ETV Bharat / city

ಬಳ್ಳಾರಿ ಪಾಲಿಕೆ ಚುನಾವಣೆ: ಶೇ 57.67ರಷ್ಟು ಮತದಾನ

ಕೊರೊನಾತಂಕದ ನಡುವೆಯೂ ಮಂಗಳವಾರ ಬಳ್ಳಾರಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆದಿದ್ದು, ಶೇ.57.67ರಷ್ಟು ಮತದಾನ ದಾಖಲಾಗಿದೆ.

bellary
ಬಳ್ಳಾರಿ ಪಾಲಿಕೆ ಚುನಾವಣೆ: ಶೇಕಡ 57.67ರಷ್ಟು ಮತದಾನ
author img

By

Published : Apr 28, 2021, 9:14 AM IST

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಗೆ ಚುನಾವಣೆಗೆ ಮತದಾನ ಮುಕ್ತಾವಾಗಿದೆ. ಮಹಾಮಾರಿ ಕೊರೊನಾ ಸೋಂಕು ಹರಡುವ ಆತಂಕದಿಂದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬಾರದ ಹಿನ್ನೆಲೆಯಲ್ಲಿ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ವೋಟಿಂಗ್ ಆಗಿಲ್ಲ.

ಪಾಲಿಕೆ ವ್ಯಾಪ್ತಿಯಲ್ಲಿ 39 ವಾರ್ಡ್​ಗಳಿದ್ದು, 338 ಮತಗಟ್ಟೆಗಳನ್ನು ರಚನೆ ಮಾಡಲಾಗಿತ್ತು. ಮತದಾನ ಪ್ರಕ್ರಿಯೆಯಲ್ಲಿ ಕೋವಿಡ್​ ಕಠಿಣ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಿದ್ದರೂ ಹಲವೆಡೆ ನಾಗರಿಕರು ಮಾಸ್ಕ್​ ಧರಿಸದೇ, ಸಾಮಾಜಿಕ ಅಂತರವನ್ನೂ ಕಾಪಾಡದೇ ಮತದಾನ ಮಾಡಿರುವುದು ಕಂಡುಬಂತು.

ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಮಾಜಿ ಶಾಸಕ ಸೂರ್ಯ ನಾರಾಯಣ ರೆಡ್ಡಿ, ಮಾಜಿ ಸಂಸದರಾದ ಸಣ್ಣಫಕ್ಕೀರಪ್ಪ, ಜೆ.ಶಾಂತಾ, ಎಂಎಲ್​ಸಿಗಳಾದ ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ, ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಸಮಿತಿ (ನಗರ) ಅಧ್ಯಕ್ಷ ಜಿ.ಎಸ್.ಮಹಮ್ಮದ ರಫೀಕ್ ,‌ಕಾಂಗ್ರೆಸ್ ಯುವ ಮುಖಂಡ ಜೆ.ಎಸ್.ಆಂಜನೇಯಲು ಸೇರಿ ಇನ್ನಿತರೆ ಮುಖಂಡರು ಮತದಾನ ಮಾಡಿದ್ದಾರೆ.

ಶೇ. 57.67ರಷ್ಟು ಮತದಾನ:

ಪಾಲಿಕೆ ಚುನಾವಣೆಯಲ್ಲಿ ಶೇ.57.67ರಷ್ಟು ಮಾತ್ರ ಮತದಾನವಾಗಿದೆ. ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸಾಮಾನ್ಯವಾಗಿ ಶೇ. 70ಕ್ಕಿಂತಲೂ ಹೆಚ್ಚಿನ ಮತದಾನವಾಗುತ್ತಿತ್ತು. ಆದರೆ, ಈ ಬಾರಿ ನಗರದಲ್ಲಿ ಕೊರೊನಾ ಸೋಂಕು ತೀವ್ರ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವುದರಿಂದ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕಿದ್ದಾರೆ.

ಹಣ ಹಂಚಿಕೆ ಆರೋಪ:

ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಆಯಾ ಪಕ್ಷದ ಅಭ್ಯಥಿಗಳು ಮತ ಹಾಕುವಂತೆ ಆಮಿಷ ಒಡ್ಡಿ, ಹಣ ಹಂಚಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಚುನಾವಣೆಗೂ ಮುನ್ನ ದಿನ ಹಾಗೂ ಮತದಾನ ದಿನದಂದು ಹಣಹಂಚಿಕೆ ಮಾಡಲಾಗಿದೆ. ಕೆಲ ವಾರ್ಡ್​ಗಳಲ್ಲಿ ಒಂದು ಮತಕ್ಕೆ 4 ಸಾವಿರ ರೂ.ವರೆಗೆ ಹಣ ನೀಡಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಕೋವಿಡ್​ ಕುರಿತು ತುಂಬಾ ಜಾಗ್ರತೆ ವಹಿಸಿ: ಶಾಸಕರಿಗೆ ಸಲಹೆ ನೀಡಿದ ಸ್ಪೀಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.