ಬೆಳಗಾವಿ: ನಿನ್ನೆ ಇಲ್ಲಿನ ಹಿಂಡಲಗಾ ಗಣಪತಿ ದೇಗುಲ ಬಳಿಯ ಕೆರೆಗೆ ಹಾರಿ ಇಬ್ಬರು ಮಕ್ಕಳ ಜೊತೆಗೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದರು. ನಿನ್ನೆ ಮಹಿಳೆ ಕೃಷಾ ಕೇಶವಾನಿ (36) ಹಾಗೂ ಮಗ ಭಾವೀರ್ (4) ಶವ ಪತ್ತೆಯಾಗಿತ್ತು. ಮತ್ತೊಬ್ಬ ಬಾಲಕನ ಮೃತದೇಹ ಇಂದು ಪತ್ತೆಯಾಗಿದೆ.
ನಾಪತ್ತೆಯಾಗಿದ್ದ ವೀರೇನ್ ಕೇಶವಾನಿ (7)ಗಾಗಿ ಎಸ್‌ಡಿಆರ್‌ಎಫ್ ಸಿಬ್ಬಂದಿ ಶೋಧ ಕಾರ್ಯ ಮುಂದುವರೆಸಿದ್ದರು. ಇದೀಗ ಆತನ ಮೃತೇಹವನ್ನು ಹೊರತೆಗೆದಿದ್ದು, ಶಾಲಾ ಸಮವಸ್ತ್ರದಲ್ಲೇ ಶವ ಪತ್ತೆಯಾಗಿದೆ. ಬಾಲಕನ ಮೃತದೇಹವನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ. ಶವಾಗಾರದ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ಬೆಳಗಾವಿ: ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ.. ಕಾರಣ?
ನಿನ್ನೆ ಗಣಪತಿ ದೇವಾಲಯಕ್ಕೆ ಮಕ್ಕಳ ಜೊತೆಗೆ ಕೃಷಾ ಆಗಮಿಸಿದ್ದರು. ಬಳಿಕ ದೇಗುಲ ಎದುರಿನ ಕೆರೆಗೆ ಮಕ್ಕಳನ್ನು ಎಸೆದಿರುವ ಕೃಷಾ ಬಳಿ ತಾನೂ ಕೆರೆಗೆ ಹಾರಿದ್ದರು. ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.