ಬಳ್ಳಾರಿ: ನವಜಾತ ಶಿಶುವಿನ ತಾಯಿ ಹಾಗೂ 8 ತಿಂಗಳ ಗರ್ಭಿಣಿಗೆ ಮಹಾಮಾರಿ ಕೊರೊನಾ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ದೃಢಪಡಿಸಿದ್ದಾರೆ.
ಮುಂಬೈ ಮೀನು ಮಾರುಕಟ್ಟೆಯಲ್ಲಿ ಮೀನು ಹಿಡಿಯುವ ಅಂದಾಜು 63 ಮಂದಿ ಕಾರ್ಮಿಕರು ಮೇ 6 ರಂದು ನೆರೆಯ ಆಂಧ್ರಪ್ರದೇಶದ ಗುಂತ್ಕಲ್ಲಿನಿಂದ ಬಳ್ಳಾರಿಗೆ ಕೆಎಸ್ಆರ್ಟಿಸಿ ಬಸ್ನಲ್ಲಿ ಬಂದಿದ್ದರು. ಇವರಲ್ಲಿ ಬಳ್ಳಾರಿ ನಗರ, ಗ್ರಾಮಾಂತರ ಪ್ರದೇಶ ವ್ಯಾಪ್ತಿಯ 11 ಮಂದಿ ವಲಸೆ ಕಾರ್ಮಿಕರ ಪೈಕಿ ಏಳು ಮಂದಿ ಮಹಿಳೆಯರು, ಒಬ್ಬ ಮಂಗಳಮುಖಿ ಹಾಗೂ ಮೂವರು ಪುರುಷರು ಇದ್ದಾರೆ. ಇವರಲ್ಲಿ ನವ ಜಾತ ಶಿಶುವಿಗೆ ಜನ್ಮ ನೀಡಿದ ತಾಯಿ ಸೇರಿದಂತೆ ಎಂಟು ತಿಂಗಳ ಗರ್ಭಿಣಿಯಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದರು.
ಮೇ 6 ರಂದು ಮುಂಬೈನಿಂದ ನೇರವಾಗಿ ನೆರೆಯ ಆಂಧ್ರಪ್ರದೇಶದ ಗುಂತಕಲ್ ರೈಲು ನಿಲ್ದಾಣಕ್ಕೆ ಬಂದಿಳಿದಿದ್ದರು. ಕರ್ನೂಲ್ ಜಿಲ್ಲೆಯ ಡಿಸಿ ಯವರಿಂದ ನಮಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಗುಂತಕಲ್ ರೈಲು ನಿಲ್ದಾಣಕ್ಕೆ ಕೆಎಸ್ಆರ್ಟಿಸಿ ಬಸ್ ಅನ್ನು ಕಳಿಸಿಕೊಡಲಾಗಿತ್ತು. ಅಲ್ಲಿಂದ ಅವರನ್ನ ನೇರವಾಗಿ ಬಳ್ಳಾರಿಗೆ ಕರೆ ತಂದು ಮಯೂರ ಕೋಟೆಲ್ ಹಿಂಭಾಗದ ಬಿಸಿಎಂ ಹಾಸ್ಟೆಲ್ನ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. 12 ದಿನಗಳ ಬಳಿಕ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆ ಮಾಡಿದಾಗ ಕೊರೊನಾ ಪಾಸಿಟಿವ್ ಬಂದಿದೆ ಎಂದು ಮಾಹಿತಿ ನೀಡಿದರು.