ETV Bharat / city

ಗಣಿನಾಡಿಗೆ ಕೋವಿಡ್​ ಲಗ್ಗೆ.. ಒಂದೇ ಕುಟುಂಬದ ಮೂವರಿಗೆ ಕೊರೊನಾ.. - ಕೊವಿಡ್​​-19

ಸೋಂಕಿತರು ಯಾವುದೇ ವಿದೇಶಿ ಸಂಬಂಧ ಹೊಂದಿಲ್ಲ. ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿದ್ದರು. ಕಳೆದ ಮೂರು ದಿನಗಳ ‌ಹಿಂದೆ‌ ಹೊಸಪೇಟೆಗೆ ಬಂದಿದ್ರು. ಬಂದ ಕೂಡಲೇ ಸ್ಕ್ರೀನಿಂಗ್ ಮಾಡಲಾಗಿತ್ತು.

3-new-corona-positive-cases-find-in-bellary
ಒಂದೇ ಕುಟುಂಬ ಮೂವರಲ್ಲಿ ಕಾಣಿಸಿಕೊಂಡ ಕೊರೊನಾ
author img

By

Published : Mar 30, 2020, 9:46 PM IST

Updated : Mar 30, 2020, 11:51 PM IST

ಬಳ್ಳಾರಿ: ಜಿಲ್ಲೆಯ ಹೊಸಪೇಟೆ ನಗರದಲ್ಲಿ ಒಂದೇ ಕುಟುಂಬಕ್ಕೆ ಸೇರಿದ ಮೂವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಎರಡು ದಿನದ ಹಿಂದಷ್ಟೇ ಮೂವರ ಗಂಟಲು ಮತ್ತು ರಕ್ತದ ಮಾದರಿಯನ್ನು ಪರೀಕ್ಷೆ ಕಳುಹಿಸಲಾಗಿತ್ತು. ಸದ್ಯ ವರದಿ ಬಂದಿದ್ದು ಸೋಂಕು ತಗುಲಿರುವುದು ಖಚಿತವಾಗಿದೆ ಎಂದು ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ತಿಳಿಸಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಮೂವರನ್ನು ಜಿಲ್ಲಾಸ್ಪತ್ರೆಯ ಪ್ರತ್ಯೇಕ ವಾರ್ಡ್​ನಲ್ಲಿರಿಸಲಾಗಿತ್ತು. ಸದ್ಯ ಮೂವರ ವರದಿ ಬಂದಿದ್ದು ಕೋವಿಡ್​ ಸೋಂಕು ತಗುಲಿರುವುದು ದೃಢಪಟ್ಟಿದೆ. ಮುಂಜಾಗ್ರತಾ ಕ್ರಮವಾಗಿ ಇನ್ಮುಂದೆ ಹೊಸಪೇಟೆ ನಗರದಲ್ಲಿ ವಾಹನ ಸಂಚಾರವಿರಲ್ಲ. ದಿನಸಿ ಖರೀದಿಗೂ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಡಿಸಿ ನಕುಲ್ ಎಚ್ಚರಿಕೆ ನೀಡಿದರು.

ಸೋಂಕಿತರ ಚಲನವಲನ ಹೀಗಿತ್ತು : ಸೋಂಕಿತರು ಯಾವುದೇ ವಿದೇಶಿ ಸಂಬಂಧ ಹೊಂದಿಲ್ಲ. ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿದ್ದರು. ಕಳೆದ ಮೂರು ದಿನಗಳ ‌ಹಿಂದೆ‌ ಹೊಸಪೇಟೆಗೆ ಬಂದಿದ್ರು. ಬಂದ ಕೂಡಲೇ ಸ್ಕ್ರೀನಿಂಗ್ ಮಾಡಲಾಗಿತ್ತು. ಎರಡು ದಿನಗಳ ಹಿಂದೆಯೇ ಬಳ್ಳಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಲೇ ಗಂಟಲು ಮತ್ತು ರಕ್ತದ ಮಾದರಿ ಟೆಸ್ಟ್‌ಗೆ ಕಳುಹಿಸಲಾಗಿತ್ತು. ಇವತ್ತು ವರದಿ ಬಂದ‌ ಬಳಿಕ ಜಿಲ್ಲಾಧಿಕಾರಿ ಅಧಿಕೃತ ಘೋಷಣೆ ಮಾಡಿದ್ದಾರೆ.

Last Updated : Mar 30, 2020, 11:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.