV Bharat / city

ಮುನ್ನೆಲೆಗೆ ಬಂದ ಗಡಿ ವಿವಾದ: ಜನಾರ್ದನ ರೆಡ್ಡಿಗೆ ಮತ್ತೆ ಶುರುವಾಗುತ್ತಾ ಸಂಕಷ್ಟ? - ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ

2006ರಲ್ಲಿ ಸಂಡೂರು ತಾಲೂಕಿನ ತುಮಟಿ ಮತ್ತು ಆಂಧ್ರದ ಓಬಳಾಪುರಂ ವ್ಯಾಪ್ತಿಯಲ್ಲಿ ಗಡಿ ಗುರುತು ನಾಶ ಪಡಿಸಲಾಗಿತ್ತು. ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವ ರೆಡ್ಡಿ ಗಡಿನಾಶ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

Janardhana Reddy
ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ
author img

By

Published : Jun 8, 2022, 11:29 AM IST

ಬಳ್ಳಾರಿ: ಇಷ್ಟು ದಿನ ತಣ್ಣಗಿದ್ದ ಗಡಿ ವಿವಾದ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಅಕ್ರಮ ಗಣಿಗಾರಿಕೆ ವೇಳೆ ಗಡಿ ಗುರುತು ನಾಶದಿಂದ ಆರಂಭವಾದ ಕರ್ನಾಟಕ - ಆಂಧ್ರಪ್ರದೇಶ ಗಡಿ ರೇಖೆ ವಿವಾದ ಇದೀಗ ಪ್ರಧಾನ ಮಂತ್ರಿ ಕಚೇರಿ ಮೆಟ್ಟಿಲೇರಿದೆ. ಈಗಾಗಲೇ ಬಳ್ಳಾರಿಯಲ್ಲಿ ನೆಲೆಸಿರುವ ಮಾಜಿ ಸಚಿವ, ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

2006ರಲ್ಲಿ ಸಂಡೂರು ತಾಲೂಕಿನ ತುಮಟಿ ಮತ್ತು ಆಂಧ್ರದ ಓಬಳಾಪುರಂ ವ್ಯಾಪ್ತಿಯಲ್ಲಿ ಗಡಿ ಗುರುತು ನಾಶ ಪಡಿಸಲಾಗಿತ್ತು. ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವ ರೆಡ್ಡಿ ಗಡಿನಾಶ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಅಲ್ಲದೇ ಗಡಿನಾಶ ಮತ್ತು ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಈ ಹಿಂದೆ ರೆಡ್ಡಿ ಜೈಲು ಸೇರಿದ್ದರು.

ಗಣಿ ಉದ್ಯಮಿ ಟಪಾಲ್ ಗಣೇಶ

ಬಳ್ಳಾರಿ ಜಿಲ್ಲೆಗೆ ಬಾರದಂತೆ ಇವರಿಗೆ ನ್ಯಾಯಾಲಯ ನಿರ್ಬಂಧ ಸಹ ಹೇರಿತ್ತು. ಆದರೆ, ಕಳೆದ 10 ತಿಂಗಳ ಹಿಂದೆ ಬಳ್ಳಾರಿಗೆ ಬರಲು ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು. ಈಗ ಮತ್ತೆ ಜನಾರ್ದನ ರೆಡ್ಡಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಕಾರಣ ಗಣಿ ಉದ್ಯಮಿ ಟಪಾಲ್ ಗಣೇಶ ಅವರು ಮತ್ತೆ ಆಂಧ್ರ ಮತ್ತು ಕರ್ಣಾಟಕ ಗಡಿ ವಿವಾದ ಕುರಿತು ಈಗಾಗಲೇ ಸರ್ವೇ ಆಫ್‌ ಇಂಡಿಯಾದವರು ನಡೆಸಿರುವ ಗಡಿ ಗುರುತು ಕಾರ್ಯ ಆಕ್ಷೇಪಿಸಿ ಪ್ರಧಾನಿ ಕಚೇರಿಗೆ ದೂರು ಸಲ್ಲಿಸಿದ್ದರು.

