ಬಳ್ಳಾರಿ: ಬಳ್ಳಾರಿ ವಿಭಾಗದ ಮೂರು ಕೆಎಸ್ಆರ್ಟಿಸಿ ಬಸ್ಗಳಿಗೆ ಸಿಬ್ಬಂದಿ ಕುಟುಂಬಸ್ಥರು ಕಲ್ಲೆಸೆದು ಗ್ಲಾಸ್ ಪುಡಿಗಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ರಾಜ್ಯವ್ಯಾಪಿ ಕರೆ ನೀಡಿದ್ದ ಸಾರಿಗೆ ನೌಕರರ ಮುಷ್ಕರದ ನಡುವೆಯೂ ಅಲ್ಲಲ್ಲಿ ಬಸ್ ಸಂಚಾರ ನಡೆಯುತ್ತಿದೆ. ನಿನ್ನೆ ಮಧ್ಯಾಹ್ನ ಬಳ್ಳಾರಿ ವಿಭಾಗದ ಗುತ್ತಿ-ಕರ್ನೂಲು ಮಾರ್ಗಕ್ಕೆ ತೆರಳುವ ಬಸ್ನ ಮುಂಭಾಗಕ್ಕೆ, ಬಳ್ಳಾರಿ - ಗುಂತಕಲ್ಲು, ಬಳ್ಳಾರಿ - ಕಡಪಕ್ಕೆ ಸಂಚಾರ ಬೆಳೆಸಿದ ಬಸ್ನ ಹಿಂಭಾಗಕ್ಕೆ ಕಲ್ಲಿನಿಂದ ಹೊಡೆದು ಗಾಜು ಧ್ವಂಸ ಮಾಡಿದ್ದಾರೆ.
ಈಟಿವಿ ಭಾರತದೊಂದಿಗೆ ಕೆ.ಎಸ್.ಆರ್.ಟಿ.ಸಿಯ ಚಾಲಕರೋರ್ವರು, ಒತ್ತಾಯ ಪೂರ್ವಕವಾಗಿ ಅಧಿಕಾರಿಗಳು ಮನೆಗಳಿಗೆ ಬಂದು ಕೆಲಸಕ್ಕೆ ಹೋಗಿ ಇಲ್ಲದಿದ್ದರೆ ಬೇರೆ ಕಡೆ ವರ್ಗಾವಣೆ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಾರೆ. ಕೆಲಸಕ್ಕೆ ಬಂದರೆ ಬಸ್ನ ಗ್ಲಾಸ್ ಒಡೆದು ಹಾಕಿದ್ದಾರೆ. ಗಾಜು ಒಡೆದ ಕಾರಣ ಇದರ ಹಣವನ್ನು ಚಾಲಕನೇ ಕಟ್ಟಬೇಕು ಎನ್ನುತ್ತಿದ್ದಾರೆ. ನಾವು ಬಸ್ ಚಾಲನೆ ಮಾಡುವಾಗ ಪೊಲೀಸರು ರಕ್ಷಣೆ ನೀಡುತ್ತಾರಾ? ಎಂದು ಪ್ರಶ್ನಿಸಿದ್ದಾರೆ.