ಅಥಣಿ (ಬೆಳಗಾವಿ) : ತಾಲೂಕಿನ ರೈತರೊಬ್ಬರ ತೋಟದಲ್ಲಿದ್ದ ಹತ್ತು ವರ್ಷಗಳ ಹಳೆಯ ಬೋರ್ವೆಲ್ನಿಂದ ಇದ್ದಕ್ಕಿದ್ದಂತೆ ನೂರು ಅಡಿಗಳ ಎತ್ತರದಲ್ಲಿ ನೀರು ಚಿಮ್ಮಿದೆ.
ತಾಲೂಕಿನ ಝುಂಜರವಾಡ ಗ್ರಾಮದ ಮಹಾವೀರ ಹಳಿಂಗಳಿ ಎಂಬ ರೈತನ ತೋಟದಲ್ಲಿದ್ದ ಹತ್ತು ವರ್ಷಗಳ ಹಳೆಯ ಬೋರ್ವೆಲ್ನಿಂದ ನಿನ್ನೆ ಮಧ್ಯಾಹ್ನ ಒಂದು ಗಂಟೆಯ ಆಸುಪಾಸಿನಲ್ಲಿ ಭಾರಿ ಸದ್ದಿನೊಂದಿಗೆ ನೀರು ಚಿಮ್ಮಿದ್ದು,ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ.
ಇದನ್ನ ನೋಡಲು ಸುತ್ತಮುತ್ತಲಿನ ಜನರು ತಂಡೋಪತಂಡವಾಗಿ ಆಗಮಿಸಿದ್ದು, ಅರ್ಧ ಗಂಟೆಗಳ ಕಾಲ ನೀರು ಚಿಮ್ಮಿದೆ.