ಬಳ್ಳಾರಿ: ಕೊರೊನಾ ಕುರಿತು ಜಾಗೃತರಾಗಿರಿ, ಆರೋಗ್ಯ ಸಚಿವರ ತವರಲ್ಲಿಯೇ ಪ್ರಕರಣ ದಾಖಲಾದರೆ ನಮಗೆ ಕೆಟ್ಟ ಹೆಸರು ಎಂದು ಅಧಿಕಾರಿಗಳಿಗೆ ಶಾಸಕ ಬಿ. ನಾಗೇಂದ್ರ ಸೂಚನೆ ನೀಡಿದರು.
ತಾಲೂಕು ಪಂಚಾಯತಿಯಲ್ಲಿ ನಡೆದ ಕೊರೊನಾ ವೈರಸ್ ಮುಂಜಾಗೃತ ಸಭೆಯ ನಂತರ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಡಂಗೂರವೇ ಪ್ರಥಮ ಮಾಧ್ಯಮ ಆದ್ದರಿಂದ ಪ್ರತಿ ಗ್ರಾಮದಲ್ಲಿ ಡಂಗೂರು ಸಾರಿಸಿ ಜನ ಜಾಗೃತಿ ಮೂಡಿಸಿ, ಶಾಸಕರ ಅನುದಾನದಲ್ಲಿ ಕರಪತ್ರ ಹಾಗೂ ಇತರೆ ಕಾರ್ಯಗಳನ್ನು ರೂಪಿಸಿ ಜನರಿಗೆ ರೋಗದ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು.
ದೇಶ ವಿದೇಶದಿಂದ ಬಂದ ಪ್ರಯಾಣಿಕರಿಗೆ ಮಂಗಳೂರು, ಕಾರವಾರದಲ್ಲಿ ತಪಾಸಣೆ ಕೇಂದ್ರ ಆರಂಭವಾಗಿದೆ. ಐದು ಕಡೆ ಪ್ರಯೋಗ ಶಾಲೆಗಳು ತೆರೆಯಲಾಗಿದೆ. ಕೆಮ್ಮು, ಜ್ವರ, ನಗೆಡಿ ಇರುವವರು ಮಾತ್ರ ಮಾಸ್ಕ್ ಹಾಕಿಕೊಳ್ಳಬೇಕು. ಮಾಸ್ಕ್ ಕೊನೆ ಅಸ್ತ್ರ ಆಗಬೇಕು. ಸ್ವಚ್ಚತೆ ಬಗ್ಗೆ ಹೆಚ್ಚಿನ ಗಮನಹರಿಸಿ ಎಂದು ಜನರಿಗೆ ಸಲಹೆ ನೀಡಿದರು.