ETV Bharat / city

ಸಚಿವ ಸ್ಥಾನದ ಭರವಸೆ: ಮುನಿಸು ಮರೆತು ಸಿಎಂ ಭೇಟಿಯಾದ ಕತ್ತಿ!

ಸಚಿವ ಸ್ಥಾನ ಕೈತಪ್ಪಿದ್ದ ನಂತರ ಸಿಎಂ ಜೊತೆ ಮುನಿಸಿಕೊಂಡಿದ್ದ ಬಿಜೆಪಿ ಹಿರಿಯ ನಾಯಕ ಉಮೇಶ್ ಕತ್ತಿಗೆ ಸಚಿವ ಸ್ಥಾನ ನೀಡುವ ಭರವಸೆ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಸಿಎಂ ಯಡಿಯೂರಪ್ಪ
author img

By

Published : Oct 16, 2019, 9:42 AM IST

Updated : Oct 16, 2019, 2:40 PM IST

ಬೆಳಗಾವಿ: ಸಚಿವ ಸ್ಥಾನ ಕೈತಪ್ಪಿದ್ದ ನಂತರ ಸಿಎಂ ಜೊತೆ ಮುನಿಸಿಕೊಂಡಿದ್ದ ಬಿಜೆಪಿ ಹಿರಿಯ ನಾಯಕ ಉಮೇಶ್ ಕತ್ತಿಗೆ ಸಚಿವ ಸ್ಥಾನ ನೀಡುವ ಭರವಸೆ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಮುನಿಸು ಮರೆತು ಸಿಎಂ ಭೇಟಿಗೆ ಬಂದ ಕತ್ತಿ

ಎರಡು ತಿಂಗಳ ಹಿಂದೆ ಸಚಿವ ಸಂಪುಟ ವಿಸ್ತರಣೆ ವೇಳೆ ಬೆಳಗಾವಿಯ ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ನೀಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಹಿರಿಯರನ್ನು ಕಡೆಗಣಿಸಿ, ಸೋತ ಲಕ್ಷ್ಮಣ ಸವದಿಗೆ ಸಚಿವ ಸ್ಥಾನದ ಜೊತೆಗೆ ಡಿಸಿಎಂ ಹುದ್ದೆ ಕೂಡ ನೀಡಿದ್ದು, ಪಕ್ಷದ ಕೆಲವು ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಇಷ್ಟೇ ಅಲ್ಲದೆ ಉಮೇಶ್ ಕತ್ತಿ ಕೂಡ ಪಕ್ಷದಿಂದ ದೂರ ಉಳಿದಿದ್ದರು.

ನಿನ್ನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಳಗಾವಿಗೆ ಆಗಮಿಸಿದ ಹಿನ್ನೆಲೆ ಕತ್ತಿ ಅವರನ್ನು ಹೋಟೆಲ್​ನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಡಿಸೆಂಬರ್ ಒಳಗೆ ಕತ್ತಿ ಅವರಿಗೆ ದೊಡ್ಡ ಹುದ್ದೆ ನೀಡುವ ಭರವಸೆ ನೀಡಿದ ಬೆನ್ನಲ್ಲೇ ಉಮೇಶ್ ಕತ್ತಿ ತಮ್ಮ ಮುನಿಸು ಮರೆತು ಯಡಿಯೂರಪ್ಪ ತಂಗಿದ್ದ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

Intro:ಸಚಿವ ಸ್ಥಾನದ ಭರವಸೆ : ಮುನಿಸು ಮರೆತು ಸಿಎಂ ಭೇಟಿಗೆ ಬಂದ ಕತ್ತಿ

ಬೆಳಗಾವಿ : ಸಚಿವ ಸ್ಥಾನ ಕೈತಪ್ಪಿದ್ದ ನಂತರ ಸಿಎಂ ಜೊತೆ ಮುನಿಸಿಕೊಂಡಿದ್ದ ಬಿಜೆಪಿ ಹಿರಿಯ ನಾಯಕ ಉಮೇಶ್ ಕತ್ತಿಗೆ, ನಿನ್ನೆ ಸಿಎಂ ಯಡಿಯೂರಪ್ಪ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದ ಬೆನ್ನಲ್ಲೇ ಮುನಿಸು ಈಗ ಸಿಎಂ ಭೇಟಿಗೆ ಆಗಮಿಸಿದ್ದಾರೆ.

Body:ಕಳೆದ ಎರಡೂ ತಿಂಗಳ ಹಿಂದೆ ಸಚಿವ ಸಂಪುಟ ವಿಸ್ತರಣೆ ವೇಳೆ ಬೆಳಗಾವಿಯ ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ನೀಡುತ್ತಾರೆ ಎಂಬ ಊಹೆ ಇತ್ತು. ಆದರೆ ಹಿರಿಯರನ್ನು ಕಡೆಗಣಿಸಿ, ಸೋತ ಲಕ್ಷ್ಮಣ ಸವದಿಗೆ ಸಚಿವ ಸ್ಥಾನದ ಜೊತೆ ಡಿಸಿಎಂ ಹುದ್ದೆ ಕೂಡಾ ನೀಡಿದ್ದು ಪಕ್ಷದ ಕೆಲವು ನಾಯಕರಲ್ಲಿ ಅಸಮಾಧಾನಕ್ಕೆ ಕೂಡಾ ಕಾರಣವಾಗಿತ್ತು. ಇಷ್ಟೇ ಅಲ್ಲದೆ ಉಮೇಶ್ ಕತ್ತಿ ಕೂಡಾ ಪಕ್ಷದಿಂದ ದೂರ ಉಳಿದಿದ್ದರು.

Conclusion:ನಿನ್ನೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬೆಳಗಾವಿಗೆ ಆಗಮಿಸಿದ ಹಿನ್ನಲೆ ಉಮೇಶ್ ಕತ್ತಿ ಅವರ ಹೊಟೇಲ್ ಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಜೊತೆಗೆ ಡಿಸೆಂಬರ್ ಒಳಗೆ ಕತ್ತಿ ಅವರಿಗೆ ದೊಡ್ಡ ಹುದ್ದೆ ನೀಡುವ ಭರವಸೆ ನೀಡಿದ ಬೆನ್ನಲ್ಲೇ ಈಗ ಉಮೇಶ್ ಕತ್ತಿ ತಮ್ಮ ಮುನಿಸು ಮರೆತು ಸಧ್ಯ ಯಡಿಯೂರಪ್ಪ ತಂಗಿದ್ದ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ವಿನಾಯಕ ಮಠಪತಿ
ಬೆಳಗಾವಿ

Last Updated : Oct 16, 2019, 2:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.