ಅಧಿಕಾರಿಗಳ ಕಾರ್ಯ ವೈಖರಿಗೆ ಆಕ್ಷೇಪ: ಟಪಾಲ್ ಗಣೇಶ ದೂರಿಗೆ ಪ್ರಧಾನಿ ಕಚೇರಿ ಸ್ಪಂದಿಸಿದ್ದು, ದೂರು ಆಧರಿಸಿ ಕ್ರಮ ವಹಿಸುವಂತೆ ಬಳ್ಳಾರಿ ಜಿಲ್ಲಾಧಿಕಾರಿ, ಜಿಲ್ಲಾ ಅರಣ್ಯ ಉಪಸಂರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದೆ. ಗಣಿ ಉದ್ಯಮಿ ಟಪಾಲ್‌ ಗಣೇಶ್‌ ಕರ್ನಾಟಕ-ಆಂಧ್ರ ಗಡಿ ರೇಖೆ ವಿಚಾರ ಕುರಿತು ಪದೇ ಪದೆ ತಗಾದೆ ತೆಗೆಯುತ್ತಲೇ ಬಂದಿದ್ದಾರೆ. ಕೇಂದ್ರದ ಭೂ ಸಮೀಕ್ಷೆ ಇಲಾಖೆ ಅಧಿಕಾರಿಗಳ ತಂಡ ಸಮೀಕ್ಷೆಗೆಂದು ಕರ್ನಾಟಕ - ಆಂಧ್ರ ಗಡಿ ಪ್ರದೇಶದಲ್ಲಿ ಸಮೀಕ್ಷೆ ಕೈಗೊಂಡಾಗ ಅಧಿಕಾರಿಗಳ ಕಾರ್ಯ ವೈಖರಿ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಗಡಿ ರೇಖೆ ಗುರುತಿಸಲು ಅನುಸರಿಸುತ್ತಿರುವ ನಕಾಶೆ ಕಾಲ್ಪನಿಕವಾಗಿ ಸೃಷ್ಟಿಸಿದ ಒಂದು ಚಿತ್ರವಾಗಿದೆ. ಅದರ ತಯಾರಿಯ ಚಿತ್ರಣ ವಿವರಿಸುವ ಯಾವುದೇ ಪೂರಕ ದಾಖಲೆ ಇಲ್ಲ. ಅದನ್ನು ಆಧರಿಸಿ, ಆಂಧ್ರ- ಕರ್ನಾಟಕ ಗಡಿ ರೇಖೆ ಗುರುತಿಸುವ ಪದ್ಧತಿಯೇ ತಪ್ಪು. ಸಮೀಕ್ಷೆ ವೇಳೆ ಕಾಂಟೂರ್‌ ಮೆಥಡಾಲಜಿಯನ್ನು ಅನುಸರಿಸಿಲ್ಲ ಎಂದು ಆಕ್ಷೇಪಿಸುತ್ತಲೇ ಇರುವ ಟಪಾಲ್‌ ಗಣೇಶ್‌, ಸರ್ವೇ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಅಪಸ್ವರ ತೆಗೆಯುತ್ತಲೇ ಬಂದಿದ್ದಾರೆ.

ನ್ಯಾಯ ಸಿಗುವುದು ಅನುಮಾನ: ಸರ್ವೇ ಆಫ್‌ ಇಂಡಿಯಾ ತಂಡ ಮಾಜಿ ಸಚಿವ ಜನಾರ್ದನ ರೆಡ್ಡಿ ಮೇಲಿರುವ ಅಕ್ರಮ ಗಣಿಗಾರಿಕೆ ಆರೋಪಗಳನ್ನು ಮರೆಮಾಚುವ ರೀತಿಯಲ್ಲಿ ಸಮೀಕ್ಷೆ ಕಾರ್ಯ ಕೈಗೊಳ್ಳುತ್ತಿದೆ. ಇದರಿಂದ ನಮ್ಮ ರಾಜ್ಯಕ್ಕೆ ಅನ್ಯಾಯ ಆಗುವುದು ಮಾತ್ರವಲ್ಲ, ಆಗಿರುವ ಅಕ್ರಮ ಗಣಿಗಾರಿಕೆ ಸಕ್ರಮ ಆಗುವುದರಲ್ಲಿ ಅನುಮಾನವೇ ಇಲ್ಲ ಎನ್ನುತ್ತಾರೆ ಟಪಾಲ್ ಗಣೇಶ್‌.

ಸುಪ್ರೀಂಕೋರ್ಟ್‌ ಸೂಚನೆಯಂತೆ ಬಳ್ಳಾರಿ ಜಿಲ್ಲಾಧಿಕಾರಿ, ಆಂಧ್ರದ ಅನಂತಪುರ ಜಿಲ್ಲಾಧಿಕಾರಿಗಳೊಂದಿಗೆ ಸರ್ವೇ ಆಫ್‌ ಇಂಡಿಯಾದವರು ನಡೆಸಿರುವ ಸರ್ವೇ ಕಾರ್ಯದ ವರದಿ ಈಗಾಗಲೇ ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾಗಿದೆ ಎನ್ನಲಾಗಿದೆ. ಇದರಿಂದ ನ್ಯಾಯ ಸಿಗುವುದು ಅನುಮಾನ ಎನ್ನುವುದು ಟಪಾಲ್ ಗಣೇಶ್ ಅವರ ಅಭಿಪ್ರಾಯ.

ಸದ್ಯ ಗಡಿ ವಿವಾದದ ಚೆಂಡು ಪ್ರಧಾನ ಮಂತ್ರಿ ಕಚೇರಿ ಅಂಗಳದಲ್ಲಿದೆ. ಒಂದು ವೇಳೆ ಈ ಹಿಂದೆ ಮಾಡಿರುವ ಸರ್ವೇಗಳ ಬದಲಿಗೆ ಮತ್ತೊಂದು ಬಾರಿ ನಿಷ್ಪಕ್ಷಪಾತವಾಗಿ ಮರು ಸರ್ವೇ ನಡೆದಿದ್ದೇ ಆದಲ್ಲಿ ಮತ್ತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಸಂಕಷ್ಟ ಎದುರಾಗಲಿದೆ. ಈಗಾಗಲೇ ಎರಡನೇ ಸುತ್ತಿನಲ್ಲಿ ರಾಜಕೀಯ ಪ್ರವೇಶ ಮಾಡಲು ತಯಾರಿ ಮಾಡಿಕೊಂಡಿರುವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಪಿಎಂ ಕಚೇರಿಯಿಂದ ಪತ್ರ ಬಂದಿದ್ದು, ಆತಂಕಕ್ಕೊಳಗಾಗಿದ್ದಾರೆ.

ಇದನ್ನೂ ಓದಿ: ಕರ್ನಾಟಕ, ಆಂಧ್ರ ಗಡಿ ಸರ್ವೇ ಈಗಲಾದ್ರೂ ಸರಿಯಾಗಿ ನಡೆಯಲಿ: ಟಪಾಲ್ ಗಣೇಶ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.