ಬಳ್ಳಾರಿ : ಕೇಂದ್ರ ಸರ್ಕಾರದ ಆರ್ಥಿಕ ಇಲಾಖೆ ಸಚಿವರನ್ನು ಭೇಟಿಯಾಗಿ ಗಣಿನಾಡು ಬಳ್ಳಾರಿ ಸ್ಮಾರ್ಟ್ ಸಿಟಿ ಮಾಡಲು ಮನವಿ ಮಾಡಿದ್ದೇವೆ. ಆದರೆ ಅವರು 2023ರಲ್ಲಿ ಜಿಲ್ಲೆಯನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆ ಮಾಡಲಾಗುತ್ತದೆ ಎಂದಿದ್ದಾರೆ ಎಂದು ಶಾಸಕ ಜಿ. ಸೋಮಶೇಖರ್ ರೆಡ್ಡಿ ತಿಳಿಸಿದರು.
ನಗರದ ರಾಮಯ್ಯ ಕಾಲೋನಿಯಲ್ಲಿ ಕೇಂದ್ರ ಬಜೆಟ್ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಗೆ ಸ್ಮಾರ್ಟ್ ಸಿಟಿ ಯೋಜನೆ ನೀಡುವ ಕುರಿತು ಆರ್ಥಿಕ ಇಲಾಖೆ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಅನುರಾಗ ಠಾಕೂರ್ ಅವರನ್ನು ಭೇಟಿ ಮಾಡಿ ಬಂದಿದ್ದೇನೆ. 2023ರವರೆಗೆ ಸ್ಮಾರ್ಟ್ ಸಿಟಿ ಗಣಿನಾಡು ಬಳ್ಳಾರಿಗೆ ಇಲ್ಲ, ಅದಾದ ನಂತರ ಆಯ್ಕೆ ಮಾಡುತ್ತೇವೆ. ಆದರೆ ಬೇರೆ ಏನಾದರೂ ಬೇಕಾದರೆ ಕೇಳಿ ಮಾಡೋಣ ಎಂದಿದ್ದಾರೆ ಎಂದು ಶಾಸಕರು ತಿಳಿಸಿದರು.
ಓದಿ-15 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಶೃಂಗೇರಿಯಲ್ಲಿ 17 ಆರೋಪಿಗಳ ವಿರುದ್ಧ ಎಫ್ಐಆರ್
ಬಳ್ಳಾರಿಯ ಯುಜಿಡಿ ಬಗ್ಗೆ 253 ಕೋಟಿ ರೂ. ಪ್ರಪೋಸಲ್ ರೆಡಿಯಾಗಿದೆ. 24×7 ಕುಡಿಯುವ ನೀರಿನ ಯೋಜನೆಗೆ 204 ಕೋಟಿ ರೂ. ಎರಡನೇ ಪ್ರಪೋಸಲ್ ರೆಡಿ ಮಾಡಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಸೇರಿ ಹಣ ನೀಡಿದರೆ ಬಳ್ಳಾರಿ ನಗರ ಯುಜಿಡಿ ಸಮಸ್ಯೆಯಿಂದ ಮುಕ್ತಿ ಹೊಂದುತ್ತದೆ. ರಸ್ತೆ ಅಭಿವೃದ್ಧಿ ಬಗ್ಗೆ 15 ಮತ್ತು 16ನೇ ಹಣಕಾಸಿನ ಹಣ ಬಳಕೆ ಮಾಡಿಕೊಂಡು ಸಮಸ್ಯೆಗಳನ್ನು ಬಗೆ ಹರಿಸುವ ಕೆಲಸ ಮಾಡುತ್ತೇವೆ ಎಂದರು.