ಹೊಸಪೇಟೆ (ವಿಜಯನಗರ): ಕೂಡ್ಲಿಗಿಯ ರಾಷ್ಟ್ರೀಯ ಹೆದ್ದಾರಿ-50 ರಲ್ಲಿ ನಿನ್ನೆ ರಾತ್ರಿ ಅಪಘಾತವಾಗಿದ್ದು, ಗಾಯಗೊಂಡಿದ್ದವರಿಗೆ ನಟ ಅಜಯ್ ರಾವ್ ಅವರು ಪ್ರಾಥಮಿಕ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮೈಸೂರಿನಿಂದ ಹೊಸಪೇಟೆ ಕಡೆ ಹೊರಟಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಆಗಿದೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೇ ಮಾರ್ಗವಾಗಿ ಬೆಂಗಳೂರಿಗೆ ಹೋಗುತ್ತಿದ್ದ ನಟ ಅಜಯ್ ರಾವ್ ಅವರು ಹೆದ್ದಾರಿ ಸಹಾಯಕರೊಂದಿಗೆ ಗಾಯಾಳುಗಳಿಗೆ ತಮ್ಮ ಕಾರ್ನಲ್ಲಿ ಇದ್ದ ಪ್ರಥಮ ಚಿಕಿತ್ಸೆ ಪೆಟ್ಟಿಗೆಯಿಂದ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಚುರುಕುಗೊಂಡ ನೈರುತ್ಯ ಮುಂಗಾರು.. ಇಂದು, ನಾಳೆ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ
ನಂತರ ಹೆದ್ದಾರಿ ಸಹಾಯಕರೊಂದಿಗೆ ಚರ್ಚೆ ಮಾಡಿ ಹೆದ್ದಾರಿ ಸಹಾಯಕ ಗ್ರೂಪ್ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಹೆದ್ದಾರಿ ಸಹಾಯಕರಾದ ದಯಾನಂದ ಸಜ್ಜನ್, ಶ್ರೀಕಂಠ ಸ್ವಾಮಿ, ಟೀ ಸ್ಟಾಲ್ ಬಾಬು, ಸಕಲಾಪುರದಹಟ್ಟಿ ಬಸಣ್ಣ, ಪೆಟ್ರೋಲ್ ಬಂಕ್ ಬೀಮಣ್ಣ ಪಿಎಸೈ ತಿಮ್ಮಣ್ಣ ಚಾಮನೂರು ಇನ್ನಿತರರಿದ್ದರು.