ETV Bharat / city

ರಭಸವಾಗಿ ಬಂದು ಎತ್ತಿನ ಚಕ್ಕಡಿಗೆ ಗುದ್ದಿದ ಬಸ್​.. ಎರಡು ಎತ್ತು ಸಾವು, ರೈತನಿಗೆ ತೀವ್ರ ಗಾಯ - ಬಳ್ಳಾರಿಯಲ್ಲಿ ಎರಡು ಎತ್ತುಗಳು ಸಾವು

ಬಸ್​ ಚಾಲಕನ ಅಜಾಗರೂಕತೆಯಿಂದಾಗಿ ಬಳ್ಳಾರಿಯಲ್ಲಿ ಎರಡು ಮೂಕಪ್ರಾಣಿಗಳು ಅಸುನೀಗಿವೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

ರಭಸವಾಗಿ ಬಂದು ಎತ್ತಿನ ಚಕ್ಕಡಿಗೆ ಗುದ್ದಿದ ಬಸ್

author img

By

Published : Jul 23, 2022, 12:28 PM IST

Updated : Jul 23, 2022, 12:57 PM IST

ಬಳ್ಳಾರಿ: ಬಸ್​ ಚಾಲಕನ ಅಜಾಗರೂಕತೆ ಮತ್ತು ವೇಗದಿಂದಾಗಿ ಡಿಕ್ಕಿ ಸಂಭವಿಸಿ ಎರಡು ಎತ್ತುಗಳು ಸ್ಥಳದಲ್ಲೇ ಸಾವನ್ನಪ್ಪಿ, ಓರ್ವ ಗಂಭೀರ ಗಾಯಗೊಂಡ ಘಟನೆ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಹೊರವಲಯದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.

ರಭಸವಾಗಿ ಬಂದು ಎತ್ತಿನ ಚಕ್ಕಡಿಗೆ ಗುದ್ದಿದ ಬಸ್​

ಬೆಂಗಳೂರಿನಿಂದ ಲಿಂಗಸೂಗೂರಿಗೆ ಹೊರಟಿದ್ದ ಸಾರಿಗೆ ಬಸ್, ಎತ್ತಿನ ಚಕ್ಕಡಿಗೆ ಎದುರಿನಿಂದ ರಭಸವಾಗಿ ಡಿಕ್ಕಿಯಾಗಿದೆ. ಪರಿಣಾಮ ಎರಡು ಮೂಕಪ್ರಾಣಿಗಳು ಸ್ಥಳದಲ್ಲೇ ಪ್ರಾಣತೆತ್ತಿವೆ. ರೈತ ಶೇಕ್ಷವಲಿ(42 ) ತೀವ್ರ ಗಾಯಗೊಂಡಿದ್ದು, ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್ ಚಾಲಕನ ಅಜಾಗರೂಕತೆ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ: ಸಿನಿಮಾ ಸ್ಟೈಲಲ್ಲಿ ಚೇಸಿಂಗ್​.. ಗಂಗಾವತಿ ಬಳಿ ಗುಂಡು ಹಾರಿಸಿ ಡಕಾಯಿತರನ್ನು ಬಂಧಿಸಿದ ಖಾಕಿ

Last Updated : Jul 23, 2022, 12:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.