ಬಳ್ಳಾರಿ: ಪಿಎಸ್ಐ ನೇಮಕಾತಿ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ದಾಖಲಿಗಳಿಲ್ಲದೇ ಆರೋಪ ಮಾಡ್ತಿದ್ದಾರೆ. ಒಮ್ಮೆ ಗೃಹ ಸಚಿವ, ಇನ್ನೊಮ್ಮೆ ಅಶ್ವತ್ ನಾರಾಯಣ್, ಮತ್ತೊಮ್ಮೆ ಸಿಎಂ ರಾಜೀನಾಮೆ ಕೊಡಬೇಕು ಅಂತಾರೆ ಕಾಂಗ್ರೆಸ್ನವರು ಹಿಟ್ ಅಂಡ್ ರನ್ ಮಾಡುವವರು ಎಂದು ಸಚಿವ ಶ್ರೀರಾಮುಲು ಕಿಡಿಕಾರಿದ್ದಾರೆ.
ಬಳ್ಳಾರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಿಎಸ್ಐ ನೇಮಕಾತಿ ಪ್ರಕರಣದ ಬಗ್ಗೆ ಸೂಕ್ತ ತನಿಖೆ ಮಾಡಲಾಗುತ್ತಿದೆ. ಸಾಕ್ಷಿ ಇದ್ದರೆ ಕೊಡಿ ನಂತರ ರಾಜೀನಾಮೆ ಬಗ್ಗೆ ಮಾತನಾಡಿ. ಈಗಾಗಲೇ ಕೆಲವು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ.
ಕಾಂಗ್ರೆಸ್ನವರು ದಾಖಲಾತಿ ಕೊಟ್ಟರೆ ಎಲ್ಲರೂ ರಾಜೀನಾಮೆ ಕೊಡ್ತಾರೆ ದಾಖಲೆ ಇಲ್ಲದೇ ಕೇವಲ ಇವರ ಮಾತುಗಳನ್ನು ಯಾರು ಕೇಳುತ್ತಾರೆ. ಪ್ರೀಯಾಂಕ್ ಖರ್ಗೆ ಅವರು ದಾಖಲಾತಿ ಇಲ್ಲದೇ ಮಾತನಾಡುತ್ತಿದ್ದಾರೆ. ಅವರಿಗೆ ಸಿಐಡಿ ನೋಟೀಸ್ ಕೊಟ್ಟಿದ್ದಾರೆ ಅಲ್ಲಿ ಹೋಗಿ ದಾಖಲಾತಿ ಕೊಡಲಿ ಎಂದು ಹೇಳಿದರು.
ಈಶ್ವರಪ್ಪ ಅವರು ಕೂಡಾ ತಪ್ಪು ಮಾಡಿರಲಿಲ್ಲಆದರೂ ಆರೋಪ ಮಾಡಿದ್ದಕ್ಕೆ ರಾಜೀನಾಮೆ ಕೊಟ್ಟರು. ಆ ಪ್ರಕರಣದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟರು ಹಾಗಾಗಿ ಈಶ್ವರಪ್ಪ ರಾಜಿನಾಮೆ ಕೊಟ್ಟರಷ್ಟೇ. ಕಾಂಗ್ರೆಸ್ನವರು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುತ್ತಾರೆ ಎಂದು ದೂರಿದರು.
ಇದನ್ನೂ ಓದಿ: 'ನಿಮ್ಮನ್ನು ಸಿಎಂ ಮಾಡ್ತೀವಿ, 2,500 ಕೋಟಿ ರೆಡಿ ಮಾಡಿಡಿ ಅಂದಿದ್ರು': ಯತ್ನಾಳ್
ಸಿಎಂ ಸ್ಥಾನಕ್ಕೆ 2500 ಕೋಟಿ: ಹಣ ಇದ್ದವರು ಮಾತ್ರ ಸಿಎಂ ಆಗುತ್ತಾರೆ ಎನ್ನುವುದು ಇತಿಹಾಸದಲ್ಲೇ ಇಲ್ಲ. ಈಗ ಬುದ್ದಿವಂತಿಕೆ, ಜ್ಞಾನ ಮತ್ತು ಜನರ ಆಶೀರ್ವಾದ ಇದ್ದರೆ ಮಾತ್ರ ಸಿಎಂ ಆಗುತ್ತಾರೆ. ಅವರ ವೈಯಕ್ತಿಕ ಹೇಳಿಕೆಗೆ ಹೆಚ್ಚು ಉತ್ತರಿಸಲ್ಲ ಎಂದರು.
ಎಸ್ಟಿಗೆ ಮೀಸಲಾತಿ ಕೊಟ್ಟೇ ಕೊಡುತ್ತೇವೆ: ನಮ್ಮ ಸರ್ಕಾರ ಅವಧಿ ಮುಗಿಯುವ ಒಳಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ. ಸ್ವಾಮೀಜಿಗಳ ಮನವೊಲಿಕೆ ಮಾಡ್ತಿದ್ದೇವೆ ಎಂದು ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು