ETV Bharat / city

ಮನೆ ಕುಸಿದು ವೃದ್ಧ ಸಾವು ಶಂಕೆ: ಶವ ಪರೀಕ್ಷೆಯಲ್ಲಿ ಖಚಿತವಾದ್ರೆ ಮಾತ್ರ ಪರಿಹಾರ ಎಂದ ಬಳ್ಳಾರಿ ಡಿಸಿ

ಬಳ್ಳಾರಿ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಮನೆ ಕುಸಿದು, ವೃದ್ಧ ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ. ಆದರೆ ವೃದ್ಧನ ಮೈಮೇಲೆ ಯಾವುದೇ ಗಾಯದ ಗುರುತುಗಳಿಲ್ಲದ ಕಾರಣ, ಮರಣೋತ್ತರ ಪರೀಕ್ಷೆ ವರದಿ ಆಧರಿಸಿ ಪರಿಹಾರ ಧನ ವಿತರಣೆ ಕುರಿತು ನಿರ್ಧರಿಸಲಾಗುವುದೆಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

ಬಳ್ಳಾರಿ ಡಿಸಿ
author img

By

Published : Sep 24, 2019, 5:46 PM IST

ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯ ಹನುಮನಹಳ್ಳಿ ಗ್ರಾಮದಲ್ಲಿಂದು ಮನೆ ಕುಸಿತದಿಂದಾಗಿ ವೃದ್ಧ ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ. ಆದರೆ ಮರಣೋತ್ತರ ಪರೀಕ್ಷೆ ವರದಿ ಆಧರಿಸಿ ಪರಿಹಾರ ಧನ ವಿತರಣೆ ಕುರಿತು ನಿರ್ಧರಿಸಲಾಗುವುದೆಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸ್ಪಷ್ಟಪಡಿಸಿದ್ದಾರೆ.

ಮೃತ ವೃದ್ಧನ ಮರಣೋತ್ತರ ಪರೀಕ್ಷೆ ಬಳಿಕ ಪರಿಹಾರದ ಕುರಿತು ನಿರ್ಧಾರವೆಂದ ಬಳ್ಳಾರಿ ಡಿಸಿ

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಮನೆ ಕುಸಿದು, ವೃದ್ಧ ಸಾವನ್ನಪ್ಪಿದ್ದಾರೆಂದು ಹೇಳಲಾಗಿದೆ. ಮನೆಯ ಕುಸಿದು ಬಿದ್ದು ಸತ್ತಿದ್ದರೆ, ಆ ವ್ಯಕ್ತಿಗೆ ಗಾಯಗಳಾಗಬೇಕಿತ್ತು. ಆದರೆ ಈ ಘಟನೆಯಲ್ಲಿ ಅದ್ಯಾವುದು ಕಂಡು ಬರುತ್ತಿಲ್ಲ. ಅಲ್ಲದೇ ಅವರಿಗೆ ಆರೋಗ್ಯ ಸರಿಯಿರಲಿಲ್ಲ ಎಂಬ ಮಾಹಿತಿಯೂ ದೊರೆತಿದೆ. ಹನುಮನಹಳ್ಳಿ ಗ್ರಾಮಕ್ಕಿಂದು ಅಧಿಕಾರಿಗಳು ಭೇಟಿ ನೀಡಿದ್ದು, ಮೃತದೇಹವನ್ನು ಹೊಸಪೇಟೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನಷ್ಟೇ ಮರಣೋತ್ತರ ಪರೀಕ್ಷೆ ವರದಿ ಬರಬೇಕಿದೆ, ಬಳಿಕ ಪರಿಹಾರ ಧನ ವಿತರಣೆಯ ಕುರಿತು ನಿರ್ಧರಿಸಲಾಗುವುದು ಎಂದು ಹೇಳಿದರು.

ಅಲ್ಲದೇ, ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಹೋಬಳಿಯ ನಾನಾ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತಗೊಂಡಿದ್ದು, ಸಾರ್ವಜನಿಕ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಕುರುಗೋಡು ತಾಲೂಕಿನ ಗೆಣಿಕೆಹಾಳ್ ಗ್ರಾಮದ ಸುತ್ತಮುತ್ತಲಿನ ಅಂದಾಜು 1,200 ಎಕರೆ ಪ್ರದೇಶ ವ್ಯಾಪ್ತಿಯ ಹೊಲ, ಗದ್ದೆಗಳು ಮಳೆಯಿಂದಾಗಿ ಜಲಾವೃತಗೊಂಡಿದ್ದು, ಅಪಾರ ಪ್ರಮಾಣ ಬೆಳೆನಷ್ಟ ಉಂಟಾಗಿರುವ ಮಾಹಿತಿ ಕೂಡ ಇದೆ. ಈ ಕುರಿತು ಕೃಷಿ ಸೇರಿದಂತೆ ಇನ್ನಿತರೆ ಇಲಾಖೆಗಳ ಅಧಿಕಾರಿಗಳಿಗೆ ಸಮೀಕ್ಷೆ ಮಾಡುವಂತೆ ಸೂಚನೆ ಡಿಸಿ ನಕುಲ್​ ತಿಳಿಸಿದರು.

Intro:ಮರಿಯಮ್ಮನಹಳ್ಳಿಯಲ್ಲಿ ವೃದ್ಧನ ಸಾವು: ಪೋಸ್ಟ್ ಮಾಟಂ ವರದಿ ಆಧರಿತ ನಿರ್ಧಾರ: ಡಿಸಿ ನಕುಲ್ ಸ್ಪಷ್ಟನೆ!
ಬಳ್ಳಾರಿ: ಜಿಲ್ಲೆಯ ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯ ಹನುಮನಹಳ್ಳಿ ಗ್ರಾಮದಲ್ಲಿಂದು ಮನೆ ಕುಸಿತದಿಂದಾಗಿ ವೃದ್ಧ ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತದೆ. ಆದರೆ, ಈ ಮನೆಯ ಕುಸಿತದಿಂದ ಆ ವ್ಯಕ್ತಿಗೆ ಗಾಯಗಳಾಗುತ್ತಿದ್ದವು. ಈ ಘಟನೆಯಲ್ಲಿ ಅದ್ಯಾವುದು ಕಂಡು ಬರುತ್ತಿಲ್ಲ. ಹೀಗಾಗಿ, ಪೋಸ್ಟ್ ಮಾಟಂ ವರದಿಯನ್ನು ಆಧರಿಸಿ ನಿರ್ಧರಿಸಲಾಗುವುದೆಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸ್ಪಷ್ಟ ಪಡಿಸಿದ್ದಾರೆ.
ಬಳ್ಳಾರಿಯ ಡಿಸಿ ಕಚೇರಿಯಲ್ಲಿಂದು ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಡಿಸಿ ನಕುಲ್ ಅವರು, ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯ ಹನುಮನಹಳ್ಳಿ ಗ್ರಾಮಕ್ಕಿಂದು ಅಧಿಕಾರಿಗಳು ಭೇಟಿ ನೀಡಿದ್ದಾರೆ. ಮೃತದೇಹವನ್ನು ಹೊಸಪೇಟೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನಷ್ಟೇ ಪೋಸ್ಟ್ ಮಾಟಂ ವರದಿ ಬರ ಬೇಕಿದೆ. ಆ ವರದಿ ಆಧಾರದ ಮೇಲೆ ಪರಿಹಾರ ಧನ ವಿತರಣೆಯ ಕುರಿತು ನಿರ್ಧರಿಸಲಾಗುವುದು ಎಂದಿದ್ದಾರೆ ಅವರು.
Body:ಅಲ್ಲದೇ, ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಹೋಬಳಿಯಿಂದ ನಾನಾ ಗ್ರಾಮಗಳಿಗೆ ಸಂಪರ್ಕ ಸೇತುವೆ ಜಲಾವೃತಗೊಂಡಿದೆ. ಅದರಿಂದ ಸಾರ್ವಜನಿಕ ಸಂಚಾರಕ್ಕೂ ಅಡ್ಡಿ ಉಂಟು ಮಾಡಿದೆ. ಕುರುಗೋಡು ತಾಲೂಕಿನ ಗೆಣಿಕೆಹಾಳ್ ಗ್ರಾಮದ ಸುತ್ತಮುತ್ತಲಿನ ಅಂದಾಜು 1200 ಎಕರೆ ಪ್ರದೇಶ ವ್ಯಾಪ್ತಿಯ ಹೊಲ, ಗದ್ದೆಗಳಲ್ಲಿ ಮಳೆಯ ನೀರು ಜಲಾವೃತ ಗೊಂಡಿದ್ದು. ಅಪಾರ ಪ್ರಮಾಣ ಬೆಳೆನಷ್ಟ ಉಂಟಾಗಿರುವ ಮಾಹಿತಿಯೂ ಕೂಡ ಇದೆ. ಹೀಗಾಗಿ, ಆ ಕುರಿತು ಕೃಷಿ ಸೇರಿದಂತೆ ಇನ್ನಿತರೆ ಇಲಾಖೆಗಳ ಅಧಿಕಾರಿಗಳಿಗೆ ಸಮೀಕ್ಷೆ ಮಾಡುವಂತೆ ಸೂಚನೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_5_DC_NAKUL_BYTE_NEWS_7203310

KN_BLY_5m_DC_NAKUL_BYTE_NEWS_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.