ETV Bharat / city

ಆ್ಯಕ್ಸಿಜನ್ ಸ್ಯಾಚುರೇಷನ್ ಕಡಿಮೆ ಇರುವವರ ಪತ್ತೆಗೆ ಬಳ್ಳಾರಿ ಜಿಲ್ಲಾಡಳಿತ ಕ್ರಮ..

ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಅಂದಾಜು 10,000 ಮನೆಗಳಿಗೆ ಭೇಟಿ ನೀಡಿದ ಆರೋಗ್ಯ ಇಲಾಖೆಯ ಸಿಬ್ಬಂದಿ, ಸುಮಾರು 40,000 ಮಂದಿಯ ಆ್ಯಕ್ಸಿಜನ್ ಸ್ಯಾಚುರೇಷನ್ ಟೆಸ್ಟ್‌ಗೆ ಒಳಪಡಿಸಿದ್ದಾರೆ..

Bellary District Administration
ಡಿಹೆಚ್ಓ ಡಾ. ಹೆಚ್.ಎಲ್.ಜನಾರ್ದನ
author img

By

Published : Jul 28, 2020, 6:47 PM IST

ಬಳ್ಳಾರಿ : ಗಣಿನಾಡು ಬಳ್ಳಾರಿ ಜಿಲ್ಲೆಯ ಹೊಸಪೇಟೆ, ಸಂಡೂರು ಹಾಗೂ ಬಳ್ಳಾರಿ ತಾಲೂಕಿನಲ್ಲಿ ಅತಿ ಹೆಚ್ಚು ಕೋವಿಡ್ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಹೀಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮನೆಮನೆ ಸರ್ವೆ ಕಾರ್ಯ ಆರಂಭಿಸಿದೆ.

ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಸೂಚನೆಯ ಮೇರೆಗೆ ಸಂಡೂರು-ಹೊಸಪೇಟೆ ತಾಲೂಕಿನಲ್ಲಿ ಮನೆಮನೆ ಸರ್ವೆ ಕಾರ್ಯ ಆರಂಭಿಸಲಾಗಿದೆ ಎಂದು ಡಿಹೆಚ್ಒ ಡಾ. ಹೆಚ್‌ ಎಲ್‌ ಜನಾರ್ದನ್‌ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಸಂಡೂರು ತಾಲೂಕಿನಲ್ಲಿ ಈಗಾಗಲೇ ಅಂದಾಜು 3,000 ಸಾವಿರ ಮನೆಗಳಿಗೆ ಭೇಟಿಕೊಟ್ಟ ಆರೋಗ್ಯ ಇಲಾಖೆ ಸಿಬ್ಬಂದಿ, ಸರಿಸುಮಾರು 17,000 ಮಂದಿಯ ಆ್ಯಕ್ಸಿಜನ್ ಸ್ಯಾಚುರೇಷನ್ ಟೆಸ್ಟ್ ಮಾಡಿದ್ದಾರೆ‌. ಶೇ.95ರಷ್ಟು ಕಡಿಮೆ ಪ್ರಮಾಣದಲ್ಲಿರುವವರನ್ನು ಕೋವಿಡ್ ಟೆಸ್ಟ್​ಗೆ ಒಳಪಡಿಸಿದಾಗ ಅಂದಾಜು 6 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಅವರನ್ನು ಕೂಡಲೇ ಸರ್ಕಾರಿ ಕೋವಿಡ್ ಕೇರ್ ಸೆಂಟರ್​ಗೆ ಶಿಫ್ಟ್ ಮಾಡಿ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಅವರೀಗ ಗುಣಮುಖರಾಗುತ್ತಿದ್ದಾರೆ ಎಂದು ಡಾ. ಜನಾರ್ದನ್ ತಿಳಿಸಿದ್ದಾರೆ.

ಡಿಹೆಚ್ಒ ಡಾ. ಹೆಚ್ ಎಲ್ ಜನಾರ್ದನ್‌ ಮಾಹಿತಿ

ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಅಂದಾಜು 10,000 ಮನೆಗಳಿಗೆ ಭೇಟಿ ನೀಡಿದ ಆರೋಗ್ಯ ಇಲಾಖೆಯ ಸಿಬ್ಬಂದಿ, ಸುಮಾರು 40,000 ಮಂದಿಯ ಆ್ಯಕ್ಸಿಜನ್ ಸ್ಯಾಚುರೇಷನ್ ಟೆಸ್ಟ್‌ಗೆ ಒಳಪಡಿಸಿದ್ದಾರೆ. ಆ ಪೈಕಿ 256 ಮಂದಿಯನ್ನು ಕೋವಿಡ್ ಟೆಸ್ಟ್​ಗೆ ಒಳಪಡಿಸಲಾಗಿದೆ. ಅದರಲ್ಲಿ 46 ಮಂದಿಗೆ ಕೊರೊನಾ ಸೋಂಕಿರೋದು ದೃಢಪಟ್ಟಿದೆ ಎಂದು ಜನಾರ್ದನ್‌ ತಿಳಿಸಿದ್ದಾರೆ.

‌ಬಳ್ಳಾರಿ ತಾಲೂಕಿನಲ್ಲಿ ಈ ದಿನದಿಂದ ಸರ್ವೆ ಕಾರ್ಯ ಶುರುವಾಗಿದೆ. ರಿಮೋಟ್ ಏರಿಯಾದಲ್ಲೂ ಮಾಡಲಾಗುತ್ತಿದೆ. ಕೌಲ್ ಬಜಾರ್, ಸತ್ಯನಾರಾಯಣ ಪೇಟೆ ಸೇರಿ ಇತರೆ ಪ್ರದೇಶಗಳಲ್ಲಿ ಮನೆಮನೆ ಸರ್ವೆ ಕಾರ್ಯ ಶುರುವಾಗಿದೆ ಎಂದು ಡಿಹೆಚ್ಒ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.