ETV Bharat / city

ಯಡಿಯೂರಪ್ಪರ ಸ್ಥಾನ ಬದಲಾವಣೆಗೆ ಒಳಸಂಚು : ಅಭಿನವ ಹಾಲ ಸ್ವಾಮೀಜಿ

author img

By

Published : Jul 20, 2021, 6:00 PM IST

ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಬೇಕು ಎಂದು ಕುತಂತ್ರ ನಡೆಯುತ್ತಿದೆ. ಇದನ್ನು ಅಖಂಡವಾಗಿ ವಿರೋಧ ಮಾಡುತ್ತೇವೆ. ಬಿಜೆಪಿ ಸರ್ಕಾರ ರಚನೆಯಲ್ಲಿ ಬಿಎಸ್​ವೈ ಅವರ ತ್ಯಾಗ ಹಾಗೂ ಪರಿಶ್ರಮವಿದೆ ಎಂಬುದು ರಾಜ್ಯದ ಜನತೆಗೆ ಗೊತ್ತು. ಸಮಾಜ ಇಬ್ಭಾಗ ಮಾಡುವ ಕೆಲಸ ನಡೆಯುತ್ತಿದೆ ಎಂದು ಅಭಿನವ ಹಾಲ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

master-plan-made-for-change-bs-yadiyurappa
ಅಭಿನವ ಹಾಲ ಸ್ವಾಮೀಜಿ

ಹೊಸಪೇಟೆ(ವಿಜಯನಗರ): ಸಮಾಜದ ಮುಖವಾಣಿಯಾಗಿ ನಾನು ಮಾತನಾಡುತ್ತಿರುವೆ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಬದಲಾವಣೆ ಮಾಡುತ್ತಿರುವುದಕ್ಕೆ ನಮ್ಮ ಸಮಾಜದ ವಿರೋಧವಿದೆ ಎಂದು ಹೂವಿನ ಹಡಗಲಿಯ ಅಭಿನವ ಹಾಲ ಸ್ವಾಮೀಜಿ ಹೇಳಿದರು.

ಸಿಎಂ ಬದಲಾವಣೆ ಕುರಿತು ಹೂವಿನ ಹಡಗಲಿಯಲ್ಲಿ ಮಾತನಾಡಿದ ಶ್ರೀಗಳು, ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಬೇಕು ಎಂದು ಕುತಂತ್ರ ನಡೆಯುತ್ತಿದೆ. ಇದನ್ನು ಅಖಂಡವಾಗಿ ವಿರೋಧಿಸುತ್ತೇವೆ. ಬಿಜೆಪಿ ಸರ್ಕಾರ ರಚನೆಯಲ್ಲಿ ಬಿಎಸ್​ವೈ ಅವರ ತ್ಯಾಗ ಹಾಗೂ ಪರಿಶ್ರಮವಿದೆ ಎಂಬುದು ರಾಜ್ಯದ ಜನತೆಗೆ ಗೊತ್ತು.

ಯಡಿಯೂರಪ್ಪರ ಸ್ಥಾನ ಬದಲಾವಣೆಗೆ ಒಳಸಂಚು

ಸಮಾಜ ಇಬ್ಭಾಗ ಮಾಡುವ ಕೆಲಸ ನಡೆಯುತ್ತಿದೆ. ದಲಿತ ನಾಯಕ ಗೋವಿಂದ ಕಾರಜೋಳ ಹಾಗೂ ಈಶ್ವರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ‌ ಮಾಡಲಿ. ವೀರಶೈವ ಹಾಗೂ ಲಿಂಗಾಯತ ಸಮಾಜವನ್ನು ಒಡೆಯುವಂತ ಕೆಲಸ ನಡೆಯುತ್ತಿದೆ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.

ನಾಲ್ಕು ಜನರಿಂದ ಸಿಎಂ ಬದಲಾವಣೆ ಕುತಂತ್ರ

ಯುವಕರನ್ನು ನಾಚಿಸುವಂತೆ ಯಡಿಯೂರಪ್ಪ ಅವರು ಕೆಲಸ ಮಾಡುತ್ತಿದ್ದಾರೆ. ಅದರೂ ಅವರನ್ನು ಪದತ್ಯಾಗವನ್ನು ಮಾಡಿಸಲಾಗುತ್ತಿದೆ. ಇದನ್ನು ಸಮಾಜ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ. ವೀರಶೈವ ಹಾಗೂ ಲಿಂಗಾಯತ ಸಮುದಾಯವನ್ನು ಹೊಡೆದವರು ದುಸ್ಥಿತಿಗೆ ಬಂದಿದ್ದಾರೆ. ನಾಲ್ಕು ಜನರಿಂದ ಯಡಿಯೂರಪ್ಪ ಅವರನ್ನು ಬೇರ್ಪಡಿಸುವ ಕಾರ್ಯವಾಗುತ್ತಿದೆ ಎಂದು ದೂರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.